ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 06, 2017
ಮತ್ತೆ 48 ರೈಲುಗಳು `ಸೂಪರ್ ಫಾಸ್ಟ್', ಪ್ರಯಾಣ ದರ ಏರಿಕೆ
ನವದೆಹಲಿ: ಭಾರತೀಯ ರೈಲ್ವೆ 48 ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳನ್ನು "ಸೂಪರ್ ಫಾಸ್ಟ್' ದಜರ್ೆಗೆ ಏರಿಸಿದ್ದು. ಅವುಗಳ ಪ್ರಯಾಣ ದರವನ್ನು ಹೆಚ್ಚಿಸಿದೆ.
ಈ ರೈಲುಗಳ ಈಗಿನ ಗಂಟೆಗೆ 50 ಕಿ.ಮೀ. ವೇಗವನ್ನು ಕೇವಲ ಐದು ಕಿ.ಮೀ. ಏರಿಸಿ ಅವುಗಳಿಗೆ ಸೂಪರ್ ಫಾಸ್ಟ್ ಎಂಬ ಮೇಲ್ಮಟ್ಟದ ಲೇಬಲ್ ಹಚ್ಚಿರುವುದು ಭಾರತೀಯ ರೈಲ್ವೆಯ ಕುಟಿಲೋಪಾಯವಾಗಿದೆ ಎಂಬ ಟೀಕೆ ಕೇಳಿಬಂದಿದೆ.
ಕಳೆದ ನವೆಂಬರ್ 1ರಂದು ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಪರಿಷ್ಕೃತ ವೇಳಾಪಟ್ಟಿಯಲ್ಲಿ ಈ ವಿಷಯ ಉಲ್ಲೇಖಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಸ್ಲೀಪರ್ ಕೋಚ್ ಪ್ರಯಾಣ ದರವನ್ನು 30 ರುಪಾಯಿ, ಸೆಕೆಂಡ್ ಮತ್ತು ಥಡರ್್ ಎಸಿ ಕೋಚ್ ಪ್ರಯಾಣ ದರವನ್ನು 45 ರುಪಾಯಿ ಹಾಗೂ ಫಸ್ಟ್ ಎಸಿ ಕ್ಲಾಸ್ ಪ್ರಯಾಣ ದರವನ್ನು 75 ರುಪಾಯಿ ಹೆಚ್ಚಿಸಲಾಗಿದೆ.
ಪ್ರಯಾಣ ದರ ಹೆಚ್ಚಳ ಮಾಡಲಾಗಿರುವ ಹೆಚ್ಚಿನ ರೈಲುಗಳು ಉತ್ತರ ಭಾರತದ ಕಡೆ ಚಲಿಸುವ ರೈಲುಗಳಾಗಿದ್ದು, ಅಲ್ಲಿ ಹಿಮದ ಸಮಸ್ಯೆ ಇರುವ ಕಾರಣದಿಂದಲೂ ರೈಲುಗಳು ತಡವಾಗಿಯೇ ಸಂಚರಿಸುತ್ತಿವೆ ಎನ್ನಲಾಗಿದೆ.
ರಾಜಧಾನಿ, ತುರಂತೊ ಮತ್ತು ಶತಾಬ್ಧಿಯಂಥ ಪ್ರಮುಖ ರೈಲುಗಳೇ ನಿಗದಿತ ಸಮಯಕ್ಕಿಂತ ತಡವಾಗಿ ಸಂಚರಿಸುತ್ತಿವೆ. ಹೀಗಾಗಿ 48 ರೈಲುಗಳನ್ನು `ಸೂಪರ್ ಫಾಸ್ಟ್' ದಜರ್ೆಗೆ ಏರಿಸಿರುವುದರಿಂದ ದರ ಹೆಚ್ಚಳದ ಅನನುಕೂಲ ಬಿಟ್ಟರೆ ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.
ರೈಲ್ವೆ ಇಲಾಖೆ ಈ ದರ ಏರಿಕೆ ಮೂಲಕ ಹೆಚ್ಚುವರಿಯಾಗಿ 70 ಕೋಟಿ ರುಪಾಯಿಗಳ ಆದಾಯವನ್ನು ನಿರೀಕ್ಷಿಸಿದೆ.