HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ನೋಟು ರದ್ದತಿಗೆ ವರ್ಷಪೂರ್ಣ; ಸಾಧಿಸಿದ್ದು ಏನು?, ಕಾಸರಗೋಡು: ವರ್ಷದ ಹಿಂದೆ (ನವೆಂಬರ್ 8, 2016) ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ ಟೆಲಿವಿಷನ್ನಲ್ಲಿ ಯಾವುದೇ ಪೂರ್ವ ಸೂಚನೆ ಇಲ್ಲದೇ ದೇಶಬಾಂಧವರನ್ನು ಉದ್ದೇಶಿಸಿ 'ಬಾಹಿಂಯೊ ಔರ್ ಬೆಹೆನೊ... ಎಂದು ಮಾತು ಆರಂಭಿಸಿ ಗರಿಷ್ಠ ಮುಖಬೆಲೆಯ ? 500 ಮತ್ತು ? 1,000 ನೋಟುಗಳನ್ನು ರದ್ದುಪಡಿಸುತ್ತಿರುವುದಾಗಿ ಘೋಷಿಸುತ್ತಿದ್ದಂತೆ ಏ.ಸಿ ಕೋಣೆಯಲ್ಲಿ ಇದ್ದವರೂ ಬೆವರಲಾರಂಭಿಸಿದ್ದರು. ಅಂದು ನಾನು ಕಾರ್ಯನಿಮಿತ್ಯ ಸಂಬಂಧಿಕರ ಮನೆಯಲ್ಲಿದ್ದೆ. ಟಿವಿಯಲ್ಲಿ ಸುದ್ದಿ ನೋಡುತ್ತಿದ್ದಂತೆ ಸಂಬಂಧಿಕರೊಬ್ಬರು ಸೋಫಾದಲ್ಲಿ ಕುಳಿತಲ್ಲಿಯೇ ಚಡಪಡಿಸತೊಡಗಿದ್ದರು.ಸ್ವಲ್ಪ ಹೊತ್ತಿನ ನಂತರ ಕುಟುಂಬದ ಸದಸ್ಯರೆಲ್ಲ ಸೇರಿ ಮೀನಿನ ಊಟ ಚಪ್ಪರಿಸಿ ತಿನ್ನುತ್ತಿದ್ದರೂ ಅವರಿಗೆ ಅದ್ಯಾವುದೂ ರುಚಿಸಿರಲಿಲ್ಲ. ಮ್ಲಾನವದನದವರಾಗಿ ಅರೆ ಮನಸ್ಸಿನಿಂದಲೇ ಊಟ ಮಾಡುತ್ತಿದ್ದರು. ಅವರ ಧ್ಯಾನವೆಲ್ಲ ಬೇರೆಲ್ಲೋ ನೆಟ್ಟಿತ್ತು. ತುತ್ತಿಗೊಂದು ನೀರು ಕುಡಿಯುತ್ತಿದ್ದರು. `ಛೇ ಹೀಗಾಯಿತಲ್ಲ, ಏನು ಮಾಡೋದು' ಎಂದು ತಲೆಮೇಲೆ ಕೈಇಟ್ಟುಕೊಂಡು ಕುಳಿತಿದ್ದರು. ಇದು ಒಬ್ಬರ ಕತೆಯಲ್ಲ. ಅಂದು ಕೋಟ್ಯಂತರ ಭಾರತೀಯರ ಪರಿಸ್ಥಿತಿ ಇದೇ ಬಗೆಯಲ್ಲಿತ್ತು ಎಂದರೆ ಅತಿಶಯೋಕ್ತಿ ಎನಿಸದು. ವಿದೇಶದಲ್ಲಿ ದುಡಿಯುತ್ತಿದ್ದ ಸೋದರನ ಕೆಲ ಲಕ್ಷ ನಗದು ಅವರ ಮನೆಯಲ್ಲಿ ಇತ್ತು. ಅದನ್ನು ಹೇಗೆ ನಿರ್ವಹಿಸಬೇಕು ಎನ್ನುವುದು ಅವರ ಆ ಕ್ಷಣದ ತಲೆನೋವಾಗಿತ್ತು ಎಂಬುದು ಆನಂತರ ತಿಳಿದು ಬಂದಿತು. ಮೋದಿ ಭಾಷಣ ಕೇಳುತ್ತಿರುವಾಗಲೇ ಅನೇಕರ ಮುಖ ಕಪ್ಪಿಟ್ಟ ತೊಡಗಿತ್ತು. ಭಾಷಣದ ಬೆನ್ನಲ್ಲೇ, ಟೆಲಿವಿಷನ್ ಚಾನೆಲ್ಗಳಲ್ಲಿ ದೀಢೀರನೆ ಚಚರ್ೆ ಸಂವಾದಗಳು ನಡೆಯತೊಡಗಿದ್ದವು. ಅಲ್ಪಾವಧಿಯಲ್ಲಿ ಈ ನಿಧರ್ಾರವು ಸಂಕಷ್ಟಗಳನ್ನು ತಂದೊಡ್ಡಲಿದ್ದರೂ, ದೀಘರ್ಾವಧಿಯಲ್ಲಿ ಇದರಿಂದ ಆಥರ್ಿಕತೆಗೆ ಒಳಿತಾಗಲಿದೆ ಎಂದೇ ಆಥರ್ಿಕ ಪರಿಣತರು ಅಭಿಪ್ರಾಯ ಮಂಡಿಸತೊಡಗಿದ್ದರು. ಈ ವಾದ ಒಪ್ಪದ ಇನ್ನೂ ಕೆಲವರು ಆಥರ್ಿಕತೆ ಮೇಲೆ ಅದರಿಂದಾಗಲಿರುವ ಗಂಭೀರ ಸ್ವರೂಪದ ಅಪಾಯಗಳನ್ನು ಪಟ್ಟಿ ಮಾಡತೊಡಗಿದ್ದರು. ಸತ್ಯ ಇವೆರೆಡರ ಮಧ್ಯೆ ಅಲ್ಲೆಲ್ಲೋ ಅಡಗಿತ್ತು. ಗೃಹಿಣಿಯರು, ಚಿಲ್ಲರೆ, ಸಗಟು ವರ್ತಕರು, ರಿಯಲ್ ಎಸ್ಟೇಟ್ ವಹಿವಾಟುದಾರರು, ಕಾಳಧಣಿಕರು ಕುಂತಲ್ಲೇ ಚಡಪಡಿಸ ತೊಡಗಿದ್ದರು. ಉದ್ಯಮಿಗಳು, ರಾಜಕಾರಣಿಗಳೂ ಈ ನಿಧರ್ಾರದ ಲಾಭ ನಷ್ಟಗಳನ್ನು ಲೆಕ್ಕ ಹಾಕತೊಡಗಿದ್ದರು. ಗಂಡನ, ತೆರಿಗೆ ಅಧಿಕಾರಿಗಳ ಕಣ್ತಪ್ಪಿಸಿ ಕೂಡಿಟ್ಟ ಹಣವನ್ನು ಅನಿವಾರ್ಯವಾಗಿ ಹೊರತೆಗೆಯಬೇಕಾಗಿ ಬಂದಿರುವುದಕ್ಕೆ ಅನೇಕರ ಮುಖದಲ್ಲಿನ ನಗುವೇ ಮಾಯವಾಗಿತ್ತು. `ಅಯ್ಯೋ ದೇವರೆ, ಇದೆಲ್ಲ ಏನಾಯಿತು. ಕೂಡಿಟ್ಟಿದ್ದನ್ನು ಅರಗಿಸಿಕೊಳ್ಳುವುದು ಹೇಗೆ' ಎನ್ನುವ ಆತಂಕದಿಂದಲೇ ಅನೇಕರು ನಿದ್ರಾದೇವಿಗೆ ಶರಣಾಗಲು ಹೋದರೂ ನಿದ್ದೆ ಹತ್ತಿರ ಸುಳಿಯಲಿಲ್ಲ. ಆಘಾತದಿಂದ ಹೊರ ಬರಲು ಕೆಲವರು ಮದಿರೆಯ ಮೊರೆ ಹೊಕ್ಕರೂ, ಮದ್ಯ ಇಳಿಯದ ಗಂಟಲಲ್ಲಿ ಹಳೆ ನೋಟುಗಳನ್ನೇ ತುರುಕಿದಂತಾಗಿ ಆಘಾತಗೊಂಡು ಏದುಸಿರು ಬಿಡುತ್ತಿದ್ದರು. ಕೆಟ್ಟ ಕನಸು ಬಿದ್ದವರಂತೆ ನಿದ್ದೆಯಲ್ಲಿಯೇ ಎದ್ದುಕುಳಿತುಕೊಂಡು ನಿಟ್ಟುಸಿರು ಬಿಡುತ್ತಿದ್ದರು. ವರ್ಷ ಕಳೆದರೂ ದೇಶಿ ಆಥರ್ಿಕತೆ ಕೂಡ ಇನ್ನೂ ಏದುಸಿರು ಬಿಡುತ್ತಲೇ ಇದೆ... ಮೊನ್ನೆಯಷ್ಟೇ ಆಟೊ ಚಾಲಕನು ಹೇಳಿದ ಮಾತು ಒಟ್ಟಾರೆ ಈ ಬೆಳವಣಿಗೆಗೆ ಕನ್ನಡಿ ಹಿಡಿಯುತ್ತದೆ. `ಥೂ, ನೋಟು ರದ್ದಾಗಿ ನನ್ನ ವಹಿವಾಟೆಲ್ಲ ಹಾಳಾಯಿತು. ಮೋದಿ ಮಾಡಿದ ಎಡವಟ್ಟಿನಿಂದಾಗಿ ಚೇತರಿಸಿಕೊಳ್ಳಲು ಈಗಲೂ ಸಾಧ್ಯವಾಗಿಲ್ಲ ನೋಡ್ರಿ' ಎಂದು ಬೇಸರಿಸಿಕೊಂಡೇ ಬೀಡಿಗೆ ಕಡ್ಡಿ ಗೀರಿದ. ಒಂದು ವರ್ಷದ ನಂತರವೂ ಭಾರತೀಯ ರಿಸವರ್್ ಬ್ಯಾಂಕ್, ಬ್ಯಾಂಕ್ಗಳಿಗೆ ಕಟ್ಟಿದ ಹಳೆಯ ನೋಟುಗಳನ್ನು ಇನ್ನೂ ಎಣಿಸುತ್ತಲೇ ಇದೆ. ಈಗಲೂ ಸರಿಯಾದ ಲೆಕ್ಕ ಸಿಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ. ಇಂತಹ ಪುರುಷಾರ್ಥಕ್ಕೆ ನೋಟು ರದ್ದತಿ ಮಾಡಬೇಕಾಗಿತ್ತೇ ಎನ್ನುವ ಪ್ರಶ್ನೆ ಈಗಲೂ ಅನೇಕರನ್ನು ಕಾಡುತ್ತಿರುವುದು ಸುಳ್ಳಲ್ಲ. ಕಳೆದ ವಾರ (ನವೆಂಬರ್ 1ರಂದು) ಸಂಬಳದ ಹಣ ಪಡೆಯಲು ಎಟಿಎಂಗೆ ಹೋದರೆ ಎರಡು ಸಾವಿರದ ನೋಟುಗಳೇ ಕೈಗೆ ಬಂದು ನನ್ನ ನೋಡಿ ಅಣಕಿಸಿದಂತೆ ಭಾಸವಾಯಿತು. ಇದೇನಿದು, ವರ್ಷವಾದರೂ ನೋಟುಗಳ ಬರ ನೀಗಿಲ್ಲವಲ್ಲ. ತರಕಾರಿ, ಹಾಲಿನವ, ಬಟ್ಟೆ ಇಸ್ತ್ರಿ ಮಾಡಿಕೊಡುವವರಿಗೆ ಹತ್ತಿಪ್ಪತ್ತು, ನೂರು, ನೂರ ಐವತ್ತು, ಚಿಲ್ಲರೆ ಹೊಂದಿಸುವುದಾದರೂ ಎಲ್ಲಿ ಎಂದು ಗೊಣಗುತ್ತಲೇ ಹೊರ ಬಂದೆ. ಈಗ ಮಿತ್ರೋ ಎಂದು ಬದಲಾಗಿರುವ ಭಾಹಿಯೊ, ಬೆಹನೊ... ಭಾಷಣದ ವರಸೆ ಮತ್ತು ಆರ್ಬಿಐನ ಮುಗಿಯದ ನೋಟುಗಳ ಎಣಿಕೆ ಮಧ್ಯೆ ಸಾಕಷ್ಟು ಹಳೆಯ ಹೊಸ ನೋಟುಗಳು ಕೈಬದಲಾಯಿಸಿವೆ. ಕೆಲ ಪ್ರಮಾಣದ ಕಪ್ಪು ಹಣ ಹೊರ ಬಂದಿದೆ. ತೆರಿಗೆ ಪಾವತಿ ಪ್ರಮಾಣ ಹೆಚ್ಚಿದೆ. ಡಿಜಿಟಲ್ ವಹಿವಾಟಿಗೆ ಕೊಂಚ ವೇಗ ಸಿಕ್ಕಿದೆ. ಇದನ್ನಿಷ್ಟು ಸಾಧಿಸಲು ಜನರ ಬದುಕಿಗೆ, ದೇಶದ ಆಥರ್ಿಕತೆಗೆ ಸಂಕಷ್ಟ ತಂದೊಡ್ಡುವ ಅಗತ್ಯ ಇತ್ತೇ. ಇದರಿಂದ ಯಾವ ಪುರುಷಾರ್ಥ ಸಾಧಿಸಲಾಯಿತು ಎನ್ನುವ ಪ್ರಶ್ನೆಗಳಿಗೆ ಈಗಲೂ ಸಮಾಧಾನಕರ ಉತ್ತರ ಸಿಗದೆ ಉಳಿದುಕೊಂಡಿವೆ. ಮುಂದುವರೆದ ದೇಶಗಳ ಜತೆ ಸ್ಪಧರ್ಿಸಲು ಕಡಿಮೆ ನಗದು ಬಳಕೆ ಮತ್ತು ನಗದುರಹಿತ ಸಮಾಜ ನಿಮರ್ಾಣಗೊಳ್ಳುವುದು ಸದ್ಯದ ಅಗತ್ಯವಾಗಿದೆ *ಉಪಾಸನಾ ಟಕು, ಮೊಬಿಕ್ವಿಕ್ ಸಹ ಸ್ಥಾಪಕಿ ಲೆಕ್ಕಕ್ಕೆ ಸಿಗದ ಹಣವನ್ನು ವ್ಯವಸ್ಥೆ ವ್ಯಾಪ್ತಿಗೆ ತರುವ ಮತ್ತು ತೆರಿಗೆ ಪಾವತಿ ಹೆಚ್ಚಿಸುವ ಉದ್ದೇಶವು ಆಥರ್ಿಕತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ * ಆಶೀಶ್ ಕುಮಾರ್ ಚೌಹಾಣ್, ಬಿಎಸ್ಇ ಸಿಇಒ ನೋಟು ರದ್ದತಿ ನಿಧರ್ಾರ ಈಗ ಒಂದು ಸುತ್ತು ಪೂರ್ಣಗೊಳಿಸಿದೆ, ಭವಿಷ್ಯದಲ್ಲಿ ರಿಯಲ್ ಎಸ್ಟೇಟ್ ವಲಯಕ್ಕೆ ಉತ್ತಮ ದಿನಗಳು ಕಾದಿವೆ ಎಂದು ಆಶಿಸುವೆ *ಶಿಶಿರ್ ಬೈಜಲ್, ನೈಟ್ ಫ್ರ್ಯಾಂಕ್ ಇಂಡಿಯಾ ಅಧ್ಯಕ್ಷ ನೋಟು ರದ್ದು, ಜಿಎಸ್ಟಿ: ಸಂಪನ್ಮೂಲ ಸಂಗ್ರಹ ಇಳಿಮುಖ ನೋಟು ರದ್ದತಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿ ಬಳಿಕ ರಾಜ್ಯ ಸಕರ್ಾರಕ್ಕೆ ತೆರಿಗೆ, ತೆರಿಗೆಯೇತರ ಮೂಲದಿಂದ ಬರುವ ಆದಾಯ ಇಳಿಮುಖವಾಗಿದೆ. ರಾಜ್ಯ ಸಕರ್ಾರಗಳಿಗೆ ಈ ಆಥರ್ಿಕ ಸಾಲಿನಲ್ಲಿ ಎಲ್ಲ ಮೂಲದಿಂದ 1,44,892 ಕೋಟಿ ಸಂಗ್ರಹವಾಗಬೇಕು. ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕ ಅವಧಿಯವರೆಗೆ ?67,894 ಕೋಟಿ ಸಂಗ್ರಹವಾಗಿದೆ. ಎರಡನೇ ತ್ರೈಮಾಸಿಕ ಅವಧಿ ಮುಗಿಯುವ ಹೊತ್ತಿಗೆ ಆಯವ್ಯಯ ಅಂದಾಜಿನ ಶೇ 49 ರಷ್ಟು ವಸೂಲಿಯಾಗುವುದು ರೂಢಿ. ಆದರೆ, ಈ ವರ್ಷ ಶೇ 46.9 ರಷ್ಟು ಮೊತ್ತ ಸಂಗ್ರಹವಾಗಿದ್ದು, ಶೇ 2.1ರಷ್ಟು ಕಡಿಮೆಯಾಗಿದೆ ಎಂದು ಆಥರ್ಿಕ ಇಲಾಖೆ ಮೂಲಗಳು ತಿಳಿಸಿವೆ. ಒಂದು ದಶಕದ ಈಚೆಗಿನ ಅಂಕಿ ಅಂಶ ಗಮನಿಸಿದರೆ ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹದ ವಾಷರ್ಿಕ ಬೆಳವಣಿಗೆ ದರ ಸಾಮಾನ್ಯವಾಗಿ ಶೇ 20ರಿಂದ ಶೇ 29ರಷ್ಟು ಹೆಚ್ಚಳವಾಗುತ್ತಿತ್ತು. 2014ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಬೆಳವಣಿಗೆ ದರ ಶೇ 21ರಷ್ಟಿತ್ತು. 2016ರಲ್ಲಿ ಶೇ 16.9ರಷ್ಟಿತ್ತು. ಆದರೆ, ನೋಟು ರದ್ದತಿ ಮತ್ತು ಜಿಎಸ್ಟಿಯಿಂದಾಗಿ ಈ ದರ ಶೇ 7.1ಕ್ಕೆ ಕುಸಿದಿದೆ ಎಂದು ಮೂಲಗಳು ವಿವರಿಸಿವೆ. ಮದ್ಯ ಮಾರಾಟದಿಂದ ಈ ವರ್ಷ 18,050 ಕೋಟಿ ಸಂಗ್ರಹವಾಗಬೇಕಿದೆ. ಸೆಪ್ಟೆಂಬರ್ ಅಂತ್ಯದವರೆಗೆ 8,539 ಕೋಟಿ ಸಂಗ್ರಹವಾಗಿದೆ. ಮೋಟಾರು ವಾಹನ ತೆರಿಗೆಯ ನಿರೀಕ್ಷಿತ ಗುರಿ ?6,006 ಕೋಟಿ, ಸೆಪ್ಟೆಂಬರ್ ಅಂತ್ಯಕ್ಕೆ ?2870 ಕೋಟಿ ಸಂಗ್ರಹವಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 50ರಷ್ಟು ಮೊತ್ತ ಸಂಗ್ರಹವಾಗಿದ್ದರೆ, ಈ ಬಾರಿ ಶೇ 47ರಷ್ಟು ಸಂಗ್ರಹವಾಗಿದೆ. ನೋಟು ರದ್ದತಿ ಬಳಿಕ ನಿವೇಶನ, ಮನೆ, ಫ್ಲ್ಯಾಟ್ ಹಾಗೂ ಭೂಮಿ ಮಾರಾಟ ಕಡಿಮೆ ಆಗಿದೆ. ನೋಂದಣಿ ಮತ್ತು ಮುದ್ರಾಂಕ ತೆರಿಗೆ ರೂಪದಲ್ಲಿ ?9,000 ಕೋಟಿ ಸಂಗ್ರಹಿಸುವ ಗುರಿಯಿದ್ದು, ಆರು ತಿಂಗಳಲ್ಲಿ ಶೇ 45ರಷ್ಟು ಅಂದರೆ ?4,127 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ?4,006 ಕೋಟಿ ಸಂಗ್ರಹವಾಗಿತ್ತು. ತೆರಿಗೆಯೇತರ ಆದಾಯ ಕುಸಿತ: ಬಳಕೆದಾರರ ಶುಲ್ಕ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಉದ್ಯಮಗಳಿಂದ ಬರಬೇಕಾದ ಬಡ್ಡಿ ಮತ್ತು ಬಾಕಿ ವಸೂಲಿಯಿಂದ ಸಂಗ್ರಹವಾಗಬೇಕಿದ್ದ ತೆರಿಗೆಯೇತರ ಆದಾಯದಲ್ಲಿ ನಕಾರಾತ್ಮಕ ಬೆಳವಣಿಗೆ ಕಾಣಿಸಿದೆ. ಈ ವರ್ಷ ?6,945 ಕೋಟಿ ಸಂಗ್ರಹವಾಗಬೇಕಿದ್ದು, ಮೊದಲ ಆರು ತಿಂಗಳಿನಲ್ಲಿ ?2601 ಕೋಟಿ ವಸೂಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ?3182 ಕೋಟಿ ಸಂಗ್ರಹವಾಗಿತ್ತು. ಅಲ್ಲಿಗೆ ?581 ಕೋಟಿ ಕೊರತೆಯಾಗಿದೆ. ಕೇಂದ್ರ ಸಕರ್ಾರದ ಸಹಾಯಧನದ ಪ್ರಮಾಣ ಕಳೆದ ವರ್ಷ ಇದೇ ಅವಧಿಯಲ್ಲಿ ?8,866 ಕೋಟಿ ಬಂದಿತ್ತು. ಈ ವರ್ಷ ?8,368 ಕೋಟಿ ಬಂದಿದೆ. ಈ ಮೂಲದಿಂದ ಆರು ತಿಂಗಳಲ್ಲಿ ?496 ಕೋಟಿ ಕೊರತೆ ಕಾಣಿಸಿದೆ ಎಂದು ಆಥರ್ಿಕ ಇಲಾಖೆ ಮೂಲಗಳು ತಿಳಿಸಿವೆ. ಸಂಪನ್ಮೂಲ ಸಂಗ್ರಹದಲ್ಲಿ ಶೇಕಡಾವಾರು ಏರಿಕೆ ದರ (ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ) ತೆರಿಗೆ ವಿಧ, 2016, 2017 ಸ್ವಂತ ತೆರಿಗೆ, 11.5,8.8 ವಾಣಿಜ್ಯ ತೆರಿಗೆ,13.3, 7.9 ಅಬಕಾರಿ ತೆರಿಗೆ,8.2, 5.9 ಮೋಟಾರು ವಾಹನ ತೆರಿಗೆ,19.1 11.1 ನೋಂದಣಿ, ಮುದ್ರಾಂಕ,7.0 3.0 ತೆರಿಗೆಯೇತರ ಆದಾಯ,43.8, ?18.3 ಆದಾಯ ಸಂಗ್ರಹದ ಬೆಳವಣಿಗೆ ದರ(ಎರಡನೆ ತ್ರೈಮಾಸಿಕಕ್ಕೆ) 2014 21.6 2015 11.3 2016 16.9 2017 07.1 ಕಪ್ಪುಹಣ ತಡೆಯಲು ನೋಟು ರದ್ದತಿ ವಿಫಲ ನೋಟು ರದ್ದತಿಯು ಕಪ್ಪುಹಣದ ಮೇಲೆ ಯಾವುದೇ ಪ್ರಭಾವ ಬೀರಿಲ್ಲ ಎಂದು ಎನ್ಜಿಒಗಳ ಕೂಟವೊಂದು ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ ಅರ್ಧಕ್ಕೂ ಹೆಚ್ಚು ಜನರು ಅಭಿಪ್ರಾಯಪಟ್ಟಿದ್ದಾರೆ. ಭಯೋತ್ಪಾದನೆ ತಡೆಯುವಲ್ಲಿಯೂ ಇದು ಪರಿಣಾಮಕಾರಿ ಆಗಿಲ್ಲ ಎಂದು ಅವರು ಹೇಳಿದ್ದಾರೆ. 21 ರಾಜ್ಯಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ 3,647 ಜನರು ಭಾಗವಹಿಸಿದ್ದರು. ನೋಟು ರದ್ದತಿಯಿಂದ ಉದ್ಯಮಗಳಿಗಷ್ಟೇ ಪ್ರಯೋಜನವಾಗಿದೆ ಎಂದು ಇವರಲ್ಲಿ ಮೂರನೇ ಒಂದರಷ್ಟು ಜನರು ಹೇಳಿದ್ದಾರೆ. ಬಡ ಜನರಿಗೆ ನಗದುರಹಿತವಾಗಿ ವ್ಯವಹಾರ ನಡೆಸುವುದು ಕಷ್ಟ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಮೂರನೇ ಎರಡರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಸಕರ್ಾರವು ಚಲಾವಣೆಯಿಂದ ಹಿಂದಕ್ಕೆ ಪಡೆದು ಒಂದು ವರ್ಷ ತುಂಬುವುದರ ಮುನ್ನಾದಿನ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ. ದೆಹಲಿಯ ಅನ್ಹದ್ ಎಂಬ ಎನ್ಜಿಒ ನೇತೃತ್ವದಲ್ಲಿ 32 ಎನ್ಜಿಒಗಳು ಜತೆಯಾಗಿ ಈ ಸಮೀಕ್ಷೆ ನಡೆಸಿವೆ. ಕಪ್ಪುಹಣ ನಿಮರ್ೂಲನೆಗೆ ನೋಟು ರದ್ದತಿಯಿಂದ ಯಾವ ನೆರವೂ ಆಗಿಲ್ಲ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಚಾಲಕರಲ್ಲಿ ಶೇ 83.3ರಷ್ಟು ಮಂದಿ, ರಿಕ್ಷಾವಾಲಾಗಳಲ್ಲಿ ಶೇ 69.2ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಕಪ್ಪುಹಣ ನಿಮರ್ೂಲನೆಗೆ ನೋಟು ರದ್ದತಿ ನೆರವಾಗಿದೆ ಎಂಬ ಸಕರ್ಾರದ ಪ್ರತಿಪಾದನೆಗೆ ಯುವ ಸಮೂಹದಲ್ಲಿ ಹೆಚ್ಚು ಒಪ್ಪಿಗೆ ಕಾಣಿಸಿದೆ. ಯುವ ಜನರಲ್ಲಿ ಶೇ 35.2ರಷ್ಟು ಮಂದಿ ಕಪ್ಪುಹಣ ನಿಮರ್ೂಲನೆಗೆ ನೋಟು ರದ್ದತಿ ನೆರವಾಗಿದೆ ಎಂದಿದ್ದಾರೆ. ಆದರೆ ವಯಸ್ಸು ಹೆಚ್ಚಿದಂತೆ ಈ ಒಪ್ಪಿಗೆಯ ಪ್ರಮಾಣ ಕುಸಿಯುತ್ತ ಸಾಗಿದೆ. 46?55ರ ವಯಸ್ಸಿನವರ ಒಪ್ಪಿಗೆ ಪ್ರಮಾಣ ಶೇ 15.5 ಮಾತ್ರ. ನೋಟು ರದ್ದತಿಯಿಂದಾಗಿ ಭಯೋತ್ಪಾದನಾ ಚಟುವಟಿಕೆ ಇಳಿಕೆಯಾಗಿದೆ ಎಂಬುದನ್ನು ಸಮೀಕ್ಷೆಯಲ್ಲಿ ಭಾಗವಹಿಸಿದ 48.2ರಷ್ಟು ಜನರು ಒಪ್ಪಿಲ್ಲ. ಪಾಕಿಸ್ತಾನದಿಂದ ಉಗ್ರರ ನುಸುಳುವಿಕೆ ಕಡಿಮೆಯಾಗಿದೆಯೇ ಎಂಬ ಪ್ರಶ್ನೆಗೆ ಶೇ 45.4ರಷ್ಟು ಜನರು `ಇಲ್ಲ' ಎಂದೇ ಉತ್ತರಿಸಿದ್ದಾರೆ. ಆದರೆ ಗಡಿಯಾಚೆಗಿನ ಭಯೋತ್ಪಾದನೆ ಕಡಿಮೆಯಾಗಿದೆ ಎಂದು ಶೇ 32ರಷ್ಟು ಜನರು ಹೇಳಿದ್ದಾರೆ. ರೈತರು, ಕಾಮರ್ಿಕರು, ಮನೆಗೆಲಸದವರು, ರಿಕ್ಷಾವಾಲಾಗಳು