ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 28, 2017
ನೃತ್ಯ ಕಾರ್ಯಕ್ರಮ-ಗೌರವಾರ್ಪಣೆ
ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇಗುಲದಲ್ಲಿ ಷಷ್ಠಿ ಮಹೋತ್ಸವ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಯುವಕ ಮಂಡಲದ 25ನೇ ವರ್ಷ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪೆರ್ಲದ ಶಿವಾಂಜಲೀ ನೃತ್ಯ ಕಲಾಕೇಂದ್ರದ ಚಿಣ್ಣರು ಭರತನಾಟ್ಯ ಮತ್ತು ಜಾನಪದ ನೃತ್ಯ ಕಾರ್ಯಕ್ರಮ ನೀಡಿದರು. ಗುರುದಕ್ಷಿಣೆಗಳೊಂದಿಗೆ ವಿದುಷಿ ಕಾವ್ಯಾ ಭಟ್ ಇವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಹಿಮ್ಮೇಳನದ ಹಾಡುಗಾರಿಕೆಯಲ್ಲಿ ವಿದುಷಿ ಶುಭಾ ಶಿವಕುಮಾರ್, ಮೃದಂಗದಲ್ಲಿ ಶ್ರೀಧರ ರೈ ಕಾಸರಗೋಡು ಮತ್ತು ವಯಲಿನ್ನಲ್ಲಿ ಜಗದೀಶ್ ಕೊರೆಕ್ಕಾನ ಸಹಕರಿಸಿದರು.