ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ಗೂಗಲ್ ನಕ್ಷೆಯಲ್ಲಿ ಕನ್ನಡ ಡಿಂಡಿಮ: ನಿಮ್ಮೂರ ಹೆಸರೀಗ ಮಾತೃಭಾಷೆಯಲ್ಲಿ!
ಬೆಂಗಳೂರು: ಇವತ್ತು ಗೂಗಲ್ ನಕ್ಷೆ ನೋಡುವವರಿಗೊಮ್ಮೆ ಅಚ್ಚರಿಯಾಗಬಹುದು. ಏಕೆಂದರೆ ನೀವು ತೆರಳಬೇಕಾದ ಸ್ಥಳಗಳನ್ನು ಗೂಗಲ್ ನಕ್ಷೆ ನಿಮ್ಮ ಮಾತೃಭಾಷೆಯಲ್ಲಿ ನೀಡುತ್ತಿದೆ. ಅಂದರೆ ಕನ್ನಡದಲ್ಲಿ! ಕನ್ನಡ ರಾಜ್ಯೋತ್ಸವದ ವಿಶೇಷವೋ ಏನೋ ಗೊತ್ತಿಲ್ಲ, ಆದರೆ ಗೂಗಲ್ ನಕ್ಷೆಯಲ್ಲಿ ಕನ್ನಡ ನೋಡಿ ಕನ್ನಡ ಪ್ರೇಮಿಗಳಿಗಂತೂ ಮೃಷ್ಟಾನ್ನ ಉಂಡಷ್ಟು ಸಂತಸವಾಗಿದ್ದು ಸತ್ಯ. ಕನ್ನಡ ಎಂಬ ಅವಿಚ್ಛಿನ್ನ ಪರಂಪರೆಯನ್ನು ಕಾಪಿಡಲಿ 'ಕನ್ನಡ ರಾಜ್ಯೋತ್ಸವ' ಇಷ್ಟು ದಿನ ಗೂಗಲ್ ನ ತಮಿಳು ನಾಡು ನಕ್ಷೆಯಲ್ಲಿ ತಮಿಳು ಭಾಷೆಯಲ್ಲಿಯೇ ಊರುಗಳ ಹೆಸರು ಕಾಣುತ್ತಿತ್ತು, ಆಂಧ್ರ ಪ್ರದೇಶದ ನಕ್ಷೆಯ ಮೇಲೆ ಕ್ಲಿಕ್ಕಿಸಿದರೆ ತೆಲುಗು ಅಕ್ಷರಗಳೂ ರಾರಾಜಿಸುತ್ತಿದ್ದವು. ಆದರೆ ಅಲ್ಲೂ ಎಂದಿನಂತೆ ಕನ್ನಡ ಮೂಲೆಗುಂಪಾಗಿತ್ತು. ಕನ್ನಡಿಗರು ಇಂಗ್ಲಿಷ್ ನಲ್ಲಿಯೇ ಕನರ್ಾಟಕದ ಊರುಗಳ ಹೆಸರುಗಳನ್ನು ನೋಡಿ ಸಮಾಧಾನ ಪಟ್ಟುಕೊಳ್ಳಬೇಕಿತ್ತು. ಆದರೆ ಇದ್ದಕ್ಕಿದ್ದಂತೆಯೇ ಇಂದಿನಿಂದ ಗೂಗಲ್ ನಕ್ಷೆಯಲ್ಲಿ ಕನ್ನಡ ಪ್ರತ್ಯಕ್ಷವಾಗಿದೆ! ಅಲ್ಲಲ್ಲಿ ಊರುಗಳ ಹೆಸರಿನಲ್ಲಿ ಕಾಗುಣಿತ ದೋಷಗಳಿದ್ದಿರಬಹುದು. ಅದನ್ನು ಸರಿಪಡಿಸಿಕೊಳ್ಳೋಣ. ಆದರೆ 'ಗೂಗಲ್ ನಕ್ಷೆಯಲ್ಲಿ ಕನ್ನಡ' ಈ ಬಾರಿಯ ರಾಜ್ಯೋತ್ಸವಕ್ಕೆ ಭರ್ಜರಿ ಉಡುಗೊರೆಯೇ ಸರಿ. ಕನರ್ಾಟಕದಲ್ಲಿ ಕನ್ನಡೀಕರಣದ ಯುಗಾರಂಭಕ್ಕೆ ಇದೊಂದು ಪುಟ್ಟ, ದಿಟ್ಟ ಹೆಜ್ಜೆ ಎಂದುಕೊಳ್ಳೋಣವೇ? ಗೂಗಲ್ ನಕ್ಷೆಯಲ್ಲಿ ಕನ್ನಡಕಂಡು ಹಿಗ್ಗಿದವರು, ಟ್ವೀಟ್ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಕೆಲವು ಆಯ್ದ ಟ್ವೀಟ್, ಫೇಸ್ ಬುಕ್ ಸ್ಟೇಟಸ್ ಗಳು ಇಲ್ಲಿವೆ... ಕನ್ನಡ ಬಂತು..! ಗೂಗಲ್ ಮ್ಯಾಪ್ ನಲ್ಲಿ ಕನ್ನಡದಲ್ಲಿ ಹೆಸರುಗಳು ಕಾಣುತ್ತಿವೆ. ಕೆಲವು ಕಡೆ ಊರಿನ ಹೆಸರುಗಳು ಕನ್ನಡದಲ್ಲಿ ತಪ್ಪಾಗಿ ಕಾಣುತ್ತಿವೆ. ಆಯ್ಯೋ ತಪ್ಪು ತಪ್ಪು ಕನ್ನಡದಲ್ಲಿ ಕೊಡೊಕ್ಕಿಂತ ಕೊಡದೇ ಇರೊದೇ ಒಳ್ಳೆಯದು ಅಂದುಕೊಳ್ಳದೇ, ತಪ್ಪಾಗಿರುವ ಕಡೆ ಸರಿಪಡಿಸಲು ಗೂಗಲ್ ಗೆ ಸಲಹೆ/ದೂರು ನೀಡಿ, ಮುಂದಿನ ದಿನದಲ್ಲಿ ಕನ್ನಡದಲ್ಲೇ ಗೂಗಲ್ ಮ್ಯಾಪ್ ಬಳಸೋಣ ಎಂದು ಅರುಣ್ ಜಾವಗಲ್ ಎಂಬುವವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಕನ್ನಡ ಅಭಿವೃದ್ಧಿಗೆ ಪೂರಕ ಗೂಗಲ್ ಮ್ಯಾಪ್ಸ್ ನಲ್ಲಿ ಕನ್ನಡ ಭಾಷೆ ರಾರಾಜಿಸುತ್ತಿದೆ. ಇದು ಕನ್ನಡ ಅಭಿವೃದ್ಧಿಗೆ ಪೂರಕ, ಗೂಗಲ್ ಪ್ಯಾಪ್ಸ್ ಗೆ ಧನ್ಯವಾದ ಎಂದು ಸುನಿಲ್ ಗೌಡ ಎನ್ನುವವರು ಟ್ವೀಟ್ ಮಾಡಿದ್ದಾರೆ. ಗೂಗಲ್ ನಕ್ಷೆಯಲ್ಲಿ ಕನ್ನಡ ಅಂತೂ ಇಂತೂ ಗೂಗಲ್ ನಕ್ಷೆಯಲ್ಲಿ ಕನ್ನಡ ಬಂತು . ಗೂಗಲ್ ಮ್ಯಾಪ್ಸ್ ಗೆ ಧನ್ಯವಾದಗಳು ಎಂದು ನಾ(ನೀ)ನು ಎಂಬ ಗೂಗಲ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಗೂಗಲ್ ಇಂಡಿಯಾಕ್ಕೆ ಧನ್ಯವಾದಗಳು ಕನ್ನಡ ಈಗ ಗೂಗಲ್ ಮ್ಯಾಪ್ಸ್ ನಲ್ಲಿ ಕಾಣಿಸುತ್ತಿದೆ. ಡೆಸ್ಕ್ ಟಾಪ್, ಮೊಬೈಲ್ ಎರಡರಲ್ಲೂ ಕನ್ನಡ ಕಾಣುತ್ತಿದೆ. ಧನ್ಯವಾದಗಳು ಗೂಗಲ್ ಇಂಡಿಯಾ ಎಂದು ಅಭಿ ನಂದನ್ ಎಂಬಿವವರು ಹೆಮ್ಮೆಯಿಂದ ಟ್ವೀಟ್ ಮಾಡಿದ್ದಾರೆ. ಕಾಗುಣಿತ ಸರಿಪಡಿಸೋಣ ಗೂಗಲ್ ಮ್ಯಾಪ್ಸ್ ಕನ್ನಡದಲ್ಲಿ ಬರುತ್ತಿದೆ.. ಊರುಗಳ ಹೆಸರುಗಳು ಸ್ವಲ್ಪ ತಪ್ಪಿವೆ.. ಸರಿಪಡಿಸುವಂತೆ ಗೂಗಲ್ಗೆ ಸಲಹೆ ಕೊಡೋಣ.. ಎಂದು ಮಲ್ಲಿಕಾಜರ್ುನ್ ಬಿ ಎನ್ನುವವರು ಟ್ವೀಟ್ ಮಾಡಿದ್ದಾರೆ.