ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ಅಕ್ಟೋಬರ್ ತಿಂಗಳಲ್ಲಿ ಜಿಎಸ್ ಟಿ ಸಂಗ್ರಹ 83,346 ಕೋಟಿಗೆ ಇಳಿಕೆ
ನವದೆಹಲಿ: ಅಕ್ಟೋಬರ್ ತಿಂಗಳ ಜಿಎಸ್ ಟಿ ಸಂಗ್ರಹ ಶೇ.10 ರಷ್ಟು ಕಡಿಮೆಯಾಗಿದ್ದು 83,346 ಕೋಟಿಗೆ ಇಳಿಕೆಯಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ 92,000 ಕೋಟಿಯಷ್ಟು ಜಿಎಸ್ ಟಿ ಸಂಗ್ರಹವಾಗಿತ್ತು, ಆದರೆ ಅಕ್ಟೋಬರ್ ತಿಂಗಳ ಜಿಎಸ್ ಟಿ ಸಂಗ್ರಹ 83,346 ಕೋಟಿಗೆ ಕುಸಿತ ಕಂಡಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಹಲವು ಸರಕುಗಳ ದರವನ್ನು ಕಡಿಮೆ ಮಾಡಲಾಗಿರುವುದು ಹಾಗೂ ತೆರಿಗೆ ಆಡಳಿತ ಆದಾಯಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಣೆ, ಇ-ವೇ ಬಿಲ್ ನ್ನು ಆಧರಿಸಿರುವುದು ಹಾಗೂ ರಿಸವರ್್ ಚಾಜರ್ಿಂಗ್ ಮುಂದೂಡಿರುವುದು ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗಲು ಕಾರಣ ಎಂದು ಹಣಕಾಸು ಇಲಾಖೆ ಹೇಳಿದೆ.
ಜುಲೈ ಹಾಗೂ ಆಗಸ್ಟ್ ನಲ್ಲಿ 10 ಕೋಟಿ ರೂಪಾಯಿಯಷ್ಟು ಮೊತ್ತವನ್ನು ಪರಿಹಾರ ಮೊತ್ತವಾಗಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದ್ದು, 13,695 ಕೋಟಿ ರೂಪಾಯಿಗಳನ್ನು ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.