ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 06, 2017
ಸಿದ್ದಗಂಗಾ ಶ್ರೀಗಳ ಹೆಸರು ಗಿನ್ನೆಸ್ ದಾಖಲೆಗೆ?
ತುಮಕೂರು : ನಡೆದಾಡುವ ದೇವರೇಂದೇ ಖ್ಯಾತರಾದ ಸಿದ್ದಗಂಗಾ ಶ್ರೀಗಳ ಹೆಸರು ಗಿನ್ನೆಸ್ ದಾಖಲೆ ಸೇರಲಿದೆ. ಸಿದ್ದಗಂಗಾ ಶ್ರೀಗಳ ಆಧ್ಯಾತ್ಮಿ ಹಾಗೂ ಸಮಾಜ ಸೇವಾಕಾರ್ಯಗಳನ್ನು ಅಂಕಿ ಅಂಶ ಸಮೇತ ಸಿದ್ದಗಂಗಾ ಮಠದ ನಿವೃತ್ತ ಪ್ರಾಂಶುಪಾಲರೊಬ್ಬರು ಸಂಗ್ರಹಿಸಿದ್ದು ಅವುಗಳನ್ನು ಗಿನ್ನೆಸ್ ಬುಕ್ ಆಫ್ ರೆಕಾಡ್ಸರ್್ ಗೆ ಕೆಲವೇ ದಿಗಳಲ್ಲಿ ಸಲ್ಲಿಸಲಿದ್ದಾರೆ. ಸಿದ್ದಗಂಗಾಶ್ರೀಗಳ ಆಶೀವರ್ಾದ ಬೇಡಿದ ನಂದನ್ ಮಠದಲ್ಲೇ ಹಲವು ವರ್ಷ ಶಿಕ್ಷಕ ವೃತ್ತಿ ಮಾಡಿ ನಿವೃತ್ತ ಪಾಂಶುಪಾಲರಾದ ಚಂದ್ರಶೇಖರಯ್ಯ ಶ್ರೀಗಳ ಬಗ್ಗೆ ಮಹತ್ವಪೂರ್ಣ ಹಾಗೂ ಆಸಕ್ತಿಕರ ಸಂಗತಿಗಳನ್ನು ಕಲೆ ಹಾಕಿದ್ದು ಗಿನ್ನೆಸ್ ದಾಖಲೆಗೆ ನೀಡಲು ಎಲ್ಲ ರೀತಿಯ ತಯಾರಿ ನಡೆಸಿದ್ದಾರೆ. ಚಂದ್ರಶೇಖರಯ್ಯ ಕಲೆ ಹಾಕಿರುವ ಅಂಕಿ ಅಂಶ ಹೀಗಿವೆ. ಮೂರು ಬಾರಿ ಶಿವಪೂಜೆ ಶ್ರಿಗಳು ದೀಕ್ಷೆ ಪಡೆದು 88 ವರ್ಷಗಳಾಗಿವೆ, ದಿನದಲ್ಲಿ ಮೂರು ಬಾರಿ ತಪ್ಪದೇ ಶಿವಪೂಜೆ ಮಾಡುವ ಅವರು 88 ವರ್ಷಗಳಲ್ಲಿ ಅವರು 96,426 ಕ್ಕೂ ಹೆಚ್ಚು ಬಾರಿ ಶಿವಪೂಜೆ ಮಾಡಿದ್ದಾರೆ. ಬಹುಷಾ ಶ್ರೀಗಳಷ್ಟು ಶಿವಾರಾಧನೆ ಮಾಡಿರುವವರು ಸದ್ಯದ ಪರಿಸ್ಥಿತಿಯಲ್ಲಿ ಯಾಊ ಇಲ್ಲವೇನೊ 6 ಗಂಟೆ ಧ್ಯಾನ, ಪೂಜೆ ಶ್ರೀಗಳು ಪ್ರತಿದಿನ 6 ಗಂಟೆ ಧ್ಯಾನ ಮತ್ತು ಪೂಜೆಯಲ್ಲಿ ತಪ್ಪದೆ ತಮ್ಮನ್ನು ತೊಡಗಿಕೊಳ್ಳುತ್ತಾರೆ ಅಂದರೆ ಸುಮಾರು 1.89.930ಗಂಟೆಗೂ ಅಧಿಕ ಸಮಯ ಧ್ಯಾನ ಮತ್ತು ಪೂಜೆ ಮಾಡಿದ್ದಾರೆ . 14 ಗಂಟೆ ಸಮಾಜ ಸೇವೆಯಲ್ಲಿ ತೊಡಗುವ ಶ್ರೀಗಳು ಇಲ್ಲಿಯವರೆಗೆ 4,49,680 ಗಂಟೆಗಳ ಕಾಲ ಸಮಾಜ ಸೇವೆಗೈದಿದ್ದಾರೆ. ಲಕ್ಷಾಂತರ ವಿದ್ಯಾಥರ್ಿಗಳು ಸಿದ್ದಗಂಗಾ ಮಠದ ಬೃಹತ್ ಶಿಕ್ಷಣ ದಾಸೋಹದ ಅಂಕಿ-ಅಂಶಗಳನ್ನೂ ಚಂದ್ರಶೇಖರಯ್ಯ ಅವರು ಸಂಗ್ರಹಿಸಿದ್ದಾರೆ. 1935 ರಿಂದ 2017ರ ವರೆಗೆ 2,67,545 ವಿದ್ಯಾಥರ್ಿಗಳು ಮಠದಲ್ಲಿ ವ್ಯಾಸಾಂಗ ಮಾಡಿದ್ದಾರೆ, ಇನ್ನು ಗ್ರಾಮೀಣ ಭಾಗದಲ್ಲಿರುವ ಮಠದ 100 ಕ್ಕೂ ಅಧಿಕ ವಿದ್ಯಾಸಂಸ್ಥೆಗಳಲ್ಲಿ 6,06,312 ಮಂದಿ ವಿದ್ಯಾಥರ್ಿಗಳು ವಿದ್ಯೆ ಕಲಿತಿದ್ದಾರೆ. ಈ ವಿದ್ಯಾಥರ್ಿಗಳಿಗೆ ವಿದ್ಯೆ ಕಲಿಸಿರುವ ಶಿಕ್ಷಕರ ಸಂಖ್ಯೆ 23,854, ಬೋದಕೇತರ ಸಿಬ್ಬಂದಿ ಸಂಖ್ಯೆ 23,845. ಕೋಟ್ಯಾಂತರ ಭಕ್ತರಿಗೆ ದಾಸೋಹ ಶ್ರೀ ಮಠಕ್ಕೆ ಭೇಟಿ ನೀಡಿದ ಭಕ್ತಾದಿಗಳ ಸಂಖ್ಯೆಯನ್ನು ಕ್ರೂಡೀಕಸಿರಿವ ಚಂದ್ರಶೇಖರಯ್ಯ. ಈ ವರೆಗೆ ಮಠಕ್ಕೆ ಭೇಟಿ ನೀಡಿರುವ ಭಕ್ತಾದಿಗಳ ಸಂಖ್ಯೆ 6,68,29,200 ಎಂದು ಲೆಕ್ಕಾ ಹಾಕಿದ್ದಾರೆ. ಜಾತ್ರಾ ಸಮಯದಲ್ಲಿ ಮಠದಲ್ಲಿ ದಾಸೋಹ ಸ್ವೀಕರಿಸಿರುವ ಭಕ್ತರ ಸಂಖ್ಯೆ 3,62,00,000 . ಇನ್ನು ಸಿದ್ದಗಂಗಾ ಶ್ರೀಗಳ ಪಾದ ಸ್ಪಶರ್ಿಸಿದವರ ಸಂಖ್ಯೆ 23,12,64,000 ಅನ್ನೂ ದಾಟಿದೆಯಂತೆ. ಭಾರತ ರತ್ನ ನೀಡಲು ಹಿಂದೇಟು ದಾಖಲೆಗೆ ಅರ್ಹವಾದ ಅಂಕಿ ಅಂಶಗಳನ್ನೇ ಚಂದ್ರಶೇಖರಯ್ಯ ಅವರು ಸಂಗ್ರಹಿಸಿದ್ದಾರೆ, ನಮ್ಮವರೇ ಶ್ರೀಗಳಿಗೆ ಭಾರತ ರತ್ನ ನೀಡಲು ಹಿಂದೆ ಮುಂದೆ ನೋಡುತ್ತಿರುವ ಸಮಯದಲ್ಲಿ ಅನ್ಯ ದೇಶಿಯರು ಸಿದ್ದಗಂಗಾ ಶ್ರೀಗಳ ಸಾಧನೆ ಗೌರವಿಸಿ ಗಿನ್ನೆಸ್ ಬುಕ್ ಆಪ್ ರೆಕಾಡರ್್ ಗೆ ಹೆಸರು ಸೇರಿದರೆ ಅದು ಕನ್ನಡಿಗರ ಹೆಮ್ಮೆ ಎಂದೇ ಪರಿಗಣಿತವಾಗುತ್ತದೆ.