ಮತ್ತು ತರಕಾರಿ ಮಾರುವವರಿಗೆ ನಗದು ಇಲ್ಲದೆಯೇ ತಮ್ಮ ವ್ಯವಹಾರ ನಡೆಸುವುದು ಸಾಧ್ಯವೇ ಎಂಬ ಪ್ರಶ್ನೆಗೆ `ಸಾಧ್ಯವಿಲ್ಲ' ಎಂದು ಶೇ 68ರಷ್ಟು ಜನರು ಉತ್ತರಿಸಿದ್ದಾರೆ. ನೋಟು ರದ್ದತಿಯಿಂದಾಗಿ ಕೆಲಸ ಕಳೆದುಕೊಂಡವರು ಮತ್ತು ಮದುವೆ ಮುಂದೂಡಿಕೆಯಾದವರು ತಮಗೆ ಗೊತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 50ರಷ್ಟು ಜನರು ಹೇಳಿದ್ದಾರೆ. ನೋಟು ರದ್ದತಿಯು ರೈತರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಶೇ 60ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. `ಸಮಾಜದ ವಿವಿಧ ವರ್ಗಗಳ ಮೇಲೆ ನೋಟು ರದ್ದತಿಯ ಪರಿಣಾಮವನ್ನು ಅಳೆಯುವುದು ಈ ಸಮೀಕ್ಷೆಯ ಉದ್ದೇಶವಾಗಿತ್ತು. ಇದು ಪ್ರಾತಿನಿಧಿಕ ಮಾದರಿ ಸಂಗ್ರಹಿಸಿ ನಡೆಸಿದ ಸಮೀಕ್ಷೆ ಅಲ್ಲ ಎಂದು ಆಥರ್ಿಕ ತಜ್ಞ ಪ್ರೊ. ಅರುಣ್ ಕುಮಾರ್ ಹೇಳಿದ್ದಾರೆ. ಬಡ ಜನರ ಮೇಲೆ ಇದು ಪರಿಣಾಮ ಬೀರಿದೆ ಎಂಬುದು ಸ್ಪಷ್ಟ. ಆದರೆ ನೋಟು ರದ್ದತಿಯ ಬಳಿಕ ನಡೆದ ಚುನಾವಣೆಗಳಲ್ಲಿ ಆಡಳಿತ ಪಕ್ಷ ಗೆದ್ದಿದೆ. ಹಾಗಾಗಿ ಆ ಪಕ್ಷಕ್ಕೆ ಇದರ ಬಿಸಿ ತಟ್ಟಿಲ್ಲ. ಆಥರ್ಿಕ ಪರಿಣಾಮ ರಾಜಕೀಯ ಪರಿಣಾಮವಾಗಿ ಪರಿವರ್ತನೆ ಆಗಿಲ್ಲ. ಈ ವಿದ್ಯಮಾನವನ್ನು ಇನ್ನಷ್ಟು ಅಧ್ಯಯನ ಮಾಡಬೇಕಿದೆ ಎಂದು ಅರುಣ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. *** ಕಪ್ಪುಹಣದ ಮೇಲೆ ನೋಟು ರದ್ದತಿಯ ಪ್ರಭಾವ ಏನೂ ಪ್ರಭಾವ ಬೀರಿಲ್ಲ: 55.5% ಪರಿಣಾಮ ಬೀರಿದೆ: 26.7% ಉತ್ತರಿಸದವರು: 17.8% ಭಯೋತ್ಪಾದನೆ ನಿಗ್ರಹಕ್ಕೆ ನೆರವು ಆಗಿಲ್ಲ: 48.2% ಆಗಿದೆ: 32% ಗೊತ್ತಿಲ್ಲ: 25%

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries