HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಎಕೆಪಿಎ ಬದಿಯಡ್ಕ ಯೂನಿಟ್ ಸದಸ್ಯರ ವತಿಯಿಂದ 58ನೇ ಕುಂಬಳೆ ಉಪಜಿಲ್ಲಾ ಕಲೋತ್ಸವದಲ್ಲಿ ಗಮನಸೆಳೆದ ಛಾಯಾಚಿತ್ರ ಪದರ್ಶನ ಬದಿಯಡ್ಕ : ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕಂಡರಿ ಶಾಳೆಯಲ್ಲಿ ನಡೆದುಬರುತ್ತಿರುವ 58ನೇ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ `ಛಾಯಾಚಿತ್ರ ಪ್ರದರ್ಶನ'ವು ಎಲ್ಲರ ಗಮನಸೆಳೆಯಿತು. ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಎಕೆಪಿಎ) ಬದಿಯಡ್ಕ ಘಟಕದ ವತಿಯಿಂದ ನಡೆಯುತ್ತಿರುವ ಛಾಯಾಚಿತ್ರ ಪದರ್ಶನವನ್ನು ಸಹಸ್ರಾರು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಕೃತಿ ರಮಣೀಯ ದೃಶ್ಯಗಳು, ಅಪರೂಪದ ಪ್ರಾಣಿ ಪಕ್ಷಿಗಳ ಚಿತ್ರಗಳು, ರಾಜಕೀಯ, ಧಾಮರ್ಿಕ ಕಾರ್ಯಕ್ರಮಗಳ ದೃಶ್ಯಗಳು ಸ್ಪಧರ್ೆಗೆ ಆಗಮಿಸಿದ ಮಕ್ಕಳ, ಅಧ್ಯಾಪಕರ ಹಾಗೂ ಸಾರ್ವಜನಿಕರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಬದಿಯಡ್ಕ ಗ್ರಾಮಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಿಪಡಿಸಿ ಛಾಯಾಗ್ರಹಣವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಈ ಪ್ರದರ್ಶನವು ಮಕ್ಕಳಲ್ಲಿ ಹೊಸತನವನ್ನು ರೂಪಿಸುವಲ್ಲಿ ಸಹಾಯಕವಾಗಲಿದೆ ಎಂದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂತರ್ಿ ಭೇಟಿಯಿತ್ತು ಕಲೋತ್ಸವದ ಸಂದರ್ಭವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಛಾಯಾಗ್ರಾಹಕರು ಗಮನಸೆಳೆಯುವ ಕಾರ್ಯವನ್ನು ಮಾಡಿದ್ದಾರೆ ಎಂದು ಸಂತಸವನ್ನು ವ್ಯಕ್ತಪಡಿಸಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಮುಖ್ಯೋಪಾಧ್ಯಾಯ ವೆಂಕಟ್ರಾಜ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ, ಬ್ಲೋಕ್ ಪಂ. ಸದಸ್ಯ ಅವಿನಾಶ್ ವಿ ರೈ, ರಾಮಪ್ಪ ಮಂಜೇಶ್ವರ, ಕುಂಬ್ಡಾಜೆ ಗ್ರಾ.ಉಪಾಧ್ಯಕ್ಷ ಆನಂದ ಕೆ.ಮವ್ವಾರು ಮೊದಲಾದವರು ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಗ್ರಾಮೀಣ ವಾತಾವರಣದಲ್ಲಿ ಅತ್ಯಂತ ಉತ್ತಮ ರೀತಿಯಲ್ಲಿ ತಮ್ಮ ಕೌಶಲ್ಯವನ್ನು ಪ್ರದಶರ್ಿಸಲಾಗಿದೆ. ಪ್ರದರ್ಶನವನ್ನು ಆಯೋಜಿಸಿದ ಸಂಘಟಕರಿಗೆ ಹಾಗೂ ಅದಕ್ಕೆ ಅನುವುಮಾಡಿಕೊಟ್ಟ ಶಾಲಾ ಸಂಘಟಕರಿಗೆ ಅಭಿನಂದನೆಗಳು. ಈ ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲ ಸದಸ್ಯರಿಗೆ ಶುಭವನ್ನು ಕೋರುವೆನು ಎಂದು ತನ್ನ ಅನಿಸಿಕೆಯ ಬರಹದ ಮೂಲಕ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಅಭಿಪ್ರಾಯಪಟ್ಟರು. ಹಿರಿಯ ಛಾಯಾಗ್ರಾಹಕ ಬಾಲಸುಬ್ರಹ್ಮಣ್ಯ ಭಟ್ ಬೊಳುಂಬು, ಉದಯ ಕಂಬಾರು, ಬದಿಯಡ್ಕ ಯೂನಿಟ್ ಅಧ್ಯಕ್ಷ ಅಪ್ಪಣ್ಣ ಸೀತಂಗೋಳಿ, ಕಾರ್ಯದಶರ್ಿ ಶ್ಯಾಮಪ್ರಸಾದ ಸರಳಿ, ಉದಯ ಕುಮಾರ್ ಮೈಕುರಿ, ವೇಣುಗೋಪಾಲ ಆರೋಳಿ, ಗೋಪಾಲಕೃಷ್ಣ ಅಡ್ಯನಡ್ಕ, ವಿನು ಪೆರ್ಲ, ಇಮ್ತಿಯಾಸ್ ಪೆರ್ಲ, ಮುರಳಿ ತಲ್ಪಣಾಜೆ, ನಿಶಾಂತ್ ಹಾಗೂ ಬದಿಯಡ್ಕ ಯೂನಿಟ್ ಸದಸ್ಯರು ಪಾಲ್ಗೊಂಡಿದ್ದರು. ವೀಕ್ಷಕರ ಅಭಿಪ್ರಾಯ : * ಪ್ರತಿಯೊಂದು ಛಾಯಾಚಿತ್ರವೂ ಆಕರ್ಷಕವಾಗಿ ಸುಂದರವಾಗಿದೆ. ಛಾಯಾಚಿತ್ರ ಕಲೆಯ ಬಗ್ಗೆ ನೋಡುಗರಲ್ಲಿ ಆಸಕ್ತಿಯನ್ನು ಮೂಡಿಸಲು ಸಹಕಾರಿಯಾಗಿದೆ. * ಗುಣಮಟ್ಟದ ಛಾಯಾಚಿತ್ರಗಳು ಮೌಲ್ಯಯುತವಾಗಿದೆ. * ಉತ್ತಮ ಸಂಗ್ರಹ, ಉತ್ತಮ ಪ್ರದರ್ಶನ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries