ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ತೂಮಿನಾಡು ಶ್ರೀಮಹಾಕಾಳಿ ಭಜನಾ ಮಂದಿರ ಬಾಲಾಲಯ ಪ್ರತಿಷ್ಠೆ ಆಮಂತ್ರಣ ಪತ್ರಿಕೆ ಬಿಡುಗಡೆ
ಮಂಜೇಶ್ವರ: ಭಕ್ತರು ಸಂಘಟಿತರಾಗಿ ಕಷ್ಟ ನಷ್ಟಗಳನ್ನು ಸಹಿಸಿ ದೇವರ ಸೇವೆ ಮಾಡಿದಲ್ಲಿ ದೇವರ ದಯೆ ಪ್ರಾಪ್ತವಾಗುವುದು.ಮಹಾತಾಯಿ ಮಹಾಕಾಳಿಯ ಸೇವೆಯಿಂದ ಭಕ್ತರಿಗೆ ಇಷ್ಟಾರ್ಥ ಸಿದ್ದಿಸುವುದು ಎಂದು ತಂತ್ರಿವರ್ಯ ಮರಿ ಭಟ್ ನುಡಿದರು.
ಸುಮಾರು 50 ಲಕ್ಷ ವೆಚ್ಚದಲ್ಲಿ ಜೀಣರ್ೋದ್ಧಾರಗೊಳ್ಳುತ್ತಿರುವ ಕುಂಜತ್ತೂರು ತೂಮಿನಾಡು ಸಾರ್ವಜನಿಕ ಶ್ರೀಮಹಾಕಾಳಿ ಭಜನಾ ಮಂದಿರದ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮವನ್ನು ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿಸಿದ ಬಳಿಕ ಜರಗಿದ ಧಾಮರ್ಿಕ ಸಮಾರಂಭದಲ್ಲಿ ದೀಪ ಪ್ರಜ್ವಲನೆ ಮಾಡಿ ತಂತ್ರಿವರ್ಯರು ಆಶೀರ್ವಚನ ನೀಡಿದರು.
ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಬ್ರಹ್ಮಶ್ರೀ ಅನಂತ ಪದ್ಮನಾಭ ಅಸ್ರಣ್ಣರವರು ಆಶೀರ್ವಚನ ನೀಡಿ ಯಾವುದೇ ಕಾರ್ಯ ಮಾಡುವಾಗ ದೃಡ ನಂಬಿಕೆ,ಅಚಲ ಭಕ್ತಿ ವಿಶ್ವಾಸವಿದ್ದಲ್ಲಿ ಕಾರ್ಯಸಿದ್ಧಿಯಾಗುವುದು.ಉತ್ತಮರ ಸಂಪರ್ಕ ಉಪದೇಶಗಳಿಂದ ಕೈಗೊಂಡ ಕಾರ್ಯ ಸುಗಮವಾಗುವುದು.ಮಹಾ ತಾಯಿಯ ಸೇವೆಯಿಂದ ಜೀವನ ಧನ್ಯವಾಗುವುದು ಎಂದರು.
ಸಮಾರಂಭದಲ್ಲಿ ಶ್ರೀ ದೇವಿಯ ನೂತನ ಬಿಂಬದ ಪುನರ್ ನಿಮರ್ಾಣಕ್ಕೆ ಭಕ್ತರಿಂದ ಬೆಳ್ಳಿ ಸಂಚಯನ ಮಾಡಲಾಯಿತು.ಮುಂದಿನ ಫೆ.19 ರಿಂದ 21 ರತನಕ ನಡೆಯಲಿರುವ ಮಂದಿರದ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಜೀಣರ್ೊದ್ಧಾರ ಸಮಿತಿಯ ಅಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಅಧ್ಯಕ್ಷತೆ ವಹಿಸಿ ಮಾತನಾಡಿ ದೈವ ದೇವರ ದೀನ ದಲಿತರ ಸೇವೆ ಮಾಡಿದಲ್ಲಿ ಶ್ರದ್ಧಾ ಭಕ್ತಿಯಿಂದ ದೇವರ ಸೇವೆ ಕೈಗೊಂಡಲ್ಲಿ ನಮಗೆ ಜೀವನದಲ್ಲಿ ಯಾವುದೇ ಕೊರತೆಯಾಗುವುದಿಲ್ಲವೆಂದರು. ಮಾಡ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪ್ಪಾಡ, ಧಾಮರ್ಿಕ ಸಾಮಾಜಿಕ ಗಣ್ಯರಾದ, ಪಿ.ಆರ್.ಶೆಟ್ಟಿ ಪೊಯ್ಯೆಲು, ಕೆ.ಪಿ.ಸೋಮಶೇಖರ್ ತೂಮಿನಾಡು,ಮೋಹನ ಶೆಟ್ಟಿ ತೂಮಿನಾಡು ಬಾಲಕೃಷ್ಣ ದೀಕ್ಷಾವುಡ್ ಪದವು,ಈಶ್ವರ ಮಾಸ್ಟರ್,ರಾಧಾಕೃಷ್ಣ ಆಚಾರ್ಯ, ಅಚ್ಯುತ ಚೇವಾರ್,ವಿಶ್ವನಾಥ ಶೆಟ್ಟಿ ಮಡಿವಾಲ್ ಪಾಲ್,ಜಯಂತ ಎಂ, ಕಮಾಲಾಕ್ಷ ಅತಿಥಿಗಳಾಗಿ ಉಪಸ್ಥಿತರಿದ್ದರು. ಮಹಾಕಾಳಿ ಭಜನಾ ಸಂಘದ ಅಧ್ಯಕ್ಷ ದೇವದಾಸ್ ಶೆಟ್ಟಿ ಸ್ವಾಗತಿಸಿ, ಜೀಣರ್ೋದ್ಧಾರ ಸಮಿತಿ ಸಂಚಾಲಕ ಹರೀಶ್ ಶೆಟ್ಟಿ ಮಾಡ ನಿರ್ವಹಿಸಿ ವಂದಿಸಿದರು.ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.