ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2017
ಓದುವುದರಿಂದ ಬೆಳೆಯುತ್ತೇವೆ, ಬರೆಯುವುದರಿಂದ ಕರಗುತ್ತೇವೆ : ಡಾ.ರಾಧಾಕೃಷ್ಣ ಬೆಳ್ಳೂರು
ಮಂಜೇಶ್ವರ: ಪ್ರಸ್ತುತ ಕಾಲದಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಆದರೆ ಓದು ಕಡಿಮೆಯಾಗಿಲ್ಲ. ಜನಪ್ರಿಯ ಓದುಗರ ವರ್ಗ ಮಾತ್ರ ಸ್ವಲ್ಪ ಕಡಿಮೆಯಾಗಿದೆ. ಆ ಓದುಗರನ್ನು ಟಿ.ವಿ. ಧಾರಾವಾಹಿಗಳು ತಮ್ಮತ್ತ ಸೆಳೆದುಕೊಂಡಿದೆ. ಉಳಿದಂತೆ ಗಂಭೀರ ಓದುಗರ ಸಂಖ್ಯೆ ಕಡಿಮೆಯಾಗಿಲ್ಲ. ಓದು ನಮ್ಮನ್ನು ಚಿಂತನೆಗೆ ಹಚ್ಚಿದರೆ, ಬೆಳೆಯುವಂತೆ ಮಾಡಿದರೆ, ಖುಶಿ ನೀಡಿದರೆ ಅದು ನಿಜವಾದ ಓದು ಆಗಿರುತ್ತದೆ. ನಿಜವಾದ ಓದು ಸಾಲುಗಳ ನಡುವಣ ಮೌನವನ್ನು ಅಥರ್ೈಸುವುದರಲ್ಲಿದೆ. ಓದುವುದರಿಂದ ನಾವು ಬೆಳೆಯುತ್ತೇವೆ. ಬರೆಯುವುದರಿಂದ ನಾವು ಕರುಗುತ್ತೇವೆ. ಎಂಬುದಾಗಿ ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ರಾಧಾಕೃಷ್ಣ ಬೆಳ್ಳೂರು ಹೇಳಿದರು.
ಅವರು ಎಸ್ಎಸ್ಎ ಹಾಗೂ ಮಂಜೇಶ್ವರ ಬಿಆರ್ಸಿ ವತಿಯಿಂದ ಜಿ.ವಿ.ಎಚ್.ಎಸ್.ಎಸ್. ಕುಂಜತ್ತೂರು ಶಾಲೆಯಲ್ಲಿ ನಡೆದ `ಆ`ುನಿಕ ಕಾಲದಲ್ಲಿ ಓದುವಿಕೆಯ ಅನಿವಾರ್ಯತೆ' ಎಂಬ ವಿಷಯದ ಬಗ್ಗೆ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದರು.
ಕೇರಳೋತ್ಸವದ ಅಂಗವಾಗಿ `ಉತ್ತಮ ಓದು, ಉತ್ತಮ ಕಲಿಕೆ, ಉತ್ತಮ ಜೀವನ' ಎಂಬ ಸಂದೇಶದೊಂದಿಗೆ ಬಿಆರ್ಸಿ ಪುಸ್ತಕ ಬಂಡಿಯು ಶಾಲೆಗೆ ಆಗಮಿಸಿತು. ಚೆಂಡೆ ವಾದನ, ದೀಪಗಳೊಂದಿಗೆ ಪುಸ್ತಕ ಹಿಡಿದ ವಿದ್ಯಾಥರ್ಿಗಳು ಪುಸ್ತಕ ಬಂಡಿಯನ್ನು ಸ್ವಾಗತಿಸಿದರು.
ಕೇರಳೋತ್ಸವದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಓದುವಿಕೆಯ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಐವತ್ತು ಪುಸ್ತಕಗಳನ್ನು ಎಇಒ ದಿನೇಶ್ ವಿ. ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಬ್ಲಾಕ್ ಯೋಜನಾಧಿಕಾರಿ ವಿಜಯ ಕುಮಾರ್, ಮುಖ್ಯೋಪಾಧ್ಯಾಯ ಫಾರಂನ ಅಧ್ಯಕ್ಷ ಸದಾಶಿವ ರಾವ್, ಹಿರಿಯ ಶಿಕ್ಷಕಿ ಪ್ರಸನ್ನ ಕುಮಾರಿ ಶುಭಾಶಂಸನೆಗೈದರು. ಶಾಲಾ ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಕುಂಜತ್ತೂರಿನ ಪುಸ್ತಕ ಪ್ರೇಮಿ ಸುರೇಂದ್ರ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬಿಆರ್ಸಿ ವಿದ್ಯಾಥರ್ಿಗಳು ಹಾಗೂ ಶಿಕ್ಷಕರಿಗಾಗಿ ನಡೆಸಿದ ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಅಭಿನಂದಿಸಲಾಯಿತು. ಶಾಲಾ ವಿದ್ಯಾಥರ್ಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬಿಆರ್ಸಿ ಸಂಪನ್ಮೂಲ ವ್ಯಕ್ತಿ ಗುರುಪ್ರಸಾದ್ ರೈ ಸ್ವಾಗತಿಸಿ, ಶಾಲಾ ನೌಕರ ಸಂಘದ ಕಾರ್ಯದಶರ್ಿ ರವೀಂದ್ರ ರೈ ವಂದಿಸಿದರು. ಶಿಕ್ಷಕ ರವೀಂದ್ರ ಎನ್. ಕಾರ್ಯಕ್ರಮ ನಿರೂಪಿಸಿದರು.