ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 06, 2017
ನೋಟ್ ನಿಷೇಧ: ಸುಮಾರು 20 ಸಾವಿರ ಐಟಿ ರಿಟನ್ಸರ್್ ಕುರಿತು ವಿಸ್ತೃತ ತನಿಖೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ನವೆಂಬರ್ 8ರಂದು 500 ಹಾಗೂ 1000 ರುಪಾಯಿ ನೋಟ್ ಗಳನ್ನು ನಿಷೇಧಿಸಿದ ನಂತರ ಸಲ್ಲಿಕೆಯಾದ ಆದಾಯ ತೆರಿಗೆ ರಿಟನ್ಸರ್್ ಪೈಕಿ 20, 572 ರಿಟನ್ಸರ್್ ಕುರಿತು ವಿಸ್ತೃತ ತನಿಖೆ ನಡೆಸಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ತೆರಿಗೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಸುಮಾರು ಒಂದು ಲಕ್ಷ ಮಂದಿಯನ್ನು 'ಹೈ ರಿಸ್ಕ್' ಪಟ್ಟಿಗೆ ಸೇರಿಸಿದೆ ಎಂದು ಅವರು ಹೇಳಿದ್ದಾರೆ.
ಮೂಲಗಳ ಪ್ರಕಾರ, 20, 572 ಐಟಿ ರಿಟನ್ಸರ್್ ಗಳಲ್ಲಿ ನೋಟ್ ನಿಷೇಧಕ್ಕೂ ಮುನ್ನ ಮತ್ತು ನೋಟ್ ನಿಷೇಧದ ನಂತರ ಭಾರಿ ವ್ಯತ್ಯಾಸ ಕಂಡು ಬಂದಿದ್ದು, ಆ ಕುರಿತು ವಿಸ್ತೃತ ತನಿಖೆಗೆ ಇಲಾಖೆ ನಿರ್ಧರಿಸಿದೆ.
ನೋಟು ನಿಷೇಧ ಬಳಿಕ ಅಂದರೆ ಕಳೆದ ಜನವರಿ 31ರಿಂದ ಕೇಂದ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆಪರೇಷನ್ ಕ್ಲೀನ್ ಮನಿ ಕಾಯರ್ಾಚರಣೆ ಆರಂಭಿಸಿದ್ದು, ಈ ಕಾಯರ್ಾಚರಣೆಯಲ್ಲಿ ಶಂಕಾಸ್ಪದ ವಹಿವಾಟುದಾರರು ಮತ್ತು ನೋಟು ನಿಷೇಧ ಬಳಿಕ 2 ಲಕ್ಷಕ್ಕಿಂತ ಅಧಿಕ ಹಣವನ್ನು ಬ್ಯಾಂಕ್ ಗಳಿಗೆ ಠೇವಣಿ ಮಾಡಿದವರ ಮೇಲೆಯೂ ನಿಗಾ ಇರಿಸಿದ್ದಾರೆ.