ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ಅಡೂರಿಗೆ ಸಕರ್ಾರಿ ಬಸ್ - ಜನತೆಗೆ ಹರ್ಷ
ಮುಳ್ಳೇರಿಯ: ದೇಲಂಪಾಡಿ ಗ್ರಾಮ ಪಂಚಾಯಿತಿನ ಅಡೂರಿಗೆ ಬಹುನಿರೀಕ್ಷಿತ ಕೇರಳ ರಾಜ್ಯ ಸಕರ್ಾರಿ ಬಸ್ ಬುಧವಾರದಿಂದ ಸಂಚಾರ ಆರಂಭಿಸಿದೆ. ಈ ಬಸ್ಸು ಅಡೂರಿನಿಂದ ಅತ್ತನಾಡಿ ಸೇತುವೆಯ ಮೂಲಕ ಕಾಸರಗೋಡಿಗೆ ಸಂಚರಿಸಲಿದೆ. ಇದರಿಂದ ಪೆಲಮರ್ವ, ಬೆಳ್ಳೆಚ್ಚೇರಿ, ಅತ್ತನಾಡಿ ಪ್ರದೇಶದ ನಿವಾಸಿಗಳಿಗೆ ಬಹಳಷ್ಟು ಅನುಕೂಲವಾಗಿದೆ. ಅನೇಕ ವರ್ಷದ ಹಿಂದೆಯೇ ಸುಸಜ್ಜಿತ ಅತ್ತನಾಡಿ ಸೇತುವೆ ನಿಮರ್ಾಣವಾಗಿದ್ದರೂ, ಸಕರ್ಾರಿ ಬಸ್ ಸಂಚಾರ ಆರಂಭವಾಗಿರಲಿಲ್ಲ. ಬಸ್ಸಿನಲ್ಲಿ ಮೊದಲ ಪ್ರಯಾಣ ಮಾಡಿದ ಪ್ರಯಾಣಿಕರಿಗೆ ಬುಧವಾರ ಪೆಲಮರ್ವದಲ್ಲಿ ಸಿಹಿತಿಂಡಿ ವಿತರಿಸಲಾಯಿತು.
ಈ ರಸ್ತೆಯ ಮೂಲಕ ಮಂಗಳೂರಿಗೆ ಬದಿಯಡ್ಕ, ಕುಂಬಳೆ ಮಾರ್ಗವಾಗಿ ಸಕರ್ಾರಿ ಬಸ್ ಸಂಚರಿಸಬೇಕೆಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನರ್ಾಟಕದ ಪುತ್ತೂರಿನಿಂದ ಅನೇಕ ವರ್ಷಗಳ ಹಿಂದೆಯೇ ಅಡೂರಿಗೆ ಬಸ್ ಸಂಚಾರ ಆರಂಭವಾಗಿತ್ತು. ಆದರೆ ಕೇರಳ ಸಕರ್ಾರ ಮಾತ್ರ ಜನರಿಗೆ ಉಪಯೋಗವಾಗುವ ವೇಳೆಯಲ್ಲಿ ಬಸ್ ಸಂಚಾರ ಆರಂಭಿಸಿರಲಿಲ್ಲ. ಆದ್ದರಿಂದ ಅಡೂರಿನ ಜನತೆ ಸಂಪೂರ್ಣವಾಗಿ ಖಾಸಗಿ ಬಸ್ಸುಗಳನ್ನು ಅವಲಂಬಿಸಬೇಕಿತ್ತು. ಖಾಸಗಿ ಬಸ್ಸುಗಳು ಮುಷ್ಕರ ನಡೆಸಿದಲ್ಲಿ ಅಡೂರಿನ ಜನತೆಗೆ ವ್ಯಾವಹಾರಿಕ ಕ್ಷೇತ್ರ ತಲುಪಲು ಕಷ್ಟವಾಗುತ್ತಿತ್ತು. ಇದೀಗ ಸಕರ್ಾರಿ ಬಸ್ ಆರಂಭವಾದ ಕಾರಣ ನಿತ್ಯ ಪ್ರಯಾಣಿಸುವ ಉದ್ಯೋಗಿಗಳು ಹಾಗೂ ನಾಗರಿಕರು ಖುಷಿಯಾಗಿದ್ದಾರೆ.
ಇದೀಗ ಆರಂಭವಾದ ಕೇರಳ ಸಕರ್ಾರಿ ಬಸ್ಸು ಪೂರ್ಣ ಪ್ರಮಾಣದಲ್ಲಿ ಅಡೂರಿನಿಂದ ಕಾಸರಗೋಡಿಗೆ ಸಂಚರಿಸುತ್ತದೆ. ಅದರೊಂದಿಗೆ ಇನ್ನೊಂದು ಕೇರಳ ಸಕರ್ಾರಿ ಬಸ್ ಅತ್ತನಾಡಿ, ಬದಿಯಡ್ಕದ ಮೂಲಕ ಮಂಗಳೂರಿಗೆ ತೆರಳಿ, ಉಳಿದ ಸಮಯದಲ್ಲಿ ಕಾಸರಗೋಡಿಗೆ ಸಂಚರಿಸಿ, ರಾತ್ರಿಗೆ ಮಂಗಳೂರಿನಿಂದ ಬದಿಯಡ್ಕ, ಅತ್ತನಾಡಿ ಮೂಲಕ ಅಡೂರಿಗೆ ಬರಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ, ಇದರಿಂದ ನೀಚರ್ಾಲು, ಬದಿಯಡ್ಕ, ನಾರಂಪಾಡಿ, ಮುಳ್ಳೇರಿಯ ಪ್ರದೇಶದ ಜನತೆಗೆ ಸಂಚಾರಕ್ಕೆ ಬಹಳಷ್ಟು ಉಪಕಾರವಾಗಲಿದೆ.
ಕನ್ನಡ ಫಲಕಕ್ಕೆ ಮನವಿ : ದೇಲಂಪಾಡಿ ಗ್ರಾಮ ಪಂಚಾಯಿತಿನ ಅಡೂರು ಪ್ರದೇಶವು ಪೂರ್ಣ ಪ್ರಮಾಣದ ಕನ್ನಡ ಪ್ರದೇಶವಾಗಿದ್ದು, ಇಲ್ಲಿನ ಜನತೆಯು ಕೌಟುಂಬಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಕನರ್ಾಟಕವನ್ನು ಅವಲಂಬಿಸಿದ್ದಾರೆ. ಅಡೂರಿನ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಕನರ್ಾಟಕದಿಂದ ಆಗಮಿಸುವ ಭಕ್ತಾಧಿಗಳ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಈಗ ಆರಂಭವಾದ ಬಸ್ಸಿನ ಸ್ಥಳನಾಮ ಫಲಕಗಳನ್ನು ಕನ್ನಡ ಭಾಷೆಯಲ್ಲಿಯೂ ಮುದ್ರಿಸಿ ಅಳವಡಿಸಬೇಕು ಎಂದು ಅಡೂರಿನ ಕನ್ನಡಿಗರು ಮನವಿ ಮಾಡಿದ್ದಾರೆ.