ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 30, 2017
ಕೊಳ್ಳಿಮುಹೂರ್ತ
ಬದಿಯಡ್ಕ : ಬೋಳುಕಟ್ಟೆ ಶ್ರೀ ವಿಷ್ಣುಮೂತರ್ಿ ನಗರದಲ್ಲಿ 2018 ಎಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಶ್ರೀ ವಿಷ್ಣುಮೂತರ್ಿ ದೈವದ ಕೆಂಡಸೇವೆ ಮಹೋತ್ಸವದ ಪೂರ್ವಭಾವಿಯಾಗಿ ಬುಧವಾರ `ಕೊಳ್ಳಿಮುಹೂರ್ತ' ಭಕ್ತಿಶ್ರದ್ಧಾಪೂರ್ವಕ ನಡೆಯಿತು.
ಬೆಳಿಗ್ಗೆ ವಳಮಲೆ ಶ್ರೀ ವಿಷ್ಣುಮೂತರ್ಿ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ ಬದಿಯಡ್ಕದಲ್ಲಿರುವ ಡಾ. ಎಸ್.ಎಸ್. ಭಟ್ರವರ ಕ್ಲಿನಿಕ್ ಸಮೀಪದಲ್ಲಿರುವ ಲಕ್ಷ್ಮೀ ತಿಮ್ಮಪ್ಪು ಚೆಟ್ಟಿಯಾರ್ರವರ ಸ್ಥಳದಲ್ಲಿ ಬೆಳಗಿನ ಶುಭಮುಹೂರ್ತದಲ್ಲಿ ಕೊಳ್ಳಿ ಕಡಿದು ಮುಹೂರ್ತ ನೆರವೇರಿಸಿ, ವಾದ್ಯಘೋಷದೊಂದಿಗೆ ಮೆರವಣಿಗೆಯಲ್ಲಿ ಬೋಳುಕಟ್ಟೆ ವಿಷ್ಣುಮೂತರ್ಿ ನಗರಕ್ಕೆ ತಲುಪಿಸಲಾಯಿತು. ಭಗವದ್ಭಕ್ತರು, ಉತ್ಸವ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡರು.