HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಪಂಚಾಯತ್ ಅಧ್ಯಕ್ಷರಿಗೂ ಕನಿಷ್ಠ ವಿದ್ಯಾರ್ಹತೆ ನಿಗದಿ? ಹೊಸದಿಲ್ಲಿ: ದೇಶದಲ್ಲಿರುವ ಎಲ್ಲ ಗ್ರಾಮ ಪಂಚಾಯತ್ಗಳ ಅಧ್ಯಕ್ಷರಾಗುವವರಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿ ಮಾಡುವ ಸಂಬಂಧ ಮತ್ತೆ ಚಚರ್ೆ ಶುರುವಾಗಿದೆ. ಈ ಸಂಬಂಧ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಸೋಮವಾರ ನಡೆದ ಸ್ಥಳೀಯ ಪಂಚಾಯತ್ಗಳಿಗೆ ಆಯ್ಕೆಯಾಗಿರುವ ಮಹಿಳಾ ಜನಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿದರು. ಈಗಾಗಲೇ ರಾಜಸ್ಥಾನ ಮತ್ತು ಹರಿಯಾಣ ರಾಜ್ಯಗಳಲ್ಲಿ ಕನಿಷ್ಠ ವಿದ್ಯಾರ್ಹತೆ ನಿಯಮ ಜಾರಿಯಲ್ಲಿದ್ದು, ಇದೇ ಮಾದರಿಯನ್ನು ಇತರ ರಾಜ್ಯಗಳಲ್ಲಿಯೂ ತರುವಂತೆ ಪತ್ರ ಬರೆಯುತ್ತೇನೆ ಎಂದಿದ್ದಾರೆ. ರಾಜಸ್ಥಾನ ಮತ್ತು ಹರಿಯಾಣ ರಾಜ್ಯ ಸರಕಾರಗಳು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಸ್ಥಳೀಯ ಚುನಾವಣೆಗಳಲ್ಲಿ ಸ್ಪಧರ್ಿಸಬೇಕಾದರೆ ಇಂತಿಷ್ಟೇ ಅಥವಾ ಕನಿಷ್ಠ ವಿದ್ಯಾರ್ಹತೆ ಇರಬೇಕು ಎಂಬ ನಿಯಮ ಮಾಡಿದೆ. ಈ ಸರಕಾರಗಳ ಕೆಲಸ ಶ್ಲಾಘನೀಯವಾದದ್ದು. ಅಲ್ಲಿಯೂ ಆರಂಭದಲ್ಲಿ ಈ ನಿಧರ್ಾರಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಆದರೆ ಅನಂತರದಲ್ಲಿ ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಮೇನಕಾ ಅಭಿಪ್ರಾಯಪಟ್ಟಿದ್ದಾರೆ. ರಾಜಸ್ಥಾನ ಸರಕಾರದ ತಿದ್ದುಪಡಿ ಕಾಯ್ದೆಯಂತೆ ಜಿಲ್ಲಾ ಪಂಚಾಯತ್ ಮತ್ತು ಪಂಚಾಯತ್ ಸಮಿತಿ ಚುನಾವಣೆಗಳಲ್ಲಿ ಸ್ಪಧರ್ಿಸಬೇಕಾದರೆ ಪುರುಷರು 10ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿರಲೇ ಬೇಕು. ಅಲ್ಲದೆ ಗ್ರಾ. ಪಂ. ಅಧ್ಯಕ್ಷರಾಗಿ ನೇಮಕ ವಾಗಬೇಕಾದರೆ 8ನೇ ತರಗತಿ ಮುಗಿಸಿರಬೇಕು ಎಂಬ ನಿಯಮವಿದೆ. ಹರಿಯಾಣ ಕೂಡ ಇದೇ ಮಾದರಿಯ ನಿಯಮ ಜಾರಿ ಮಾಡಿದ್ದು, ಇಲ್ಲಿ ಸ್ಥಳೀಯ ಪಂಚಾಯತ್ ಚುನಾವಣೆಗಳಲ್ಲಿ ಸ್ಪಧರ್ಿಸ ಬೇಕಾದರೆ 10ನೇ ತರಗತಿ ಮುಗಿಸಿರಲೇಬೇಕು. ಆದರೆ ಪರಿಶಿಷ್ಟ ಜಾತಿ ಮತ್ತು ಮಹಿಳಾ ಅಭ್ಯಥರ್ಿಗಳಿಗೆ ವಿನಾಯಿತಿ ಇದ್ದು ಇವರು 8ನೇ ತರಗತಿ ಮುಗಿಸಿರಬೇಕು ಎಂಬ ನಿಯಮವಿದೆ. ಇದಷ್ಟೇ ಅಲ್ಲ, ಈ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸ್ಪಧರ್ಿಸಬೇಕಾದರೆ ಅವರ ಮನೆಗಳಲ್ಲಿ ಕಡ್ಡಾಯವಾಗಿ ಶೌಚಾಲಯ ಹೊಂದಿರಲೇಬೇಕು ಎಂಬ ನಿಯಮವೂ ಜಾರಿಯಲ್ಲಿದೆ. ಸುಪ್ರೀಂನಲ್ಲಿ ಗೆಲುವು: ರಾಜಸ್ಥಾನ ಮತ್ತು ಹರಿಯಾಣ ಸರಕಾರದ ಈ ನಿಧರ್ಾರವನ್ನು ವಿರೋಧಿಸಿ ಕೆಲವು ಸಾಮಾಜಿಕ ಕಾರ್ಯಕರ್ತರು ಸುಪ್ರೀಂ ಕೋಟರ್್ ಮೊರೆ ಹೋಗಿದ್ದರು. ಆದರೆ ಸುಪ್ರೀಂ ಕೋಟರ್್ ಇವರ ಅಜರ್ಿಯನ್ನು ತಿರಸ್ಕರಿಸಿ, ಈ ರಾಜ್ಯಗಳ ನಿಧರ್ಾರವನ್ನು ಎತ್ತಿ ಹಿಡಿದಿತ್ತು. ಈ ಸರಕಾರಗಳ ಕನಿಷ್ಠ ವಿದ್ಯಾರ್ಹತೆ ನಿಯಮ ದಿಂದಾಗಿ ಬಡವರು, ಶೋಷಿತರು ಚುನಾವಣೆಗಳಲ್ಲಿ ಸ್ಪಧರ್ಿಸುವುದು ಅಸಾಧ್ಯವಾದಂಥ ಸ್ಥಿತಿ ನಿಮರ್ಾಣ ವಾಗುತ್ತದೆ ಎಂದು ಆರೋಪಿಸಿದ್ದರು. ಆದರೆ ಆಗ ವಿಚಾರಣೆ ನಡೆಸಿದ್ದ ನ್ಯಾ. ಚಲಮೇಶ್ವರ ಮತ್ತು ನ್ಯಾ| ಅಭಯ ಮನೋಹರ್ ಸಪ್ರ ಅವರು ಹರಿಯಾಣದ ಈ ನಿಧರ್ಾರದಿಂದಾಗಿ ಎರಡು ವರ್ಗದ ರೀತಿಯ ಜನ ಸೃಷ್ಟಿಯಾಗುತ್ತಾರೆ ಎಂಬುದನ್ನು ಒಪ್ಪಿಕೊಂಡಿ ದ್ದರು. ಅಂದರೆ, ಕಲಿತವರು ಮತ್ತು ಕಲಿಯದವರು ಎಂಬ ವಗರ್ೀಕರಣ ಸೃಷ್ಟಿಯಾಗುತ್ತದೆ ಎಂದಿದ್ದರು. ಆದರೆ ತೀಪರ್ು ನೀಡಿದ್ದ ನ್ಯಾ| ಚಲಮೇಶ್ವರ ಅವರು, ರಾಜ್ಯವೊಂದು ಕನಿಷ್ಠ ವಿದ್ಯಾರ್ಹತೆ ಪಡೆದವರಷ್ಟೇ ಚುನಾವಣೆಯಲ್ಲಿ ಸ್ಪಧರ್ಿಸಬಹುದು ಎಂಬ ನಿಯಮ ರೂಪಿಸಿದಾಗ ಅದನ್ನು ಒಪ್ಪಿಕೊಳ್ಳೋಣ. ಏಕೆಂದರೆ, ಶಿಕ್ಷಿತ ಜನಪ್ರತಿ ನಿಧಿಗಳು ಬಂದರೆ, ಪಂಚಾಯತ್ ರಾಜ್ನ ಕರ್ತವ್ಯಗಳನ್ನು ಉತ್ತಮವಾಗಿ ಮಾಡುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳಿದ್ದರು. ಅಲ್ಲದೆ ಯಾವುದು ಒಳ್ಳೆಯದು ಮತ್ತು ಕೆಟ್ಟದ್ದು ಅಥವಾ ತಪ್ಪು ಮತ್ತು ಸರಿ ಎಂಬುದನ್ನು ಶಿಕ್ಷಣದಿಂದಲೇ ಗೊತ್ತಾಗಲು ಸಾಧ್ಯ ಎಂದಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries