HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಭಾರತದ ಜತೆ ಯುದ್ಧ ಆಯ್ಕೆಯಲ್ಲ: ಪಾಕ್ ಪ್ರಧಾನಿ ಲಂಡನ್ (ಪಿಟಿಐ): `ಕಾಶ್ಮೀರ ವಿವಾದ ಸೇರಿದಂತೆ ಭಾರತದ ಜತೆ ಹಲವು ಕಾಲದಿಂದ ಉಳಿದಿರುವ ಸಮಸ್ಯೆಗಳಿಗೆ ಯುದ್ಧವೊಂದೇ ಪರಿಹಾರವಲ್ಲ. ಮಾತುಕತೆಯಿಂದ ಇದಕ್ಕೆ ಪರಿಹಾರ ಸಾಧ್ಯ' ಎಂದು ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಕಾನ್ ಅಬ್ಬಾಸಿ ಹೇಳಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ನ ಸೌತ್ ಏಷ್ಯಾ ಸೆಂಟರ್ ಆಯೋಜಿಸಿದ್ದ `ಪಾಕಿಸ್ತಾನದ ಭವಿಷ್ಯ? 2107' ವಿಚಾರ ಸಂಕಿರಣದಲ್ಲಿ ಮಾತನಾಡಿದ ಅಬ್ಬಾಸಿ, `ಕಾಶ್ಮೀರ ವಿವಾದವೇ ಪ್ರಮುಖ ವಿಷಯ. ಇದು ಪರಿಹಾರವಾಗದೆ ಉಭಯ ದೇಶಗಳ ನಡುವಿನ ಉದ್ವಿಗ್ನಸ್ಥಿತಿ ಶಮನವಾಗದು' ಎಂದು ಹೇಳಿದರು. `ಭಾರತದ ಜತೆ ನಾವು ಯಾವಾಗಲೂ ಮಾತುಕತೆಗೆ ಮುಕ್ತ ಮನಸ್ಸು ಹೊಂದಿದ್ದೇವೆ. ಆದರೆ ಯುದ್ಧ ಮಾತ್ರವೇ ಆಯ್ಕೆಯಲ್ಲ' ಎಂದರು. `ಪ್ರತ್ಯೇಕ ಕಾಶ್ಮೀರ ಪ್ರಸ್ತಾವಕ್ಕೆ ನನ್ನ ಬೆಂಬಲವಿಲ್ಲ. ಇದನ್ನು ಆಗಾಗ ಚಲಾವಣೆಗೆ ತರಲಾಗುತ್ತದೆ. ಆದರೆ ವಾಸ್ತವದಲ್ಲಿ ಇದು ಸಾಧ್ಯವಿಲ್ಲ. ಜನರೇ ತೀಮರ್ಾನಿಸಬೇಕು ಎಂಬ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಲ್ಲೇ ಇದಕ್ಕೆ ಪರಿಹಾರವಿದೆ' ಎಂದು ವಿವರಿಸಿದರು. `ಪಾಕಿಸ್ತಾನ ಇಡೀ ವಿಶ್ವಕ್ಕಾಗಿ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುತ್ತಿದೆ. ನಾವು ಈ ಹೋರಾಟದಲ್ಲಿ ಬದ್ಧರಾಗಿದ್ದೇವೆ' ಎಂದು ಅವರು ಹೇಳಿಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries