ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
2017 ಕನರ್ಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ
ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ಸಾಧನೆಗೈದ 40 ಪತ್ರಕರ್ತರ ಪಟ್ಟಿ ಪ್ರಕಟ
ಬೆಂಗಳೂರು: 2017ನೇ ಸಾಲಿನ ಕನರ್ಾಟಕ ಮಾಧ್ಯಮ ಅಕಾಡೆಮಿ ವಾಷರ್ಿಕ ಪ್ರಶಸ್ತಿ ಪ್ರಕಟವಾಗಿದ್ದು. ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ಸಾಧನೆಗೈದ 40 ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕನರ್ಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಎಂ ಸಿದ್ದರಾಜು ಅವರ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಒಟ್ಟು 40 ಮಂದಿಯನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ ತಲಾ 20 ಸಾವಿರ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
2017ನೇ ಸಾಲಿನ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡಲಾಗುವ ಆಂದೋಲನ ಪ್ರಶಸ್ತಿ ಮತ್ತು ಮೂಕನಾಯಕ ಪ್ರಶಸ್ತಿಗೆ ಅಭಿಮಾನಿ ಸಂಸ್ಥೆಯ ಅರಗಿಣಿ ಪತ್ರಿಕೆ ಭಾಜನವಾಗಿದೆ. ಈ ಪತ್ರಿಕೆಗೆ 10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ನೀಡಲಾಗುತ್ತಿದೆ.
ಅಂತರಂಗ ಸುದ್ದಿ ಪತ್ರಿಕೆಯ ಮಾಳಪ್ಪ ಅಡಸಾರೆ, ಕನರ್ಾಟಕ ಸಂಧ್ಯಾಕಾಲ ಪತ್ರಿಕೆಯ ಶಿವಲಿಂಗಪ್ಪ, ರಾಯಚೂರು ವಾಣಿಯ ಶಿವಪ್ಪ ಮಡಿವಾಳ, ಜನಕೂಗು ಪತ್ರಿಕೆಯ ದತ್ತು ಸಕರ್ಿಲ್ ಸೇರಿದಂತೆ ಒಟ್ಟು 40 ಮಂದಿ ಪತ್ರಕರ್ತರಿಗೆ ಪ್ರಶಸ್ತಿ ಪ್ರಕಟ ಮಾಡಲಾಗಿದೆ.