ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2017
ಕೇರಳ ರಾಜ್ಯ ವಿಧಾನಸಭೆಯ ವಜ್ರ ಮಹೋತ್ಸವ : ಜಿಲ್ಲಾ ಮಟ್ಟದ ಕಾರ್ಯಕ್ರಮ
ಕಾಸರಗೋಡು: ಕೇರಳ ವಿಧಾನಸಭೆಯ 60ನೇ ವಾಷರ್ಿಕೋತ್ಸವ ವಜ್ರ ಕೇರಳದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಡಿಸೆಂಬರ್ 4 ಮತ್ತು 5ರಂದು ನಡೆಸಲು ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್ ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರಗಿದ ಸ್ವಾಗತ ಸಮಿತಿಯ ವಿಶೇಷ ಸಭೆಯಲ್ಲಿ ತೀಮರ್ಾನಿಸಲಾಯಿತು.
ಡಿಸೆಂಬರ್ 4ರಂದು ನೀಲೇಶ್ವರ ರಾಜಾಸ್ ಪ್ರೌಢಶಾಲೆಯಲ್ಲಿ ವಜ್ರ ಕೇರಳ ಜಿಲ್ಲಾ ಮಟ್ಟದ ಉದ್ಘಾಟನೆ ನಡೆಯಲಿದೆ. ವಿಧಾನಸಭಾ ಮ್ಯೂಸಿಯಂ, ಇತಿಹಾಸ ಪ್ರದರ್ಶನ, ಕಂದಾಯ ಜಿಲ್ಲಾ ಕಲೋತ್ಸವದ ಗ್ರೂಪ್ ಸ್ಪಧರ್ೆಗಳಲ್ಲಿ ವಿಜೇತರಾದ ವಿದ್ಯಾಥರ್ಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ರಾಜ್ಯದ ಮೊದಲ ಮುಖ್ಯಮಂತ್ರಿ ಇ.ಎಂ.ಎಸ್.ನಂಬೂದಿರಿಪ್ಪಾಡ್ ಅವರ ಸ್ಮರಣಾರ್ಥ ನೀಲೇಶ್ವರದಲ್ಲಿ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ. ಕೇರಳ ವಿಧಾನಸಭೆಯ ಇತಿಹಾಸ ಮತ್ತು ಪರಿಣಾಮಗಳನ್ನು ಪ್ರದಶರ್ಿಸಲು ಯೋಜನೆ ರೂಪಿಸಲಾಗಿದೆ.
ಡಿಸೆಂಬರ್ 5ರಂದು ಕಾಸರಗೋಡು ನಗರಸಭೆಯ ಸಭಾಂಗಣದಲ್ಲಿ ಅಧಿಕಾರ ವಿಕೇಂದ್ರೀಕರಣ ವಿಚಾರ ಸಂಕಿರಣ ನಡೆಯಲಿದೆ. ಕಾಂಞಂಗಾಡು ದುಗರ್ಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಾಲೇಜು ಹಾಗೂ ಹೈಯರ್ ಸೆಕೆಂಡರಿ ಶಾಲಾ ವಿದ್ಯಾಥರ್ಿಗಳು ಭಾಗವಹಿಸುವ ಮಾದರಿ ವಿಧಾನಸಭೆಯನ್ನು ಏರ್ಪಡಿಸಲಾಗುವುದು. ವಿಧಾನಸಭಾ ಸ್ಪೀಕರ್, ಜಿಲ್ಲೆಯ ವಿಧಾನಸಭಾ ಸದಸ್ಯರು ಮಾದರಿ ವಿಧಾನಸಭೆಯನ್ನು ವೀಕ್ಷಿಸಲು ಆಗಮಿಸುವರು.
ಜಿಲ್ಲೆಯ ಸರಕಾರಿ ಮತ್ತು ಅನುದಾನಿತ ಶಾಲೆಗಳಿಂದ ಆಯ್ಕೆಯಾಗುವ 30 ಮಂದಿ ವಿದ್ಯಾಥರ್ಿಗಳು, ಮಾದರಿ ಸಹವಾಸ ಶಾಲೆಯ ತಲಾ ಇಬ್ಬರು ವಿದ್ಯಾಥರ್ಿಗಳು, ಶಾಲಾ ಮಾದರಿ ಪಾಲರ್ಿಮೆಂಟ್ ಸ್ಪಧರ್ೆಯಲ್ಲಿ ರಾಜ್ಯಮಟ್ಟದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ವಿವಿಧ ಶಾಲೆಗಳ 30 ಮಂದಿ ವಿದ್ಯಾಥರ್ಿಗಳು ಮಾದರಿ ವಿಧಾನಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆಯ್ದ ವಿದ್ಯಾಥರ್ಿಗಳಿಗಾಗಿ ವಿಧಾನಸಭಾ ಸೆಕ್ರೆಟರಿಯೇಟ್ನಲ್ಲಿ ಎರಡು ದಿನಗಳ ತರಬೇತಿ ಕಾರ್ಯಕ್ರಮ ನಡೆಯಲಿದೆ.
