ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ಕೊನೆಗೂ ಪ್ರದರ್ಶನ ಕಾಣದ `ಎಸ್ ದುಗರ್ಾ': ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತೆರೆ
ಪಣಜಿ: ಕೇರಳ ಹೈಕೋಟರ್್ ಆದೇಶವಿದ್ದರೂ ಗೋವಾದಲ್ಲಿನ 48ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ)ದಲ್ಲಿ ಮಲಯಾಳದ 'ಎಸ್ ದುಗರ್ಾ' ಚಿತ್ರ ಪ್ರದರ್ಶನವಾಗಲೇ ಇಲ್ಲ.
ಚಿತ್ರದ ಶೀಷರ್ಿಕೆಯಲ್ಲಿ ದುಗರ್ಾ ಹಾಗೂ ಅದರೊಂದಿಗೆ ಎಸ್(ಸೆಕ್ಸಿ) ಸೇರಿಕೊಂಡಿರುವ ಕಾರಣದಿಂದಲೇ ವಿವಾದವನ್ನು ಹೊತ್ತ ಚಿತ್ರವನ್ನು ವಾತರ್ಾ ಮತ್ತು ಪ್ರಸಾರ ಸಚಿವಾಲಯ ಐಎಫ್ಎಫ್ಐನಲ್ಲಿ ಪ್ರದಶರ್ಿಸುವುದಕ್ಕೆ ಅಡ್ಡಿ ಪಡಿಸಿತು. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ ಧಕ್ಕೆಯಾಗುತ್ತಿರುವುದು, ಚಿತ್ರೋತ್ಸವದಿಂದ ಚಿತ್ರವನ್ನು ಹೊರಗಿಟ್ಟಿದ್ದನ್ನು ಪ್ರಶ್ನಿಸಿ ನಿದರ್ೇಶಕ ಸನಲ್ ಕುಮಾರ್ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಐಎಫ್ಎಫ್ಐ ಅಧಿಕಾರಿಗಳ ವಿರುದ್ಧ ಕೇರಳ ಹೈಕೋಟರ್್ನಲ್ಲಿ ದೂರು ದಾಖಲಿಸಿದ್ದರು.
ಚಿತ್ರವನ್ನು ಐಎಫ್ಎಫ್ಐನಲ್ಲಿ ಪ್ರದಶರ್ಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಕೋಟರ್್ ಸೂಚನೆ ನೀಡಿದ ಬಳಿಕ, ಚಿತ್ರೋತ್ಸವದ ಕೊನೆಯ ದಿನ ನ.28ಕ್ಕೆ ಚಿತ್ರ ಪ್ರದರ್ಶನ ನಿಗದಿಯಾಗಿತ್ತು. ಆದರೆ, ಕೊನೆಗೂ ಎಸ್ ದುಗರ್ಾ ಪ್ರದರ್ಶನ ನಡೆಯಲೇ ಇಲ್ಲ.
`ಬದಲಾದ ಸಿನಿಮಾ ಶೀಷರ್ಿಕೆ ಸಂಬಂಧಿಸಿದಂತೆ ಆಯ್ಕೆ ಮಂಡಳಿ ಪ್ರಶ್ನೆ ಎತ್ತಿದ್ದು, ಸೆನ್ಸಾರ್ ಮಂಡಳಿ(ಸಿಬಿಎಫ್ಸಿ)ಯಿಂದ ಮರುಪರಿಶೀಲನೆ ಬಯಸಿರುವುದರಿಂದ ಚಿತ್ರೋತ್ಸವದಲ್ಲಿ ಈ ಚಿತ್ರವನ್ನು ಪ್ರದಶರ್ಿಸಲು ಸಾಧ್ಯವಾಗುತ್ತಿಲ್ಲ' ಎಂದು ಐಎಫ್ಎಫ್ಐ ಉತ್ಸವದ ನಿದರ್ೇಶಕ ಸುನಿತ್ ತಂಡನ್ ಚಿತ್ರದ ನಿದರ್ೇಶಕ ಸನಲ್ ಕುಮಾರ್ಗೆ ಮೇಲ್ ಮೂಲಕ ತಿಳಿಸಿದ್ದಾರೆ.
13 ತೀಪರ್ುಗಾರರ ಸಮಿತಿ ಶಿಫಾರಸು ಮಾಡಿದ್ದ 21 ಸಿನಿಮಾಗಳ ಪಟ್ಟಿಯಿಂದ ಮಲಯಾಳದ `ಎಸ್ ದುಗರ್ಾ' ಮತ್ತು ಮರಾಠಿಯ `ನ್ಯೂಡ್' ಚಿತ್ರಗಳನ್ನು ವಾತರ್ಾ ಮತ್ತು ಪ್ರಸಾರ ಸಚಿವಾಲಯ ಕೈಬಿಟ್ಟಿತ್ತು. ಈ ಸಂಬಂಧ ಪನೋರಮಾ ವಿಭಾಗದ ಚಿತ್ರಗಳ ಆಯ್ಕೆ ಸಮಿತಿಯ ಮುಖ್ಯಸ್ಥ, ಚಿತ್ರಕಮರ್ಿ ಸುಜಯ್ ಘೋಷ್ ರಾಜೀನಾಮೆ ಹಾಗೂ ಇನ್ನೂ ಇಬ್ಬರು ಸದಸ್ಯರು ರಾಜೀನಾಮೆ ನೀಡಿದ್ದರು.
