ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ಕೃಷಿಕರಿಗೆ ವಿದ್ಯುತ್ ಬಿಲ್-ಆತಂಕದಲ್ಲಿ ಜಿಲ್ಲೆಯ ಕೃಷಿಕರು
ಜಿಲ್ಲಾಧಿಕಾರಿಗೆ ಹಷರ್ಾದ್ ವಕರ್ಾಡಿ ಮನವಿ
ಮಂಜೇಶ್ವರ: ಕೃಷಿ ಇಲಾಖೆಯು 2013ರಿಂದ ವಿದ್ಯುತ್ ಇಲಾಖೆಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ವಿದ್ಯುತ್ ಇಲಾಖೆ ಕೃಷಿಕರು ವಿದ್ಯುತ್ ಬಿಲ್ ಪಾವತಿಸುವಂತೆ ಒತ್ತಡ ಹೇರಿರುವುದು ಖಂಡನೀಯವೆಂದು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ತಿಳಿಸಿದ್ದಾರೆ.
ಕೃಷಿಕರಿಗೆ ಉಚಿತ ವಿದ್ಯುತ್ ಸಂಪರ್ಕ ದಶಕಗಳಿಂದ ಅಸ್ತಿತ್ವದಲ್ಲಿದ್ದು, ಕೃಷಿ ಭವನಗಳ ಮೂಲಕ ವಿದ್ಯುತ್ ಇಲಾಖೆಗೆ ಬಿಲ್ ವಾವತಿಯಾಗುತ್ತಿತ್ತು. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಕೃಷಿ ಇಲಾಖೆ ವಿದ್ಯುತ್ ಇಲಾಖೆಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಕೃಷಿಕರಿಗೆ ವಿದ್ಯುತ್ ಇಲಾಖೆ ಹಣ ಪಾವತಿಸುವಂತೆ ಬಿಲ್ ನೀಡಿದ್ದು, ವಾವತಿಸದಿದ್ದರೆ ವಿದ್ಯುತ್ ಸಂಪರ್ಕ ವಿಚ್ಛೇದಿಸುವ ಮುನ್ಸೂಚನೆಯನ್ನೂ ನೀಡಿದೆ. ಕೃಷಿ ಇಲಾಖೆಯ ನಿಲ್ರ್ಯಕ್ಷದಿಂದಾಗಿ ಕೃಷಿಕರು ಇದೀಗ ಕಂಗಾಲಾಗಿದ್ದು, ಬೇಸಿಗೆ ಕಾಲದಲ್ಲಿ ಕೃಷಿಕರು ತೀವ್ರ ಸಮಸ್ಯೆಗೀಡಾಗಲಿದ್ದು, ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕ ವಿಚ್ಛೇದಿಸದಂತೆ ಹಷರ್ಾದ್ ವಕರ್ಾಡಿಯವರು ಮಂಗಳವಾರ
ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.