ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2017
ಬೆನ್ನುಹುರಿ ಗಾಯ ಉಪಶಮನಕ್ಕೆ ಜೀವಕೋಶ
ಟೊರಾಂಟೊ (ಪಿಟಿಐ): ತುಂಡಾದ ಹಲ್ಲಿಯ ಬಾಲ ಮತ್ತೆ ಬೆಳೆಯುವ ಹಾಗೆಯೇ, ಗಾಯಗೊಂಡ ಬೆನ್ನುಹುರಿ ತನ್ನಿಂತಾನೇ ವಾಸಿಯಾಗುವ ಜೀವಕೋಶವನ್ನು ವಿಜ್ಞಾನಿಗಳು ಇದೇ ಮೊದಲ ಬಾರಿಗೆ ಸಂಶೋಧನೆ ಮಾಡಿದ್ದಾರೆ.
ತನ್ನ ಮೇಲೆ ದಾಳಿ ಮಾಡಿದ ಪರಭಕ್ಷಕನಿಂದ ತಪ್ಪಿಸಿಕೊಳ್ಳಲು ಹಲ್ಲಿಗಳು ಬಾಲವನ್ನು ಕತ್ತರಿಸಿಕೊಳ್ಳುತ್ತವೆ. ಆನಂತರ ಅದು ಮತ್ತೆ ಬೆಳೆಯುತ್ತದೆ. ಇತರ ಸಸ್ತನಿಗಳಂತೆ ಹಲ್ಲಿಯ ಬಾಲದಲ್ಲೂ ಅಪಾರ ಪ್ರಮಾಣದ ಆಕರಕೋಶಗಳು ಇರುತ್ತವೆ. ಇವು ವಿವಿಧ ರೀತಿಯ ಜೀವಕೋಶಗಳಾಗಿ ಬೆಳೆಯುವ ಶಕ್ತಿ ಹೊಂದಿರುತ್ತವೆ ಮತ್ತು ಅವುಗಳ ಬೆಳವಣಿಗೆಗೆ ಬೆಂಬಲ ನೀಡುವ ಪ್ರೊಟೀನ್ಗಳಾಗುತ್ತವೆ.
`ಹಲ್ಲಿಗಳ ಬೆನ್ನುಹುರಿ ಬೆಳೆಯುವ ಬಗೆ ನಮಗೆ ಗೊತ್ತಿತ್ತು. ಆದರೆ ಯಾವ ಜೀವಕೋಶ ಇದಕ್ಕೆ ಕಾರಣವಾಗಬಲ್ಲದು ಎಂಬುದು ಈವರೆಗೆ ತಿಳಿದಿರಲಿಲ್ಲ' ಎಂದು ಕೆನಡಾದ ಗುಲೆಫ್ ವಿಶ್ವವಿದ್ಯಾಲಯದ ಮ್ಯಾಥ್ಯೂ ವಿಕರ್ಯೋಯುಸ್ ಹೇಳಿದ್ದಾರೆ