ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ಕಾಶ್ಮೀರಕ್ಕೆ ವಲಸೆ ಬಂದ 3 ಲಕ್ಷ ಪಕ್ಷಿಗಳು
ಶ್ರೀನಗರ: ಋತುಗಳಿಗೆ ಅನುಗುಣವಾಗಿ ಹಲವು ಹಕ್ಕಿ ಪ್ರಭೇದಗಳು ನಿಯಮಿತವಾಗಿ ಹಾರಿ ಬೇರೆ ಪ್ರದೇಶಕ್ಕೆ ಪ್ರಯಾಣಮಾಡುವುದಕ್ಕೆ ಹಕ್ಕಿ ವಲಸೆ ಎನ್ನಲಾಗುತ್ತದೆ. ಈ ಪಕ್ಷಿಗಳ ವಲಸೆ ನಿಜಕ್ಕೂ ಪ್ರಕೃತಿ ವಿಸ್ಮಯವೇ ಸರಿ.
ಕಣಿವೆ ರಾಜ್ಯ ಪ್ರದೇಶ ಕಾಶ್ಮೀರದಲ್ಲಿ ಉಷ್ಣಾಂಶದಲ್ಲಿ ಇಳಿಕೆಯಾದ ಹಿನ್ನಲೆಯಲ್ಲಿ ಸುಮಾರು 3 ಲಕ್ಷ ಬಣ್ಣ ಬಣ್ಣದ ಪಕ್ಷಿಗಳ ವಲಸೆ ಬಂದಿದ್ದು, ಪಕ್ಷಿಗಳ ಕಲರವಕ್ಕೆ ಜನರು ಮನಸೋತು ಹೋಗಿದ್ದಾರೆ. ಮಧ್ಯ ಏಷ್ಯ, ಯೂರೋಪ್, ಚೀನಾ, ಜಪಾನ್, ಸಿಬೆರಿಯಾ, ಸೇರಿದಂತೆ ಹಲವಾರು ದೇಶಗಳಿಂದ ಪಕ್ಷಿಗಳ ವಲಸೆ ಬಂದಿದ್ದು, ಗಾಡ್ವಾಲ್, ಬ್ರಮಿನ್ ಡಕ್, ಗ್ರೇಲಾಗ್ ಗೋಸ್, ಮಾರ್ಲಡ್, ನಾರ್ತನ್ ಪಿನ್ಟೈಲ್, ರೆಡ್ ಕ್ರ್ಸಿಟೆಡ್, ಪೋಚರ್ಾಡ್, ಹೀಗೆ ಸಾವಿರಾರು ಜಾತಿಯಾ ಹಕ್ಕಿಗಳ ಹಿಂಡು ಕಾಶ್ಮೀರಕ್ಕೆ ಆಗಮಿಸಿವೆ ಎಂದು ವೆಟ್ಲ್ಯಾಂಡ್ ವಿಭಾಗದ ಆಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವಂಬರ್ ಮೊದಲ ವಾರದಲ್ಲಿ ಮೂರು ಪಕ್ಷಿಗಳ ವಲಸೆ ಬಂದಿದ್ದು, ಮುಂದಿನ 45 ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಅಧಿಕವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಪಕ್ಷಗಳನ್ನು ನೋಡಲು ಜನಸಾಮಾನ್ಯ, ಪ್ರವಾಸಿಗರು ಹೆಚ್ಚೆಚ್ಚು ಆಕಷರ್ಿತರಾಗುತ್ತಿದ್ದು, ಅವುಗಳ ಚಲನವಲನ, ಧ್ವನಿಗಳನ್ನು ಸಂಗ್ರಹಿಸುವಲ್ಲಿ ಮಗ್ನರಾಗಿರುವ ದೃಶ್ಯವಳಿಗಳು ಸಾಮಾನ್ಯವಾಗಿದೆ.
ಹಕ್ಕಿ ಸ್ಥಳಾಂತರಗಳಿಗೆ ಆಹಾರ ಲಭ್ಯತೆ, ವಾಸಸ್ಥಾನ ಅಥವಾ ಹವಾಮಾನದಲ್ಲಿ ಬದಲಾವಣೆ ಸೇರಿರುತ್ತದೆ. ಆದರೆ ಇವು ಸಾಮಾನ್ಯವಾಗಿ ಕ್ರಮವಿಲ್ಲದ್ದು, ಅಥವಾ ಒಂದೇ ದಿಕ್ಕಿನಲ್ಲಿರುತ್ತವೆ. ಈ ಪ್ರವೃತ್ತಿಯನ್ನು ಅಲೆಮಾರಿತನ, ಆಕ್ರಮಣಗಳು, ಚದುರುವಿಕೆ ಅಥವಾ ಮುನ್ನುಗ್ಗುವಿಕೆ ಎನ್ನಲಾಗುತ್ತದೆ. ವರ್ಷಕ್ಕೊಮ್ಮೆ ಸಂಭವಿಸುವ ಋತುಗಳಿಗೆ ಅನುಗುಣವಾಗಿ ಹಕ್ಕಿಗಳು ವಲಸೆ ಹೋಗುತ್ತವೆ. ಇದಕ್ಕೆ ತದ್ವಿರುದ್ಧವಾಗಿ, ವಲಸೆ ಹೋಗದ ಹಕ್ಕಿಗಳು ನಿವಾಸಿ ಅಥವಾ 'ಒಂದೇ ಪ್ರದೇಶದಲ್ಲಿ ವಾಸಿಸುವ ಹಕ್ಕಿಗಳು' ಎನ್ನಲಾಗಿದೆ.