ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2017
ಮುದ್ದು ಮಕ್ಕಳ ಪೋಟೋ ಸ್ಪಧರ್ೆ=-ಸೀಸನ್ 2
ಮಂಜೇಶ್ವರ: ವಿಶ್ವ ತುಳುವೆರೆ ಆಯಾನೋ ಕೂಟ ಮತ್ತು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಜಂಟಿ ಆಶ್ರಯದಲ್ಲಿ ಡಿಸೆ0ಬರ್ 23 ಹಾಗೂ 24 ರಂದು ಪಿಲಿಕುಳದ ತುಳು ಸಂಸ್ಕೃತಿ ಗ್ರಾಮದಲ್ಲಿ ಜರಗಲಿರುವ ತುಳುನಾಡೊಚ್ಛಯ - 2017 ಕಾರ್ಯಕ್ರಮದಂಗವಾಗಿ "ತುಳುನಾಡ ಬಾಲೆ ಬಂಗಾರ್" ತುಳುನಾಡೊಚ್ಚಯ, ಮಂಜೇಶ್ವರ ತಾಲೂಕು ಸಮಿತಿಯ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಮುದ್ದು ಮಕ್ಕಳ ಫೋಟೋ ಸ್ಪಧರ್ೆ ಸೀಸನ್ - 2 ತುಳುನಾಡ ಬಾಲೆ ಬಂಗಾರ್ - 2017 ಆಯೋಜಿಸಲಾಗಿದೆ.
ಸ್ಪಧರ್ೆಯು ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದು, ಸ್ಪಧರ್ೆಯಲ್ಲಿ ಭಾಗವಹಿಸುವವರು 4 ವರ್ಷದೋಳಗಿನ ಮಕ್ಕಳಾಗಿರಬೇಕು. ಮಗುವಿನ 6* 9 ಇಂಚಿನ 1 ಭಾವಚಿತ್ರವನ್ನು ಕಳುಹಿಸಬಹುದು.ಭಾವಚಿತ್ರದ ಹಿಂದೆ ಮಕ್ಕಳ ಹೆಸರು, ಹುಟ್ಟಿದ ದಿನಾಂಕ,ತಿಂಗಳು, ವರ್ಷ (ಸರಿಯಾಗಿ ಬರೆದಿರಬೇಕು), ತಂದೆ ತಾಯಿಯ ಹೆಸರು, ಸಂಪೂರ್ಣ ವಿಳಾಸ ಸ್ಪಷ್ಟವಾಗಿ ಬರೆದಿರಬೇಕು. ಸ್ಪಧರ್ೆಯಲ್ಲಿ ಭಾಗವಹಿಸುವ ಪೋಷಕರು ತಮ್ಮ ಮುದ್ದು ಮಕ್ಕಳ ಫೋಟೋವನ್ನು ತುಳುನಾಡಿನ ಪರಂಪರೆಯ, ಸಂಸ್ಕೃತಿಯ ಪ್ರಕಾರ ತೆಗೆಯತಕ್ಕದ್ದು.ಈ ಸ್ಪಧರ್ೆಯಲ್ಲಿ ಭಾಗವಹಿಸುವ ಮಕ್ಕಳ ಪೋಷಕರು ತಮ್ಮ ಮಕ್ಕಳ ಭಾವಚಿತ್ರವನ್ನು ಡಿಸೆಂಬರ್ 2 ರೊಳಗೆ ಕಳುಹಿಸಬೇಕು. ಬಳಿಕ ಬಂದ ಭಾವ ಚಿತ್ರವನ್ನು ಪರಿಗಣಿಸಲಾಗುವುದಿಲ್ಲ.
ತೀಪರ್ುಗಾರರ ತೀಮರ್ಾನವೇ ಅಂತಿಮ ತೀಮರ್ಾನವಾಗಿದ್ದು, ವಿಜೇತ ಮುದ್ದು ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಪಂಚಮ ಬಹುಮಾನ ಹಾಗೂ ಆಯ್ದ 35 ಮಕ್ಕಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ವಿಜೇತ ಮಕ್ಕಳಿಗೆ ಬಹುಮಾನವನ್ನು ತುಳುನಾಡೊಚ್ಚಯದ ಕಾರ್ಯಕ್ರಮದ ವೇದಿಕೆಯಲ್ಲಿ ನೀಡಲಾಗುವುದು. ಭಾವಚಿತ್ರವನ್ನು ಕೊರಿಯರ್/ಸ್ಪೀಡ್ ಪೋಸ್ಟ್ ಮುಖಾಂತರ ರತನ್ ಕುಮಾರ್ ಹೊಸಂಗಡಿ. "ತುಳುನಾಡ ಬಾಲೆ ಬಂಗಾರ್" ತುಳುನಾಡೊಚ್ಚಯ ಮಂಜೇಶ್ವರ ತಾಲೂಕು ಸಮಿತಿ, ಅನುಗ್ರಹ ಇಂಡಸ್ಟ್ರಿಟ್ ಹೊಸಂಗಡಿ, ಮಂಜೇಶ್ವರ: 671323, ಕಾಸರಗೋಡು ಜಿಲ್ಲೆ, ಕೇರಳ. ವಿಳಾಸಕ್ಕೆ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9746117895, 7034338773 ಸಂಖ್ಯೆ ಸಂಪಕರ್ಿಸಲು ಕೋರಲಾಗಿದೆ.