ನ.25ರಂದು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡುವಿನಲ್ಲಿ ಕಾಲೇಜು ವಿದ್ಯಾಥರ್ಿಗಳಿಗೆ ಹಾಗೂ ಸಾರ್ವಜನಿಕರಿಗೆ ಪೈಂಟಿಂಗ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಪ್ರಾದೇಶಿಕ ಮಟ್ಟದಲ್ಲಿ ಸಂಘಟಕ ಸಮಿತಿಗಳನ್ನು ರೂಪಿಸಲು ನಿರ್ಧರಿಸಲಾಯಿತು. ನ.13ರಂದು ಬೆಳಿಗ್ಗೆ 11ಗಂಟೆಗೆ ಕಾಸರಗೋಡು, 14ರಂದು ಅಪರಾಹ್ನ 3ಗಂಟೆಗೆ ನೀಲೇಶ್ವರದಲ್ಲಿ , 15ರಂದು ಕಾಞಂಗಾಡು, 19ರಂದು ಮಂಜೇಶ್ವರದಲ್ಲಿ ಸ್ವಾಗತ ಸಮಿತಿ ರಚನಾ ಸಭೆಯು ಸಂಘಟಿಸಲಾಗಿದೆ.
ಸ್ವಾಗತ ಸಮಿತಿಯ ಸಭೆಯಲ್ಲಿ ತೃಕ್ಕರಿಪುರ ಶಾಸಕ ಎಂ.ರಾಜಗೋಪಾಲನ್, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು , ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್, ಮಾಜಿ ಸಚಿವ ಸಿ.ಟಿ.ಅಹಮ್ಮದಾಲಿ, ಮಾಜಿ ಶಾಸಕ ಎ.ಎಂ.ನಾರಾಯಣನ್, ನೀಲೇಶ್ವರ ನಗರಸಭಾ ಅಧ್ಯಕ್ಷ ಪ್ರೊ.ಕೆ.ಪಿ.ಜಯರಾಜನ್, ಎಡಿಎಂ ಎಚ್.ದಿನೇಶನ್ ಮೊದಲಾದವರು ಮಾತನಾಡಿದರು.
ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಗೋವಿಂದನ್ ಪಳ್ಳಿಕ್ಕಾಪಿಲ್, ನ್ಯಾಯವಾದಿ ಕೆ.ಶ್ರೀಕಾಂತ್, ಮುಹಮ್ಮದ್ ಹನೀಫ್, ಕೃಷ್ಣನ್ ನಂಬಿಯಾರ್, ನ್ಯಾಶನಲ್ ಅಬ್ದುಲ್ಲ , ಮುಹಮ್ಮದಾಲಿ ಕುಂಬಳೆ, ಕರಿವೆಳ್ಳೂರು ವಿಜಯನ್, ಎಂ.ಕುಂಞಂಬು ನಂಬಿಯಾರ್, ಅಜೀಜ್ ಕಡಪ್ಪುರ, ವಿಧಾನಸಭಾ ಸಹಾಯಕ ಕಾರ್ಯದಶರ್ಿ ಎಸ್.ಅನಿಲ್, ವಿಧಾನಸಭಾ ಸ್ಪೀಕರ್ನ ಖಾಸಗಿ ಸಹಾಯಕ ಸಿ.ವಿನೋದ್, ವಿಧಾನಸಭಾ ಸಹಾಯಕ ಸೆಕ್ಷನ್ ಅಧಿಕಾರಿ ಎಸ್.ಸಾಜು ಅಲ್ಲದೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
* ಸಂಸದರು, ಶಾಸಕರು, ಮಾಜಿ ಶಾಸಕರು, ಮೊದಲ ವಿಧಾನಸಭೆಗೆ ಸ್ಪಧರ್ಿಸಿದರು, ಸ್ವಾತಂತ್ರ್ಯ ಹೋರಾಟಗಾರರು ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾತ್ರವಲ್ಲದೆ ಮೊದಲ ವಿಧಾನಸಭೆಗೆ ಮತ ಚಲಾಯಿಸಿದವರು ಕೂಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ವಜ್ರ ಮಹೋತ್ಸವ ಕಾರ್ಯಕ್ರಮದ ಸಂಪೂರ್ಣ ಯಶಸ್ವಿಗೆ ಸಿದ್ಧತೆಗಳು ನಡೆಯುತ್ತಿದ್ದು, ಅಗತ್ಯದ ರೂಪುರೇಷೆಗಳನ್ನು ತಯಾರಿಸಲಾಗುತ್ತಿದೆ.
- ಇ.ಚಂದ್ರಶೇಖರನ್,
ಸಚಿವರು, ಕಂದಾಯ ಇಲಾಖೆ