ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 06, 2017
ಮಹಾಜನರ ಶತಮಾನದ ಶಾಲೆ, ಮಹಾನ್ ಜನ ನಿಮರ್ಾಣದ ಮಹತ್ ಕೊಡುಗೆ-ರಾಘವೇಶ್ವರ ಶ್ರೀ
ಬದಿಯಡ್ಕ : ಸಂಸ್ಕೃತ ಭಾಷೆಯನ್ನು ಮರೆತರೆ ಸಂಸ್ಕೃತಿಯನ್ನು ಕಳೆದುಕೊಂಡಂತೆ. ನಮ್ಮ ಸಂಸ್ಕೃತಿಗೆ ಸಂಬಂಧಪಟ್ಟ ಎಲ್ಲ ಸಂಗತಿಗಳೂ ಸಂಸ್ಕೃತ ಭಾಷೆಯಲ್ಲಿದೆ. ಇಂತಹ ಅಪರೂಪದ ಭಾಷೆಯನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ಈ ಸಂಸ್ಥೆ, ಈ ಭೂಮಿ ನಿರತವಾಗಿದೆ. ಶತಮಾನವನ್ನು ಕಂಡ ಶಾಲೆ ಸದಾಕಾಲ ಉಳಿಯಲಿ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನೀಚರ್ಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಭಕ್ತರನ್ನುದ್ದೇಶಿಸಿ ಆಶೀರ್ವಚನವನ್ನು ನೀಡಿದರು.
ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡೆರಿ ಶಾಲೆಯಲ್ಲಿ ವೇದಘೋಷ, ಪೂರ್ಣಕುಂಭ, ಚೆಂಡೆ ವಾದ್ಯಗಳೊಂದಿಗೆ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಹಾಗೂ ಶಿಷ್ಯವೃಂದದವರು ಬರಮಾಡಿಕೊಂಡರು.
ಬಳಿಕ ಏಣಿಯಪರ್ು ಬಾಲಕೃಷ್ಣ ಪ್ರಸಾದರ `ಈಶಾವಾಸ್ಯಂ' ಮನೆಯಲ್ಲಿ ಧೂಳೀಪಾದುಕಾ ಪೂಜೆ ಸ್ವೀಕರಿಸಿ ಮೊಕ್ಕಾಂ ಹೂಡಿದರು. ಈ ಸಂದರ್ಭದಲ್ಲಿ ಮುಳ್ಳೇರಿಯ ಹವ್ಯಕ ಮಂಡಲ ಪ್ರಧಾನರು, ಗುರಿಕ್ಕಾರರು ಹಾಗೂ ಶಿಷ್ಯವೃಂದದವರು ಉಪಸ್ಥಿರಿದ್ದರು.
ಇಂದು ಬೆಳಗ್ಗೆ ಶ್ರೀಕರಾಚರ್ಿತ ದೇವತಾ ಪೂಜೆ, ಗೋಪೂಜೆ, ಭಿಕ್ಷಾಸೇವೆ, ಆಶೀರ್ವಚನ, ಮಂತ್ರಾಕ್ಷತೆ ನಡೆಯಲಿದೆ. ಅಪರಾಹ್ನ ಮಂಗಳೂರು ಮಂಡಲದ ಕೊಣಾಜೆ ಶಂಕರ ಭಟ್ಟರ ನಿವಾಸಕ್ಕೆ ಚಿತ್ತೈಸಲಿದ್ದಾರೆ.