ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ದೂರು ಪರಿಹಾರ ಅದಾಲತ್: 230 ಅಜರ್ಿ ಇತ್ಯರ್ಥ
ಕಾಸರಗೋಡು: ವೆಳ್ಳರಿಕುಂಡು ತಾಲೂಕಿನಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕೆ.ಜೀವನ್ಬಾಬು ನೇತೃತ್ವದಲ್ಲಿ ನಡೆದ ದೂರು ಪರಿಹಾರ ಅದಾಲತ್ನಲ್ಲಿ 230 ಅಜರ್ಿಗಳನ್ನು ಪರಿಗಣಿಸಲಾಯಿತು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 118 ದೂರುಗಳು ಲಭಿಸಿದ್ದವು.
ಆದರೆ ಮನೆ, ಸಿಎಂ ಚಿಕಿತ್ಸಾ ಸಹಾಯ, ಹಕ್ಕುಪತ್ರ ಮೊದಲಾದವುಗಳ ಅಜರ್ಿಗಳನ್ನು ಅದಾಲತ್ನಲ್ಲಿ ಪರಿಗಣಿಸಲಾಗಿಲ್ಲ. ದೂರುಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ತೀಪರ್ು ಕಲ್ಪಿಸಿದರು. ಆದರೆ ತೀಪರ್ು ತೃಪ್ತಿಕರವಲ್ಲದವರಿಗೆ ನೇರವಾಗಿ ಜಿಲ್ಲಾಕಾರಿಯವರನ್ನು ಸಂಪಕರ್ಿಸಲು ಅವಕಾಶ ನೀಡಲಾಯಿತು.
ಪರಪ್ಪ ಗ್ರಾಮದ ಕೂಟೇಲಿನ ಎಂಟು ಕುಟುಂಬಗಳು ನೀಡಿದ ಅಜರ್ಿಗಳನ್ನು ಪರಿಗಣಿಸಿ ಅವರ ಕೈವಶವಿರುವ ಭೂಮಿಗೆ ಹಕ್ಕುಪತ್ರ ನೀಡಲು ಜಿಲ್ಲಾಧಿಕಾರಿ ಸ್ಥಳದಲ್ಲೇ ಆದೇಶಿಸಿದರು. ಒಡೆಯಂಚಾಲ್ - ಚೆರುಪ್ಪುಯ ರಸ್ತೆಯ ಇಕ್ಕೆಡೆಗಳಲ್ಲಿ ಖಾಸಗಿ ವ್ಯಕ್ತಿಗಳಿಂದ ಸರಕಾರಿ ಭೂಮಿ ಒತ್ತುವರಿ ದೂರಿನ ತನಿಖೆಯನ್ನು ನಡೆಸಲು ಲೋಕೋಪಯೋಗಿ ರಸ್ತೆ ವಿಭಾಗಕ್ಕೆ ಜಿಲ್ಲಾಧಿಕಾರಿ ನಿದರ್ೇಶಿಸಿದರು. ಮುಖ್ಯಮಂತ್ರಿ ನಿದರ್ೇಶನದ ಪ್ರಕಾರ ತಾಲೂಕು ಮಟ್ಟದಲ್ಲಿ ಈ ಜನಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವೆಳ್ಳರಿಕುಂಡುವಿನಲ್ಲಿ ಜಿಲ್ಲಾಧಿಕಾರಿ ನಡೆಸಿದ ದೂರು ಪರಿಹಾರ ಅದಾಲತ್ನಲ್ಲಿ ಒಟ್ಟಾರೆ 230 ದೂರುಗಳು ಪರಿಗಣನೆಗೆ ಬಂದಿದ್ದವು. ಕಂದಾಯ ಇಲಾಖೆಗೆ ಸಂಬಂಸಿದ ಪ್ರಮುಖ 118 ದೂರುಗಳು, ಉಳಿದ 112 ದೂರುಗಳನ್ನು ವಿವಿ` ಇಲಾಖೆಗಳ ಮುಖ್ಯ ಅಕಾರಿಗಳ ನೇತೃತ್ವದಲ್ಲಿ ಪರಿಗಣಿಸಲಾಯಿತು.
ಪಂಚಾಯತ್ಗೆ ಸಂಬಂಧಿಸಿದ 41, ಕೈಗಾರಿಕಾ ಅಭಿವೃದ್ಧಿ ಇಲಾಖೆ 1, ತಾಲೂಕು ಸಾರ್ವಜನಿಕ ವಿತರಣಾ ಇಲಾಖೆ 5, ಸ್ಪೆಷಲ್ ತಹಸೀಲ್ದಾರ್ 4, ಕೃಷಿ ಕಾಮರ್ಿಕ ಅಭಿವೃದ್ಧಿ ಮಂಡಳಿ 1, ಜಿಲ್ಲಾ ವೈದ್ಯಾಧಿಕಾರಿ 1, ಕೃಷಿ ಅಕಾರಿ 3, ಎಂಡೋಸಲ್ಫಾನ್ ಸೆಲ್ 4, ರಾಜಾಪುರಂ ಕೆಎಸ್ಇಬಿ ಎಂಜಿನಿಯರ್ 2, ಭೀಮನಡಿ ಕೆಎಸ್ಇಬಿ 4, ಹೊಸದುರ್ಗ ಟೌನ್ ಎಂಪ್ಲಾಯ್ಮೆಂಟ್ ಆಫೀಸರ್ 1, ರಾಜಾಪುರಂ ಪೊಲೀಸ್ ಠಾಣೆ 1, ಬಳಾಲ್ ಉಪನೋಂದಾವಣಾ ಕಚೇರಿ 1, ಅಬಕಾರಿ ವಿಭಾಗ 1, ಲೋಕೋಪಯೋಗಿ 1, ಬುಡಕಟ್ಟು ಅಭಿವೃದ್ಧಿ ಇಲಾಖೆ ಅಧಿಕಾರಿ 35 ಸಹಿತ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಜರ್ಿಗಳನ್ನು ಅದಾಲತ್ನಲ್ಲಿ ಪರಿಗಣಿಸಲಾಯಿತು.
ಜಿಲ್ಲಾಧಿಕಾರಿ ಕೆ.ಜೀವನ್ಬಾಬು ಅಲ್ಲದೆ ಎಡಿಎಂ ಎಚ್.ದಿನೇಶನ್, ಉಪಜಿಲ್ಲಾಧಿಕಾರಿ ಎನ್.ದೇವಿದಾಸ್, ಪಂಚಾಯತ್ ಉಪನಿದರ್ೇಶಕ ಕೆ.ವಿನೋದ್ಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗ ಅಭಿವೃದ್ಧಿ ಅಧಿಕಾರಿ ಅನಂತಕೃಷ್ಣನ್ ವೆಳ್ಳರಿಕುಂಡು, ತಹಸೀಲ್ದಾರ್ ಬೇಬಿ ಹಾಗೂ ವಿವಿಧ ಇಲಾಖಾ ಮಟ್ಟದ ಅಕಾರಿಗಳು ಅದಾಲತ್ನಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು.
ದೂರು ಕಲ್ಪಿಸಲು ಪ್ರತ್ಯೇಕ ಕೌಂಟರ್ ಜಿಲ್ಲಾಧಿಕಾರಿ ಕೆ.ಜೀವನ್ಬಾಬು ನಡೆಸಿದ ವೆಳ್ಳರಿಕುಂಡು ತಾಲೂಕು ದೂರು ಪರಿಹಾರ ಅದಾಲತ್ನಲ್ಲಿ ವಿವಿಧ ಇಲಾಖೆಗಳಿಗೆ ದೂರು ನೀಡಲು ಪ್ರತ್ಯೇಕ ಕೌಂಟರ್ಗಳನ್ನು ತೆರೆಯಲಾಗಿತ್ತು. ಹೊಸ ದೂರುಗಳನ್ನು ಸ್ವೀಕರಿಸಲು ಸಹ ಕೌಂಟರ್ ಸ್ಥಾಪಿಸಲಾಗಿತ್ತು. ಭೂಮಿ ಅಳತೆ ಮಾಡಿ ನೀಡಲು, ಬ್ಯಾಂಕ್ ಸಾಲ ಮನ್ನಾ , ಪರಿಶಿಷ್ಟ ವಿಭಾಗಗಳ ವಿವಿಧ ಸಮಸ್ಯೆಗಳ ಬಗ್ಗೆ ಹೆಚ್ಚು ದೂರುಗಳು ದೊರಕಿದ್ದವು.