ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 28, 2017
ಗೈಲ್ ಪೈಪ್ ಲೈನ್ ಕಾಮಗಾರಿ ತಾತ್ಕಾಲಿಕ ಸ್ಥಗಿತ
ಮಂಜೇಶ್ವರ: ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಗೈಲ್ ಗ್ಯಾಸ್ ಪೈಪ್ ಲೈನ್ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಭಾನುವಾರ ಮೀಂಜದಲ್ಲಿ ನಡೆದ ಸಂತ್ರಸ್ತರ ಹಾಗೂ ಗೈಲ್ ಅಧಿಕೃತರ ಜಂಟಿ ಸಭೆಯಲ್ಲಿ ತೀಮರ್ಾನಿಸಲಾಗಿದೆ.
ಯಾವುದೇ ವೂರ್ವ ಮಾಹಿತಿ ನೀಡದೆ ಏಕಾಏಕಿ ಕೃಷಿತೋಟಕ್ಕೆ ಕಾಮಗಾರಿ ನಡೆಸಿದ ಗೈಲ್ ಅಧಿಕಾರಿಗಳನ್ನು ಸಭೆಯಲ್ಲಿ ಸಂತ್ರಸ್ತರು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಮಾತನಾಡಿ ಅಡಿಕೆ ಫಸಲನ್ನು ಕೊಯ್ಯಲು ಕಾಲಾವಕಾಶ ನೀಡದೆ ಕಂಗು,ತೆಂಗನ್ನು ಕಡಿದ ಅಧಿಕೃತರ ಕ್ರಮವನ್ನು ಖಂಡಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಮಾತನಾಡಿ ಪೈಪ್ ಲೈನ್ ಕುರಿತ ಸಮಗ್ರ ಮಾಹಿತಿ ನೀಡದೆ ಕಾಮಗಾರಿ ನಡೆಸಬಾರದು, ಗರಿಷ್ಠ ನಷ್ಟ ಪರಿಹಾರ ನೀಡಬೇಕು, ಭೂಮಾಲಿಕರಿಗೆ ಪೂರ್ವ ಮಾಹಿತಿ ನೀಡದೆ ಜಮೀನು ಪ್ರವೇಶಿಸಬಾರದು ಎಂದು ಗೈಲ್ ಅಧಿಕಾರಿಗಳಿಗೆ ತಾಕೀತು ನೀಡಿದರು.
ಸಭೆಯಲ್ಲಿ ಗೈಲ್ ಗ್ಯಾಸ್ ಪೈಪ್ ಲೈನ್ ಸಂತ್ರಸ್ತರ ಹೋರಾಟ ಸಮಿತಿಯ ಉಮ್ಮರ್ ಬೋರ್ಕಳ, ದಿವಾಕರ್ ಎಸ್.ಜೆ. ಪೂಜಾರಿ ಬೆಜ್ಜಂಗಳ, ಹಮೀದ್ ಕಳಿಯೂರು, ಶಾಲಾ ಮುಖ್ಯೋಪಾಧ್ಯಾಯ ಟಿ.ಡಿ.ಸದಾಶಿವ ರಾವ್, ಲೀಲಾಕ್ಷ ಸಾಮಾನಿ, ರಘುರಾಮ ಶೆಟ್ಟಿ, ಸತೀಶ್ ರೈ, ದೇರಂಬಳ, ಕಲಿಸ್ತ ಕುಟಿನ, ವಿಠಲ ರೈ, ಜಗದೀಶ ಆಳ್ವ, ಲೀಲಾಕ್ಷ ಪೂಜಾರಿ, ಸಂಕಪ್ಪ ಆಳ್ವ, ಕೃಷ್ಣ ರೈ, ಮುಂತಾದವರು್ವುಪಸ್ಥಿತರಿದ್ದು ಮಾತನಾಡಿದರು.ರತ್ನಾಕರ ಶೆಟ್ಟಿ, ಪದ್ಮನಾಭ ಮೂಲ್ಯ, ಸುಧಾಕರ ಶೆಟ್ಟಿ, ವಿನಯಕುಮಾರ್, ಆನಂದ, ಡಾ.ಜಯಪ್ರಭಾ ಸಾಮಾನಿ, ದೇವಿಪ್ರಸಾದ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಮುಂತಾದವರು ಪಾಲ್ಗೊಂಡರು.