ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 05, 2017
ಮೀನು ಕಾಖರ್ಾಣೆಯ ತ್ಯಾಜ್ಯ ನೀರು ಬಾವಿಗೆ: 400 ಕುಟುಂಬಗಳು ಸಂಕಷ್ಟದಲ್ಲಿ: ಆತಂಕ
ಮಂಜೇಶ್ವರ: ಕನಾಘಟಕ ಕೇರಳ ಗಡಿ ಗ್ರಾಮ ಪ್ರದೇಶ ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯ ಕಣ್ವತೀರ್ಥದಲ್ಲಿ ನೂತನವಾಗಿ ಆರಂಭಿಸಲಾದ ಯುನೈಟೆಡ್ ಸೀ ಪ್ರೊಡಕ್ಟ್ಸ್ ಎಂಬ ಮೀನು ಕಾಖರ್ಾನೆಯ ಮೀನಿನ ತ್ಯಾಜ್ಯಗಳನ್ನು ಕೊಂಡೊಯ್ಯಲು ಪಯರ್ಾಯ ವ್ಯವಸ್ಥೆ ಮಾಡದೆ ಇರುವ ಹಿನ್ನೆಲೆಯಲ್ಲಿ ತ್ಯಾಜ್ಯ ನೀರುಗಳು ಈ ಪ್ರದೇಶಗಳಲ್ಲಿರುವ ಸುಮಾರು ಆರು ಭಾವಿಗಳಿಗೆ ಪ್ರವೇಶಿಸಿ ಬಾವಿಯ ಕುಡಿಯುವ ನೀರು ಕಲ್ಮಷಯುಕ್ತವಾಗುತಿದ್ದು, ಇದರಿಂದ ರೋಗ ಭೀತಿ ಎದುರಾಗಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಮಲಿನಗೊಂಡ ಬಾವಿಯ ನೀರಿನ ದುವರ್ಾಸನೆಯಿಂದ ಶೌಚಾಲಯಕ್ಕೂ ಉಪಯೋಗಿಸಲು ಕೂಡಾ ಆಯೋಗ್ಯವಾಗಿರುವುದಾಗಿ ಸ್ಥಳೀಯರು ಹೇಳುತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದ ಸುಮಾರು 400 ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.
ನೂತನವಾಗಿ ಆರಂಭಗೊಂಡ ಈ ಕಾಖರ್ಾಣೆಯಲ್ಲಿ ಮೀನುಗಳ ಬಿಡಿ ಭಾಗಗಳನ್ನು ಬೇರ್ಪಡಿಸಿ ಕನರ್ಾಟಕ, ಕೇರಳ, ತಮಿಳ್ನಾಡು ಸಹಿತ ಹಲವು ಸ್ಥಳಗಳಿಗೆ ರಫ್ತು ಮಾಡಲಾಗುತ್ತಿದೆ. ದಿನಂಪ್ರತಿ ಸುಮಾರು 50 ಲೋಡ್ ಮೀನುಗಳನ್ನು ಇಲ್ಲಿಂದ ಸಾಗಾಟ ಮಾಡುತ್ತಿರುವುದಾಗಿ ಪರಿಸರವಾಸಿಗಳು ಹೇಳುತಿದ್ದಾರೆ. ಆದರೆ ಇದರ ತ್ಯಾಜ್ಯ ನೀರು ಹೋಗಲು ಪಯರ್ಾಯ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ಪರಿಸರದ ಕುಡಿಯುವ ನೀರಿನ ಬಾವಿಗಳು ತ್ಯಾಜ್ಯ ನೀರಾಗಿ ಮಾಪರ್ಾಟಾಗಿದೆ. ಈ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿ, ಜಿಲ್ಲಾ ಪೊಲ್ಯೂಶನ್ ಬೋಡರ್್, ಮಂಜೇಶ್ವರ ಗ್ರಾ. ಪಂ. ಮೊದಲಾದೆಡೆ ದೂರುಗಳನ್ನು ನೀಡಿದ್ದಾರೆ. ಸ್ಥಳೀಯರು ಹಲವಾರು ಸಲ ಕಾಖರ್ಾಣೆಯ ಮುಂಬಾಗದಲ್ಲಿ ಪ್ರತಿಭಟನೆಗಳನ್ನು ಕೂಡಾ ಮಾಡಿದ್ದಾರೆ. ಆದರೆ ಯಾವುದೇ ಫಲ ಕಂಡಿಲ್ಲವೆಂಬುದು ಸ್ಥಳೀಯರ ಮನದಾಳದ ಮಾತು.
ಈ ಕಾಖರ್ಾನೆಯ ಬದಿಯಲ್ಲಿರುವ ಚರಂಡಿಯಲ್ಲೂ ಕೊಳಚೆ ನೀರು ಹರಿದು ಹೋಗುವ ಸರಿಯಾದ ವ್ಯವಸ್ಥೆ ಇಲ್ಲದೇ ಇರುವ ಕಾರಣ ಈ ಪ್ರದೇಶದ ಬಹುತೇಕ ಕುಟುಂಬಗಳ ಮಕ್ಕಳು ಈ ದಾರಿಯಾಗಿಯೇ ಶಾಲೆಗೆ ಹೋಗುವಾಗ ಭೀತಿಯನ್ನು ಎದುರಿಸುವಂತಾಗಿದೆ. ಜೊತೆಗೆ ಈ ಪ್ರದೇಶದ ನಿವಾಸಿ ಪ್ರವೀಣ್ ಕುಮಾರ್ ಎಂಬವರಿಗೆ ಶರೀರದ ವಿವಿಧ ಭಾಗಗಳಲ್ಲಿ ತುರಿಕೆ ಆರಂಭಗೊಂಡಿದ್ದು, ಕೆಲವೊಂದು ಮಕ್ಕಳಿಗೂ ನೀರಿನ ದುಷ್ಪರಿಣಾಮ ಎದುರಾಗಿರುವುದಾಗಿ ಹೇಳುತಿದ್ದಾರೆ.
ಏನಂತಾರೆ:
ಕಾನೂನಿನ ಚೌಕಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳಿಂದ ಒಪ್ಪಿಗೆಯನ್ನು ಪಡೆದುಕೊಂಡೇ ಈ ಕಾಖರ್ಾನೆಗೆ ಚಾಲನೆ ನೀಡಲಾಗಿದೆ. ಆದರೆ ವಿದ್ಯುತ್ ಇಲಾಖೆಯಿಂದ ತ್ರಿ ಫ್ಯೂಸ್ ಸಂಪರ್ಕ ಸಿಗಲು ತಡವಾಗಿರುವ ಕಾರಣ ಮೀನಿನ ತ್ಯಾಜ್ಯ ನೀರನ್ನು ಸಂಸ್ಕ್ರರಿಸಲು ಸಾಧ್ಯವಾಗಿಲ್ಲವೆಂದು ಕಾಖರ್ಾಣೆಯವರ ಹೇಳಿಕೆ. ಪ್ರದೇಶಕ್ಕೆ ಬೇಟಿ ನೀಡಿದ್ದೇನೆ ಕಾಖರ್ಾಣೆಯವರ ಬೇ ಜವಾಬ್ದಾರಿ ಕಂಡು ಬಂದಿದೆ. 10 ದಿವಸದೊಳಗೆ ಸರಿ ಮಾಡಿ ಕೊಡಲಾಗುವುದಾಗಿ ಕಾಖರ್ಾನೆಯವರು ತಿಳಿಸಿದ್ದಾರೆ. ಇಲ್ಲದೇ ಇದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಅಬ್ದುಲ್ ಅಜೀಜ್ ಹಾಜಿ.