ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2017
ಬಡವರ ಸೇವೆ ಮಾಡಿದ್ದಲ್ಲಿ ಮಾತ್ರ ದೇವರು ಅನುಗ್ರಹ : ಡಾ.ಅಲೋಶಿಯಸ್ ಪಾವ್ಲ್ ಡಿ'ಸೋಜ
ಬದಿಯಡ್ಕ: ಸಮಾಜ ಸೇವೆ, ಬಡವರ ಸೇವೆ ಮಾಡಿದ್ದಲ್ಲಿ ಮಾತ್ರ ದೇವರು ಅನುಗ್ರಹ ಲಭಿಸಲಿದೆ. ಸಮಾಜ ಏನನ್ನು ನೀಡಿದೆ ಎಂಬುದು ಮುಖ್ಯವಲ್ಲ. ಸಮಾಜಕ್ಕೆ ನಾವು ಏನು ನೀಡಿದ್ದೇವೆ ಎಂಬುವುದು ಪ್ರಸ್ತುತ. ಇದನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮಂಗಳೂರು ಧರ್ಮಪ್ರಾಂತ್ಯದ ಧಮರ್ಾಧ್ಯಕ್ಷ ವಂದನೀಯ ಡಾ.ಅಲೋಶಿಯಸ್ ಪಾವ್ಲ್ ಡಿ'ಸೋಜ ಅವರು ಹೇಳಿದರು.
ಅವರು ನಾರಂಪಾಡಿ ಸೈಂಟ್ ಜೋನ್ ದಿ ಬ್ರಿಟ್ಟೋ ದೇವಾಲಯದಲಲಿ ಇತ್ತೀಚೆಗೆ ನಡೆದ ಅಮೃತ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜಕ್ಕೆ ನಾವು ನೀಡುತ್ತಿರುವ ಕೊಡುಗೆಗೆ ದೇವರ ಆಶೀವರ್ಾದ ನಮಗಿದೆ. ಬಡವರು ಮತ್ತು ರೋಗಿಗಳ ಸೇವೆ ನಮ್ಮದಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾಸರಗೋಡು ವಲಯದ ಧರ್ಮಗುರು ವಂದನೀಯ ವಲೇರಿಯನ್ ಪ್ರ್ಯಾಂಕ್, ಬದಿಯಡ್ಕ ಸೈಂಟ್ ಮೇರಿಸ್ ಇಗಜರ್ಿಯ ಧರ್ಮಗುರು ಫಾ.ಜೋಸೆಫ್ ಎನಚೇರಿಲ್, ಮಂಗಳೂರು ಪ್ರೊವಿನ್ಶಿಯಲ್ ಸುಪಿರಿಯರ್ ಸಿಸ್ಟರ್ ರೀಟಾ ವಾಸ್, ಚೆಂಗಳ ಪಂಚಾಯತು ಉಪಾಧ್ಯಕ್ಷೆ ಶಾಂತಕುಮಾರಿ, ಕುಂಬ್ಡಾಜೆ ಗ್ರಾ.ಪಂ. ಸದಸ್ಯೆ ಎಜಿಝಬೆತ್ ಕ್ರಾಸ್ತ, ಚಚರ್್ ಪಾಲನಾ ಸಮಿತಿ ಉಪಾಧ್ಯಕ್ಷ ಜೋಸೆಫ್ ಮೊಂತೇರೊ, ಕಾರ್ಯದಶರ್ಿ ರೋಮಿಯೋ ರೋಡ್ರಿಗಸ್, ಸ್ವಾಗತ ಸಮಿತಿ ಸಂಚಾಲಕ ವಿವಿಯನ್ ಡಿ' ಸೋಜ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ವೈದ್ಯಕೀಯ ನಿಧಿಯನ್ನು ಬಿಷಪರು ಉದ್ಘಾಟಿಸಿದರು. ಅಮೃತ ಮಹೋತ್ಸವ ದಾನವಾಗಿ ನಾರಂಪಾಡಿ ಜೋನ್ ಡಿ' ಬ್ರಿಟ್ಟೊ ದೇವಾಲಯ ವತಿಯಿಂದ ಜೇಕಬ್ ಪೇರಂತೊಟ್ಟಿಯವರಿಗೆ ನಿಮರ್ಿಸಿ ನೀಡಲಾದ ಮನೆಯ ಕೀಲಿ ಕೈಯನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಅಮೃತ ಮಹೋತ್ಸವ ಸ್ಮರಣ ಸಂಚಿಕೆಯನ್ನು ಬಿಷಪ್ರವರು ಬಿಡುಗಡೆಗೊಳಿಸಿದರು. ಸಿವೈಎಂ ನ ಬೆಳ್ಳಿ ಹಬ್ಬ ಅಚರಿಸುತ್ತಿರುವ ಹಾಗೂ ಧರ್ಮಪ್ರಾಂತ್ಯ ಮಟ್ಟದಲ್ಲಿ ಉತ್ತಮ ಘಟಕ ಎಂದು ಗುರುತಿಸಿಕೊಂಡಿರುವ ನಾರಂಪಾಡಿ ಘಟಕಕ್ಕೆ ಬಿಷಪ್ ಅಲೋಶಿಯಸ್ ಪಾವ್ಲ್ ಡಿ'ಸೋಜರವರು ಸ್ಮರಣಿಕೆ ನೀಡಿ ಗೌರವಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಪಿಎಚ್ಡಿ ಪಡೆದ ನಿರ್ಮಲ ಡಿ'ಸೋಜ ಅವರನ್ನು ಹಾಗೂ ನಾರಂಪಾಡಿ ಇಗಜರ್ಿಯಲ್ಲಿ ಸೇವೆ ಸಲ್ಲಿಸಿದ್ದ ಧರ್ಮಗುರುಗಳಾದ ವಂ.ಸುನಿಲ್ ಡಿ' ಸಿಲ್ಟಾ ಸಹಿತ ಧರ್ಮಗುರುಗಳನ್ನು ಸಮ್ಮಾನಿಸಲಾಯಿತು.
ದಾನಿಗಳನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ನಾರಂಪಾಡಿ ಇಗಜರ್ಿಯ ಧರ್ಮಗುರು ಜೋನ್ ಬ್ಯಾಪ್ಟಿಸ್ಟ್ ಮೊರಾಸ್ ಸ್ವಾಗತಿಸಿ, ವಿವಿಯನ್ ಡಿ'ಸೋಜ ವಂದಿಸಿದರು. ಸುಚಿತಾ ಲೋಬೊ ಮತ್ತು ದಿಯೋಕೋನ್ ರಾಯನ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.