HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ತುಳು 8ನೇ ಪರಿಚ್ಛೇದದ ಮಾನದಂಡಕ್ಕೆ ಸ್ಪಷ್ಟ ಮಾಹಿತಿ ಬೇಕಾಗಿದೆ- ವೀರೇಂದ್ರ ಹೆಗ್ಗಡೆ ಬದಿಯಡ್ಕ: ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡಿಸಲು ಹಲವು ಕಡೆಗಳಿಂದ ಒತ್ತಡಗಳಿವೆ. ಪ್ರಧಾನಿಯವರಿಗೂ ಮನವಿ ಸಲ್ಲಿಸಲಾಗಿದೆ. ಆದರೆ 8ನೇ ಪರಿಚ್ಛೇದಕ್ಕೆ ಸೇರಿಸಲು ಸ್ಪಷ್ಟವಾದ ಮಾನದಂಡಗಳೇನೆಂದು ಇದುವರೆಗೆ ಗೊಂದಲಗಳಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ತುಳು ಭಾಷೆಗೆ ಬೇಕಾದ ಮಾನದಂಡಗಳೇನೆಂಬುದನ್ನು ಅರಿತು ಕೆಲಸಗಳನ್ನು ಮುಂದುವರಿಸಬೇಕಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡಿ ಗೊಂದಲವನ್ನುಂಟುಮಾಡಿಸುವುದು ಸಮಂಜಸವಲ್ಲ ಎಂದು ಧರ್ಮಸ್ಥಳದ ಧಮರ್ಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಡಿಸೆಂಬರ್ 23,24 ರಂದು ಮಂಗಳೂರಿನ ಪಿಲಿಕುಳದ ತುಳು ಸಂಸ್ಕೃತಿ ಗ್ರಾಮದಲ್ಲಿ ಜರಗುವ ತುಳುನಾಡೋಚ್ಛಯ 2017ರ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು. ತುಳುನಾಡಿನಲ್ಲಿ ಜಾತಿ,ಮತ,ಭಾಷಾ ಸಾಮರಸ್ಯವನ್ನು ಉಂಟುಮಾಡುವ ಉತ್ತಮ ಉದ್ದೇಶದೊಂದಿಗೆ ಜರಗುವ ತುಳುನಾಡೋಚ್ಛಯವು ಯಶಸ್ವಿಯಾಗಲಿ ಎಂದು ಶುಭಹಾರೈಸಿದರು. ತುಳುನಾಡೋಚ್ಛಯ 2017 ರ ಅಧ್ಯಕ್ಷ ಡೇವಿಡ್ ಫ್ರಾಂಕ್ ಫೆನರ್ಾಂಡಿಸ್, ಜಗದೀಶ್ ಅಧಿಕಾರಿ, ಶಮೀನಾ ಆಳ್ವ ಮೂಲ್ಕಿ, ಶ್ರೀ ಮೋಹನ ಸ್ವಾಮೀಜಿ ಮುದ್ರಾಡಿ, ಯೋಗೀಶ್ ಶೆಟ್ಟಿ ಜಪ್ಪು, ಜೀವನ್ ಶೆಟ್ಟಿ ಮೂಲ್ಕಿ, ಜ್ಯೋತಿಕಾ ಜೈನ್ ಮೊದಲಾದವರು ಉಪಸ್ಥಿತರಿದ್ದರು. ಲೋಗೋ ರಚಿಸಿದ ಭೂಷಣ್ ಕುಲಾಲ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries