ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 06, 2017
ಪಾದಾರ್ಪಣೆ ಪಂದ್ಯದಲ್ಲಿ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಮೊಹಮ್ಮದ್ ಸಿರಾಜ್!
ರಾಜ್ಕೋಟ್: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದ ಮೂಲಕ ಹೈದರಾಬಾದ್ ನ ಆಟೋ ಚಾಲಕನ ಮಗ ಮೊಹಮ್ಮದ್ ಸಿರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಆನಂದಬಾಷ್ಪ ಸುರಿಸಿದರು.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಸಿರಾಜ್ ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಅವರಿಂದ ಭಾರತ ಕ್ಯಾಪ್ ಸ್ವೀಕರಿಸಿದರು. ಸಿರಾಜ್ ಭಾರತ ಪರ ಟಿ20 ಕ್ರಿಕೆಟ್ ಆಡಿದ 71ನೇ ಆಟಗಾರ ಎನಿಸಿಕೊಂಡಿದ್ದಾರೆ.
ರಾಷ್ಟ್ರಗೀತೆಯನ್ನು ಎದೆಯುಬ್ಬಿಸಿದ ಹಾಡಿದ ನಂತರ ಕಣ್ಣೀರಿಟ್ಟರು ಈ ದೃಶ್ಯ ಅಭಿಮಾನಿಗಳ ಮನಸೆಳೆಯಿತು. ಅವರು ಕಣ್ಣೀರಿಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾದಾರ್ಪಣೆ ಪಂದ್ಯದಲ್ಲಿ ಸಿರಾಜ್ ಚೊಚ್ಚಲ ವಿಕೆಟ್ ಪಡೆದರು. ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮಸನ್ ಅವರನ್ನು ಔಟ್ ಮಾಡಿದರು. ಇನ್ನು ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್ 40 ರನ್ ಗಳಿಂದ ಪಂದ್ಯದಲ್ಲಿ ಜಯಗಳಿಸಿದೆ. ಮೂರು ಟಿ20 ಪಂದ್ಯಗಳ ಪೈಕಿ ಉಭಯ ತಂಡಗಳು 1-1 ಅಂತರದಿಂದ ಸಮಬಲ ಸಾಧಿಸಿವೆ.