ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2017
ಇಂದು ಬೇಕೂರಿನಲ್ಲಿ `ಮೇಘ ಮಾಣಿಕ್ಯ' ಪ್ರಸಂಗ ಬಿಡುಗಡೆ ಹಾಗೂ ಪ್ರಥಮ ಪ್ರದರ್ಶನ
ಉಪ್ಪಳ: ಖ್ಯಾತ ಯಕ್ಷಗಾನ ಪ್ರಸಂಗಕರ್ತ ನಿತಿನ್ ಪೂಜಾರಿ ತೆಂಕಕಾರಂದೂರು ವಿರಚಿತ ಯೋಗೀಶ ರಾವ್ ಚಿಗುರುಪಾದೆ ಪದ್ಯ ರಚಿಸಿರುವ ಈ ವರ್ಷದ ನೂತನ ಪ್ರಸಂಗ `ಮೇಘ ಮಾಣಿಕ್ಯ' ನವಂಬರ 9ನೇ ಗುರುವಾರ ಬಿಡುಗಡೆ ಗೊಳ್ಳಲಿದೆ ಹಾಗೂ ರಾತ್ರಿ ಗಂಟೆ 9ರಿಂದ ಶ್ರೀ ಮಂಗಳಾದೇವಿ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಶ್ರೀ ಅಯ್ಯಪ್ಪ ಭಜನಾ ಮಂದಿರ ಅಗತರ್ಿಮೂಲೆ ಬೇಕೂರು ಇದರ ಪ್ರಥಮ ವರ್ಧಂತ್ಯುತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ನಿಮಿತ್ತ ಪ್ರದರ್ಶನ ಗೊಳ್ಳಲಿದೆ.
ಅಯ್ಯಪ್ಪ ಸ್ವಾಮಿ ಯಕ್ಷಗಾನ ಸಮಿತಿಯ ಪ್ರಾಯೋಜಕತ್ವದಲ್ಲಿ ಪ್ರದರ್ಶನ ಜರಗಲಿದ್ದು, ಈ ವರ್ಷದ ಮಂಗಳದೇವಿ ಮೇಳದ ತಿರುಗಾಟದಲ್ಲಿ `ಮೇಘ ಮಾಣಿಕ್ಯ' ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದು ಮಂಗಳಾದೇವಿ ಮೇಳದ ಸಂಚಾಲಕ ಎಸ್.ಎ.ವಕರ್ಾಡಿ ತಿಳಿಸಿರುತ್ತಾರೆ.