ಸೆಕ್ಸಿ ದುಗರ್ಾ' ಎಂದೂ ಕರೆಯಲಾಗುವ 'ಎಸ್ ದುಗರ್ಾ', ಪುರುಷ ಮತ್ತು ಮಹಿಳೆಯ ಪ್ರಯಾಣದ ವೇಳೆ ನಡೆಯುವ ಕಥೆ. ಇಬ್ಬರು ಪುರುಷರ ಕೈಗೆ ಸಿಲುಕಿ ಈ ಇಬ್ಬರು ಪ್ರಯಾಣಿಕರು ಅನುಭವಿಸುವ ಭೀಕರತೆಯನ್ನು ಈ ಸಿನಿಮಾ ತೆರೆದಿಡುತ್ತದೆ. 2017ನೇ ಸಾಲಿನ ರಾಟ್ಟಡ್ಯರ್ಾಮ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರವು 'ಹಿವೋಸ್ ಟೈಗರ್' ಪ್ರಶಸ್ತಿ ಪಡೆದಿದೆ. ಮೆಕ್ಸಿಕೊ, ಯೆರೆವಾನ್ ಚಲನ ಚಿತ್ರೋತ್ಸವಗಳಲ್ಲಿಯೂ ಪ್ರಶಸ್ತಿ ಗಳಿಸಿದೆ.
ಗೋವಾ ಚಲನಚಿತ್ರೋತ್ಸವ: 'ಟೇಕ್ ಆಫ್' ಚಿತ್ರದ ನಟನೆಗಾಗಿ ಪಾರ್ವತಿಗೆ ಶ್ರೇಷ್ಠ ನಟಿ ಪ್ರಶಸ್ತಿ
ಗೋವಾದಲ್ಲಿ ನಡೆಯುತ್ತಿರುವ 48ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್ಎಫ್ಐ)ದಲ್ಲಿ ಬಹುಭಾಷಾ ನಟಿ ಪಾರ್ವತಿಗೆ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿದೆ.
ಪಣಜಿ: ಗೋವಾದಲ್ಲಿ ನಡೆಯುತ್ತಿರುವ 48ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್ಎಫ್ಐ)ದಲ್ಲಿ ಬಹುಭಾಷಾ ನಟಿ ಪಾರ್ವತಿ ತಿರುವೋತು ಕೊಟ್ಟುವಟ್ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿದೆ. ಮಹೇಶ್ ನಾರಾಯಣ್ ನಿದರ್ೇಶನದ ಮಲಯಾಳಂ ಚಿತ್ರ ಟೇಕ್ ಆಫ್ನಲ್ಲಿ ಪಾರ್ವತಿಯ ಮನೋಜ್ಞ ಅಭಿನಯಕ್ಕಾಗಿ ಈ ಗೌರವ ಸಂದಿದೆ.
ಇರಾಕ್ನ ತ್ರಿಕ್ರಿತ್ನಲ್ಲಿ ಸಿಲುಕಿಕೊಂಡಿರುವ ನಸರ್್ ಪಾತ್ರವನ್ನು ಪಾರ್ವತಿ ನಿರ್ವಹಿಸಿದ್ದರು.
ಈ ಚಲನಚಿತ್ರೋತ್ಸದ ಸ್ಪಧರ್ಾ ವಿಭಾಗದಲ್ಲಿ ಪ್ರದರ್ಶನಗೊಂಡ ಏಕೈಕ ಮಲಯಾಳಂ ಚಿತ್ರವಾಗಿದೆ ಟೇಕ್ ಆಫ್. ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಲಯಾಳಂ ನಟಿಯೊಬ್ಬರು ಶ್ರೇಷ್ಠ ನಟಿ ಪ್ರಶಸ್ತಿಗೆ ಭಾಜನರಾಗಿರುವುದು ಇದೇ ಮೊದಲು.
ಪಾರ್ವತಿ ಮಾತು
ನನಗೆ ಲಭಿಸಿದ ಈ ಪ್ರಶಸ್ತಿಯನ್ನು ದಿವಂಗತ ನಿದರ್ೇಶಕ ರಾಜೇಶ್ ಪಿಳ್ಳೈ ಮತ್ತು ನಸರ್್ ಗಳಿಗೆ ಅಪರ್ಿಸುತ್ತೇನೆ. ಇರಾಕಿನ ಯುದ್ಧಭೂಮಿಯಲ್ಲಿ ಸಿಲುಕಿಕೊಂಡ ನಸರ್್ ಗಳ ಕಥೆಯನ್ನು ಟೇಕ್ ಆಫ್ ನಲ್ಲಿ ತೋರಿಸಲಾಗಿದೆ ನೈಜ ಘಟನೆಯನ್ನಾಧರಿಸಿದ ಚಿತ್ರವಾಗಿದೆ ಇದು. ರಾಜೇಶ್ ಪಿಳ್ಳೈ ಅವರ ಕನಸಿನ ಚಿತ್ರವಾಗಿತ್ತು ಅದು. ಪಿತ್ತಜನಕಾಂಗದ ಸೋಂಕಿನಿಂದಾಗಿ ರಾಜೇಶ್ ಮರಣಹೊಂದಿದ್ದರು. ರಾಜೇಶ್ ಪಿಳ್ಳ ಫಿಲಂಸ್ ಬ್ಯಾನರ್ನಡಿಯಲ್ಲಿ ಅವರ ಪತ್ನಿ ಮೇಘಾ ರಾಜೇಶ್ ಈ ಸಿನಿಮಾ ನಿಮರ್ಾಣ ಮಾಡಿದ್ದರು.
ಸಮೀರಾ ಎಂಬ ಕಥಾಪಾತ್ರವನ್ನು ತನಗೆ ನೀಡಿದ ನಿದರ್ೇಶಕ ಮಹೇಶ್ ನಾರಾಯಣ್ ಅವರಿಗೆ ಧನ್ಯವಾದಗಳು. ಸಮೀರಾ ಎಂಬ ಪಾತ್ರವನ್ನು ಯಾವ ರೀತಿ ನಿರ್ವಹಿಸಬೇಕೆಂಬುದು ನನಗೆ ತಿಳಿದಿರಲಿಲ್ಲ. ಸಹಾನುಭೂತಿ, ಕರುಣೆ ಎಲ್ಲವನ್ನೂ ಆಳವಾಗಿ ಅರ್ಥ ಮಾಡಿಸಿದ ಸಿನಿಮಾ ಟೇಕ್ ಆಫ್. ಸಮೀರಾ ನಮ್ಮ ಸಮಾಜದಲ್ಲಿನ ಹಲವಾರು ಮಹಿಳೆಯರ ಪ್ರತೀಕವಾಗಿದ್ದಾಳೆ ಎಂದು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಾರ್ವತಿ ಹೇಳಿದ್ದಾರೆ.
ಪ್ರಶಸ್ತಿ ವಿಜೇತರ ಪಟ್ಟಿ
ಉತ್ತಮ ಚಲನಚಿತ್ರ: 120 ಬೀಟ್ಸ್ ಪರ್ ಮಿನಿಟ್ - ನಿದರ್ೇಶನ: ರಾಬಿನ್ ಕ್ಯಾಂಪಿಲ್ಲೋ
ಇಂಡಿಯನ್ ಪರ್ಸನಾಲಿಟಿ ಆಫ್ ದ ಇಯರ್- ಅಮಿತಾಬ್ ಬಚ್ಚನ್
ಶ್ರೇಷ್ಠ ನಟಿ- ಪಾರ್ವತಿ
ಶ್ರೇಷ್ಠ ನಟ - ನೂಯೆಲ್ ಪೆರೆಜ್ ಬಿಸ್ಕಯಾತರ್್ (ಚಿತ್ರ- ಬೀಟ್ಸ್ ಪರ್ ಮಿನಿಟ್)
ಉತ್ತಮ ನಿದರ್ೇಶನ- ವಿವಿಯಾನ್ ಕೂ, ಆಂಜೆವಲ್ಸ್ ವಿಯರ್ ವೈಟ್
ಜೀವಮಾನ ಸಾಧನೆ ಪ್ರಶಸ್ತಿ- ಆಟೋಂ ಇಗೋಯನ್
ಚೊಚ್ಚಲ ನಿದರ್ೇಶನಕ್ಕಿರುವ ಪ್ರಶಸ್ತಿ: ಕಿರೊ ಕುಸ್ಸೋ (ಡಾಕರ್್ ಸ್ಕಲ್ )
ಐಸಿಎಫ್ಟಿ ಯುನೆಸ್ಕೊ ಗಾಂಧಿ ಮೆಡಲ್- ಕ್ಷಿತಿಜ್ ಎ ಹಾರಿಜೋನ್
ನಿಣರ್ಾಯಕರ ವಿಶೇಷ ಪುರಸ್ಕಾರ -ಮಹೇಶ್ ನಾರಾಯಣನ್ , ಟೇಕ್ ಆಫ್