ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ಶ್ರೀ ಸತ್ಯಸಾಯಿ ಬಾಬಾರವರ ಜನ್ಮದಿನಾಚರಣೆ
ಮಧೂರು: ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 92ನೇ ಹುಟ್ಟುಹಬ್ಬವನ್ನು ಮಧೂರು ಶ್ರೀ ಸತ್ಯಸಾಯಿ ಸೇವಾ ಸಮಿತಿಯ ವತಿಯಿಂದ ಮಧೂರಿನಲ್ಲಿ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.
ಪ್ರಾತಃಕಾಲ ಓಂಕಾರ, ಸುಪ್ರಭಾತ, ನಗರ ಸಂಕೀರ್ತನೆ ಹಾಗೂ ಶ್ರೀ ಮಹಾಗಣಪತಿ ಪ್ರೀತ್ಯರ್ಥ ಗಣಪತಿ ಹವನ ನೆರವೇರಿತು. ಕಾಞಂಗಾಡಿನ ಅಯ್ಯರ್ ಸ್ವಾಮಿಯವರು ಮುಖ್ಯ ಭಾಷಣ ಮಾಡಿ, ಭಗವಾನ್ ಬಾಬಾರವರ ಬಗ್ಗೆ ತಿಳಿಯಪಡಿಸಿದರು. ಅಲ್ಲದೆ ಆಧ್ಯಾತ್ಮಿಕ ಪ್ರವಚನ ನೀಡಿ, ನಮ್ಮ ಸನಾತನ ಧಾಮರ್ಿಕ ನಂಬಿಕೆ, ಆಚಾರ, ಪದ್ಧತಿಗಳ ಕುರಿತು ಸಮಗ್ರವಾಗಿ ವಿವರಿಸಿದರು.
ಸಮಾರಂಭದಲ್ಲಿ ಮಾಧವ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಮಾಧವ ಪಾಟಾಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಹಾಲಿಂಗೇಶ್ವರ ಭಟ್ ವಂದಿಸಿದರು. ರಂಜಿನಿ ಮಧೂರು ಕಥಾ ಸಂಕೀರ್ತನೆ ಹಾಗೂ ಸಾಯಿ ಮನೋಹರ್, ಮಾಧವ ಮಯ್ಯ, ರಾಜೇಶ್, ಪ್ರೇಮಲತಾ ಟೀಚರ್ ಅವರ ನೇತೃತ್ವದಲ್ಲಿ ನಾಮ ಸಂಕೀರ್ತನೆ ನಡೆಯಿತು.
ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮದಿನಚಾರಣೆ ಅಂಗವಾಗಿ ಮಧೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಿಹಿತಿಂಡಿ ಮತ್ತು ಭಾವಚಿತ್ರವನ್ನು ವಿತರಿಸಲಾಯಿತು. ಮಂಗಳಾರತಿ ಹಾಗೂ ನಾರಾಯಣ ಸೇವೆಗಳೊಂದಿಗೆ ಸಮಾರಂಭ ಸಂಪನ್ನಗೊಂಡಿತು.