HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಕಾಸರಗೋಡಿನ ಕಲಾವಿದರಿಗೆ ಪಿಂಚಣಿ ಅಪೇಕ್ಷೆಗೆ ಅಜರ್ಿ ವಿಸ್ತರಣಾ ದಿನಾಂಕ ಬದಲಾವಣೆಗೆ ಸವಾಕ್ ಆಗ್ರಹ: ಕುಂಬಳೆ: ಸಾಮಾಜಿಕ ಸಹಿತ ಸಮಗ್ರ ಬದಲಾವಣೆಗಳಲ್ಲಿ ಕಲೆ, ಕಲಾವಿದರ ಪಾತ್ರ ಅಪಾರವಾದುದು. ಸಮಾಜದ ದೈನಂದಿನ ಆಗುಹೋಗುಗಳಿಗೆ ಸಾಕ್ಷಿಯಾಗಿ ಸಮಾಜವನ್ನು ನೇರವಾಗಿ ಕೊಂಡೊಯ್ಯುವಲ್ಲಿ ಪ್ರೇರಕನಾಗುವ ಕಲಾವಿದ ತಮ್ಮ ವ್ಯಕ್ತಿತ್ವ ನಿಮರ್ಾಣದಲ್ಲಿ ಹಿಂದುಳಿದು, ವಿವಿಧ ವ್ಯಸನಗಳಿಗೆ ದಾಸರಾಗಿ ಕೊನೆಗಾಲದಲ್ಲಿ ಅನುಭವಿಸುವ ಸಂಕಷ್ಟಗಳಿಗೆ ಇನ್ನಾದರೂ ಪರಿಹಾರಕಾಣದಿದ್ದಲ್ಲಿ ಕಲಾವಿದನ ಅಸ್ತಿತ್ವದ ಸವಾಲಾಗಿ ಕಾಡುವುದರಿಂದ ಸವಾಕ್ ವಿವಿಧ ಕಾರ್ಯಯೋಜನೆಗಳೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕಸರ್್ ಅಸೋಸಿಯೇಶನ್(ಸವಾಕ್)ನ ರಾಜ್ಯ ಅಧ್ಯಕ್ಷ ವೈ.ವೈಶಾಖನ್ ಅಭಿಪ್ರಾಯ ವ್ಯಕ್ತಪಡಿಸಿದರು. ಸವಾಕ್ನ ಕಾಸರಗೋಡು ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿಯ ಸಭೆಯನ್ನು ಬುಧವಾರ ಸಂಜೆ ಕಾಸರಗೊಡು ಸಿಟಿ ಟವರ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ತ್ಯಾಗ ಮತ್ತು ಸ್ನೇಹಗಳು ಗಂಭೀರ ಪ್ರಮಾಣದಲ್ಲಿ ಅರ್ಥ ಕಳೆದುಕೊಳ್ಳುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸಾಮಾಜಿಕ ಅಸ್ಥಿರತೆಗೆ ಮೂಲ ಕಾರಣವಾಗಿದೆ ಎಮದು ತಿಳಿಸಿದ ಅವರು, ತ್ಯಾಗ ಮತ್ತು ಸ್ನೇಹ ಸವಾಕ್ ನ ಮೂಲ ಧ್ಯೇಯಗಳಲ್ಲಿ ಒಂದು ಎಂದು ತಿಳಿಸಿದರು. ವಿವಿಧ ಕ್ಷೇತ್ರಗಳಲ್ಲಿ ಇಂದು ಹಕ್ಕುಗಳ ಬಗ್ಗೆ ವ್ಯಾಪಕ ಚಚರ್ೆ ಮತ್ತು ಚಿಂತನೆಗಳು ನಡೆಯುತ್ತಿರುವಾಗ ಸಮಾಜದ ಪ್ರಮುಖ ವಿಭಾಗದಲ್ಲಿ ಗುರುತಿಸಲ್ಪಡುವ ಕಲಾವಿದರುಗಳಿಗೆ ಈ ಬಗೆಗಿನ ಪ್ರಜ್ಞೆಯನ್ನು ಮೂಡಿಸಿ ಒಗ್ಗೂಡಿಸಿ ನೆರವಿಗೆ ಸವಾಕ್ ಎಂದೂ ಕಟಿಬದ್ದವಾಗಿರುತ್ತದೆ ಎಂದು ಅವರು ಭರವಸೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸವಾಕ್ ಜಿಲ್ಲಾ ಅಧ್ಯಕ್ಷ, ರಂಗಕಮರ್ಿ ಎಂ. ಉಮೇಶ್ ಸಾಲ್ಯಾನ್ ಕಾಸರಗೋಡು ಅವರು ಮಾತನಾಡಿ, ಕಲಾವಿದರ ವಿವಿಧ ಕ್ಷೇಮ ಯೋಜನೆಗಳಿಗೆ ಸಂಬಂಧಿಸಿ ಗರಿಷ್ಠ ನೆರವಿಗೆ ಕಾಯರ್ಾಚರಿಸುತ್ತಿರುವ ಸವಾಕ್ ಗಡಿನಾಡು ಕಾಸರಗೋಡಿನ ಹೆಮ್ಮೆಯ ಕಲೆ ಯಕ್ಷಗಾನವನ್ನು ಕೇರಳದ ಪ್ರಮುಖ ರಾಜ್ಯ ಕಲೆಯಾಗಿ ಘೋಷಿಸುವ ನಿಟ್ಟಿನಲ್ಲಿ ಅಂತಿಮ ಹಂತದ ಮಾತುಕತೆಯಲ್ಲಿದ್ದು, ಶೀಘ್ರ ಈ ಬಗೆಗಿನ ಸರಕಾರದ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ತಿಳಿಸಿದರು. ಕಲಾವಿದರ, ಕಲಾ ವಿಭಾಗದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರ ಒಗ್ಗಟ್ಟಿನಿಂದ ಎಲ್ಲಾ ಸವಾಲುಗಳನ್ನು ಎದುರಿಸಿ ಪರಿಹಾರೋಪಾಯಗಳನ್ನು ಕಾಣಲು ಸಾಧ್ಯವಾಗುತ್ತಿದೆ ಎಂದು ಅವರು ತಿಳಿಸಿದರು. ಸವಾಕ್ ರಾಜ್ಯ ಪ್ರಧಾನ ಕಾರ್ಯದಶರ್ಿ ಸುದರ್ಶನ ವರ್ಣ,ರಾಜ್ಯ ಸಮಿತಿ ಕಾರ್ಯನಿವರ್ಾಹಕ ಕಾರ್ಯದಶರ್ಿ ವಿನೋದ್ ಕುಮಾರ್,ಸವಾಕ್ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಡಾ.ರಾಜೇಶ್ ಆಳ್ವ ಬದಿಯಡ್ಕ, ಕಲಾವಿದ, ಪತ್ರಕರ್ತ ವೀ.ಜಿ.ಕಾಸರಗೋಡು, ಯಕ್ಷಗಾನ ಕಲಾವಿದ, ಸವಾಕ್ ಮಂಜೇಶ್ವರ ತಾಲೂಕು ಸಂಯೋಜಕ ದಿವಾಣ ಶಿವಶಂಕರ ಭಟ್, ವೇ.ಮೂ. ಹರಿಶ್ಚಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಇತ್ತೀಚೆಗೆ ನಿಧನರಾದ ಯಕ್ಷಗಾನದ ಹಿರಿಯ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಭಾಗವತ ಕುಬಣೂರು ಶ್ರೀಧರ ರಾವ್, ಶಿಕ್ಷಕ, ಕಲಾ ಸಂಯೋಜಕ ಉಂಡೆಮನೆ ವೆಂಕಪ್ಪ ಭಟ್, ಸಂಜೀವಿನಿ ಕಾಸರಗೋಡು, ಗಂಗಾಧರ, ಸಿನಿಮಾ ತಾರೆ ಐ.ವಿ. ಶಶಿ, ಕವಿ ಪುನತ್ತಿಲ ಅಬ್ದುಲ್ಲರ ನಿಧನಕ್ಕೆ ಸಭೆಯಲ್ಲಿ ಪತ್ರಕರ್ತ ವೀ.ಜಿ.ಕಾಸರಗೋಡು ಸಂಸ್ಮರಣಾ ಭಾಷಣ ಮಾಡಿದರು. ಕ್ಷೇಮ ನಿಧಿ ಪಿಂಚಣಿಗೆ ಸಂಬಂಧಿಸಿ ಕಳೆದ ಜೂನ್ ತಿಂಗಳ ವರೆಗೆ ಅಜರ್ಿ ಸಲ್ಲಿಸಲು ಸರಕಾರ ಮಾನದಂಡ ನಿಗದಿಪಡಿಸಿ ಆದೇಶ ಹೊರಡಿಸಿದ್ದರೂ ಗಡಿನಾಡು ಕಾಸರಗೋಡಿನ ಬಹುಸಂಖ್ಯಾತ ಕಲಾವಿದರು ಮಾಹಿತಿ ಕೊರತೆಯಿಂದ ಅಜರ್ಿ ಸಲ್ಲಿಸದಿರುವುದರಿಂದ ಕಾಸರಗೊಡಿನ ಕಲಾವಿದರಿಗೆ ಅಜರ್ಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿ ನೀಡುವ ಬಗ್ಗೆ ಸರಕಾರದೊಂದಿಗೆ ಚಚರ್ಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲಾಧ್ಯಕ್ಷ ಎಂ. ಉಮೇಶ ಸಾಲ್ಯಾನ್ ಸವಾಕ್ ರಾಜ್ಯಾಧ್ಯಕ್ಷರಿಗೆ ಈ ಬಗ್ಗೆ ಮನವಿ ನೀಡಿದರು. ಸಭೆಯಲ್ಲಿ ಸವಾಕ್ ಸಂಘಟನೆಯ ವಿವಿಧ ವಲಯಗಳ ನೂತನ ಪ್ರತಿನಿಧಿಗಳನ್ನು ಸ್ವಾಗತಿಸಿ, ಅಧಿಕಾರ ಹಸ್ತಾಂತರ, ಅಭಿನಂದನೆ ನಡೆಯಿತು. ಸವಾಕ್ ಜಿಲ್ಲಾ ಕಾರ್ಯನಿವರ್ಾಹಕ ಕಾರ್ಯದಶರ್ಿ ತುಳಸೀಧರನ್ ಸ್ವಾಗತಿಸಿ, ಕೋಶಾಧಿಕಾರಿ ಉಲ್ಲಾಸ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries