HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಹೊರರಾಜ್ಯ ಕಾಮರ್ಿಕರ ಸಂರಕ್ಷಣೆಗೆ ಆವಾಜ್ ಯೋಜನೆ ಕಾಸರಗೋಡು: ಕೇರಳದಲ್ಲಿ ದುಡಿಯುತ್ತಿರುವ ಹೊರರಾಜ್ಯ ಕಾಮರ್ಿಕರ ಸಂರಕ್ಷಣೆಗಾಗಿ ರಾಜ್ಯ ಕಾಮರ್ಿಕ ಇಲಾಖೆಯು ಕಾರ್ಯರೂಪಕ್ಕೆ ತಂದಿರುವ ಆವಾಜ್ ಯೋಜನೆಗೆ ವಿದ್ಯುಕ್ತ ಚಾಲನೆ ದೊರೆತಿದೆ. ತಿರುವನಂತಪುರ ಸೆಂಟ್ರಲ್ ಸ್ಟೇಡಿಯಂನಲ್ಲಿ ಅನ್ಯರಾಜ್ಯಗಳ ಸಾವಿರಾರು ಮಂದಿ ಕಾಮರ್ಿಕರು ಭಾಗವಹಿಸಿದ್ದ ಸಮಾರಂಭದಲ್ಲಿ ರಾಜ್ಯ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಖಾತೆ ಸಚಿವೆ ಕೆ.ಕೆ.ಶೈಲಜಾ ಅವರು ಯೋಜನೆಯನ್ನು ಉದ್ಘಾಟಿಸಿದರು. ಈ ಯೋಜನೆಯಂತೆ ಹೊರರಾಜ್ಯಗಳ ಕಾಮರ್ಿಕರಿಗೆ ತಲಾ 15,000 ರೂಪಾಯಿ ಚಿಕಿತ್ಸಾ ಸಹಾಯ ನೀಡಲಾಗುವುದು. ಅಪಘಾತ ಮರಣ ಉಂಟಾದಲ್ಲಿ ಅವರ ಆಶ್ರಿತರಿಗೆ ಎರಡು ಲಕ್ಷ ರೂ. ವಿಮಾ ಸಂರಕ್ಷಣೆ ಲಭಿಸಲಿದೆ. ಹೊರರಾಜ್ಯ ಕಾಮರ್ಿಕರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಮಕ್ಕಳ ಸಂರಕ್ಷಣೆಗಾಗಿ ಸಾಮಾಜಿಕ ನ್ಯಾಯ ಇಲಾಖೆಯು ಹಲವು ಯೋಜನೆಗಳನ್ನು ಆರಂಭಿಸಲಿದೆ. ಇವುಗಳು ಅಂಗನವಾಡಿಗಳ ರೀತಿಯಲ್ಲಿ ಕಾಯರ್ಾಚರಿಸಲಿದೆ. ಅಲ್ಲಿ ಮಕ್ಕಳಿಗೆ ಪೋಷಕಾಂಶ ಹೊಂದಿರುವ ಆಹಾರಗಳ ಜೊತೆಗೆ ಪ್ರಾಥಮಿಕ ಶಿಕ್ಷಣವನ್ನು ಕೂಡ ಒದಗಿಸಲು ನಿರ್ಧರಿಸಲಾಗಿದೆ. ಆವಾಜ್ ಯೋಜನೆಯಲ್ಲಿ ಹೆಸರು ನೋಂದಾಯಿಸುವ ಹೊರರಾಜ್ಯ ಕಾಮರ್ಿಕರಿಗೆ 2018ರ ಜನವರಿ 1ರಿಂದ ಸವಲತ್ತುಗಳು ದೊರಕಲಿವೆ. ಕೇರಳದಲ್ಲಿ ಐದು ಲಕ್ಷದಷ್ಟು ಹೊರರಾಜ್ಯ ಕಾಮರ್ಿಕರು ವಿವಿಧ ವಲಯಗಳಲ್ಲಿ ದುಡಿದು ಇಲ್ಲೇ ಜೀವಿಸುತ್ತಿದ್ದಾರೆ. ಅವರೆಲ್ಲರೂ ಈ ಯೋಜನೆಯಡಿ ಹೆಸರು ನೋಂದಾಯಿಸಬಹುದು. ಹೊರರಾಜ್ಯ ಕಾಮರ್ಿಕರ ಸಂರಕ್ಷಣೆಗಾಗಿ ಇಂತಹ ಯೋಜನೆಯನ್ನು ಜಾರಿಗೊಳಿಸಿರುವುದು ದೇಶದಲ್ಲೇ ಇದು ಪ್ರಥಮ ಎಂಬ ಹೆಗ್ಗಳಿಕೆ ಕೇರಳಕ್ಕೆ ಸಲ್ಲುತ್ತದೆ. ಕೇರಳದಲ್ಲಿ ಅನ್ಯರಾಜ್ಯಗಳ ಕಾಮರ್ಿಕರಿಗೆ ಸರಿಯಾದ ಆರೋಗ್ಯ ಹಾಗೂ ಇನ್ನಿತರ ವ್ಯವಸ್ಥೆಗಳಿಲ್ಲ ಎಂಬ ಆರೋಪ ಕೇಳಿಬರುತ್ತಿತ್ತು. ವಾಸಿಸಲು ಕೂಡ ಸಮರ್ಪಕ ಕಟ್ಟಡದ ಅನುಕೂಲತೆ ಇಲ್ಲ ಎಂಬ ಕೊರಗು ಅವರನ್ನು ಕಾಡುತ್ತಿತ್ತು. ಇದೀಗ ನೂತನ ಯೋಜನೆಯಿಂದಾಗಿ ಹೊರರಾಜ್ಯ ಕಾಮರ್ಿಕರ ಬದುಕಿಗೆ ಒಂದಿಷ್ಟು ನೆಮ್ಮದಿ ಲಭಿಸಲಿದೆ. ಕಾಸರಗೋಡಿನಲ್ಲಿ ಸೂಕ್ತ ವ್ಯವಸ್ಥೆ : ಆವಾಜ್ ಯೋಜನೆಯಂತೆ ಕಾಸರಗೋಡು ಜಿಲ್ಲೆಯಲ್ಲಿ ಸಮರ್ಪಕವಾಗಿ ಸವಲತ್ತುಗಳನ್ನು ಒದಗಿಸಿಕೊಡಲು ರೂಪುರೇಷೆ ತಯಾರಿಸಲಾಗುವುದು. ಅಲ್ಲದೆ ಹೊರರಾಜ್ಯ ಕಾಮರ್ಿಕರನ್ನು ಗುರುತಿಸಿ ಹೆಸರು ನೋಂದಾಯಿಸುವ ಪ್ರಕ್ರಿಯೆಗೂ ಚಾಲನೆ ಕೊಡಲಾಗುವುದು. ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಖಾತೆಯು ನೇತೃತ್ವ ವಹಿಸಲಿದ್ದು, ಇತರ ಇಲಾಖೆಗಳ ಸಹಕಾರದೊಂದಿಗೆ ಯೋಜನೆಯನ್ನು ಪೂರ್ಣವಾಗಿ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries