ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2017
ವಿದೇಶ/ ಸಮರಸ ಸಂಕ್ಷಿಪ್ತ ಸುದ್ದಿ
ಆಜೀವ ನಿಷೇಧ
ಮಾಂಟ್ರಿಯಲ್ (ಎಎಫ್ಪಿ): ಹಾಲಿವುಡ್ನಲ್ಲಿ ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಪ್ರಮುಖ ಸಿನಿಮಾ ನಿಮರ್ಾಪಕ ಹಾವರ್ಿ ವೇಯ್ನ್ಸ್ಟಿನ್ ಅವರಿಗೆ, ಪ್ರತಿಷ್ಠಿತ ಎಮ್ಮಿ ಪ್ರಶಸ್ತಿ ನೀಡುವ ಟೆಲಿವಿಷನ್ ಅಕಾಡೆಮಿಯು ಆಜೀವ ನಿಷೇಧ ಹೇರಿದೆ.
ಅಪ್ಪಂದಿರಲ್ಲಿ ಖಿನ್ನತೆ
ಲಂಡನ್ (ಪಿಟಿಐ): ಆಗಷ್ಟೇ ತಂದೆಯಾದವರಲ್ಲಿ ಖಿನ್ನತೆ ಕಾಣಿಸಿಕೊಳ್ಳುವುದು ಸಾಮಾನ್ಯ; ಇವರಲ್ಲಿ ಶೇ 83ರಷ್ಟು ಮಂದಿ ತಮ್ಮ ಪರಿಸ್ಥಿತಿಯನ್ನು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ ಎಂದು ಸ್ವೀಡನ್ನಿನ ಲಂಡ್ ವಿಶ್ವವಿದ್ಯಾಲಯದ ಅಧ್ಯಯನ ವರದಿಯೊಂದು ಹೇಳಿದೆ.
ಕಠಿಣ ನಿಯಮ:
ಬ್ಯಾಂಕಾಕ್ (ಎಎಫ್ಪಿ): ವಿದ್ಯುನ್ಮಾನ ತಂತ್ರಜ್ಞಾನದಿಂದ ಆಗುತ್ತಿರುವ ವಂಚನೆ ತಪ್ಪಿಸಲು ಮತ್ತು ಮೊಬೈಲ್ ಬ್ಯಾಂಕಿಂಗ್ ಉತ್ತೇಜಿಸಲು ಮುಂದಾಗಿರುವ ಥಾಯ್ಲೆಂಡ್ ಸಕರ್ಾರ, ಸಿಮ್ ಕಾಡರ್್ ಪಡೆಯಲು ಮುಖದ ಸ್ಕ್ಯಾನ್ ಅಥವಾ ಬೆರಳಚ್ಚು ಪಡೆಯುವುದನ್ನು ಮುಂದಿನ ತಿಂಗಳಿನಿಂದ ಜಾರಿಗೆ ತರಲಿದೆ.
ಜನಸಂಖ್ಯೆ ಕುಸಿತ:
ಮಿಯಾಮಿ (ಎಎಫ್ಪಿ): ಸೆಪ್ಟೆಂಬರ್ನಲ್ಲಿ ಪೋರ್ಟರಿಕೊದಲ್ಲಿ ಬೀಸಿದ ಹರಿಕೇನ್ ಮಾರಿಯಾ ಚಂಡಮಾರುತ ಸೃಷ್ಟಿಸಿರುವ ಅಪಾಯದಿಂದ ಪಾರಾಗುವ ಸಲುವಾಗಿ ಇಲ್ಲಿನ ನಿವಾಸಿಗಳು ಭಾರಿ ಪ್ರಮಾಣದಲ್ಲಿ ವಲಸೆ ಹೊರಟಿದ್ದಾರೆ. ಇದರಿಂದ, 2019ರ ವೇಳೆಗೆ ಇಲ್ಲಿನ ಜನಸಂಖ್ಯೆ ಶೇ 14ರಷ್ಟು ಕಡಿಮೆ ಆಗಲಿದೆ ಎಂದು ವರದಿಯೊಂದು ಹೇಳಿದೆ.
ಗಾಯಕ್ಕೆ ರಾಮಬಾಣ
ಲಂಡನ್ (ಪಿಟಿಐ): ವಿಟಮಿನ್ ಡಿ ಪೋಷಕಾಂಶಗಳು ತೀವ್ರ ಸುಟ್ಟಗಾಯವನ್ನು ಗುಣಪಡಿಸುವ, ಅದರ ಸೋಂಕು ಮತ್ತು ಕಲೆಗಳನ್ನು ತಡೆಗಟ್ಟುವ ಶಕ್ತಿ ಹೊಂದಿವೆ ಎಂದು ಇಂಗ್ಲೆಂಡ್ನ ಬಮರ್ಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಅಧ್ಯಯನ ವರದಿಯೊಂದು ಮಾಹಿತಿ ನೀಡಿದೆ.