HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಕವಿ ಹೃದಯಗಳ ಬೆಳವಣಿಗೆಗೆ ಸಾಹಿತಯ್ತಿಕ ಕಾರ್ಯಕ್ರಮ ಬೇಕು-ನಾ.ದಾ. ಶೆಟ್ಟಿ ಕುಂಬಳೆ: ಅಂತರಂಗದ ನೈಜತೆಯನ್ನು ಬಡಿದೆಬ್ಬಿಸಿ ಸತ್ಯಶೋಧನೆಗೈಯ್ಯಲು, ಪ್ರಕೃತಿಯೊಂದಿಗೆ ಬೆಸೆದು ಬದುಕಲು ಸಾಹಿತ್ಯ ಪ್ರೇರಣೆ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬನಲ್ಲೂ ಸಮ್ಮಿಳಿತವಾಗಿರುವ ಕವಿಹೃದಯವನ್ನು ಬೆಳಕಿಗೆ ತರಲು ಸಾಹಿತ್ಯ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ, ರಂಗನಿದರ್ೇಶಕ ನಾ.ದಾ. ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸಾಮಾಜಿಕ - ಸಾಂಸ್ಕೃತಿಕ ಸಂಸ್ಥೆಯಾಗಿರುವ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಶನಿವಾರ ಕರಂದಕ್ಕಾಡಿನ `ಪದ್ಮಗಿರಿ ಕಲಾ ಕುಟೀರ'ದಲ್ಲಿ ಆಯೋಜಿಸಿದ ಕನ್ನಡ ರಾಜ್ಯೋತ್ಸವದ ಕಾವ್ಯಧಾರಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಾಜಿಕ ಬದಲಾವಣೆ, ವ್ಯಕ್ತಿ ನಿಮರ್ಾಣದಲ್ಲಿ ಸಾಹಿತ್ಯ ಕ್ಷೇತ್ರದ ಕೊಡುಗೆ ಮಹತ್ತರವಾಗಿದ್ದು, ವರ್ತಮಾನದ ಕನ್ನಡಿಯಾಗಿ ಚಿಕಿತ್ಸಕ ಪ್ರವೃತ್ತಿಯ ಸಾಹಿತ್ಯಗಳು ದಾರಿದೀಪಗಳು ಎಂದು ಅವರು ತಿಳಿಸಿದರು. ಕಾಸರಗೋಡಿನ ಕನ್ನಡ ಸಾರಸ್ವತ ಕ್ಷೇತ್ರ ಹಿರಿಮೆಯಿಂದ ಅಪಾರ ಕ್ರಿಯಾಶೀಲವಾಗಿದ್ದವು ಎಂದರು. ಕಾಸರಗೋಡು ಚಿನ್ನಾರ ನಿತ್ಯನಿರಂತರ ಸಾಂಸ್ಕೃತಿಕ, ಸಾಹಿತ್ತಿಕ ಚಟುವಟಿಕೆಗಳು ಪ್ರೇರಕ ಶಕ್ತಿಯಾಗಿ ಇಲ್ಲಿಯ ಅಸ್ಮಿತೆಯನ್ನು ಬೆಳೆಸುವಲ್ಲಿ ಬಲ ನೀಡುತ್ತಿವೆ ಎಂದು ತಿಳಿಸಿದರು. ಕವಿ ಸುಬ್ರಾಯ ಚೊಕ್ಕಾಡಿ ಉದ್ಘಾಟಿಸಿದ ಸಮಾರಂಭದಲ್ಲಿ ಕವಿ ಎಂ.ಎನ್.ವ್ಯಾಸರಾವ್, ಪತ್ರಕರ್ತ ತಿಲಕನಾಥ ಮಂಜೇಶ್ವರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸತ್ಯನಾರಾಯಣ ಕೆ, ಮನೋಹರ ಶೆಟ್ಟಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ.ವಸಂತ ಕುಮಾರ ಪೆರ್ಲ, ಶೀಕೃಷ್ಣಯ್ಯ ಅನಂತಪುರ, ಬಾಲಕೃಷ್ಣ ಹೊಸಂಗಡಿ, ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ಡಾ.ಯು.ಮಹೇಶ್ವರಿ, ವಿಜಯಲಕ್ಷ್ಮೀ ಶಾನುಭೋಗ್, ವಸಂತಲಕ್ಷ್ಮೀ ಪುತ್ತೂರು, ಗೀತಾ ಕೋಟೆ ಸುಳ್ಯ, ಸೀತಾಲಕ್ಷ್ಮೀ ಕಕರ್ಿಕೋಡಿ, ಹರೀಶ್ ಒಡ್ಡಂಬೆಟ್ಟು(ಕನ್ನಡ), ರಾಧಾಕೃಷ್ಣ ಉಳಿಯತ್ತಡ್ಕ, ಯಶವಂತ ಬೋಳೂರು, ಶಿವಾನಂದ ಕಕರ್ೆರಾ, ಶಶಿರಾಜ (ತುಳು), ಹರೀಶ್ ಪೆರ್ಲ, ಕಾನ್ಸೆಪ್ಟಾ ಫೆನರ್ಾಂಡಿಸ್, ಸ್ಮಿತಾ ಶೆಣೈ, ಜ್ಯೋತಿಪ್ರಭಾ ಎಸ್.ರಾವ್, ಗಣೇಶ್ ಪೈ ಬದಿಯಡ್ಕ(ಕೊಂಕಣಿ), ಮುಹಮ್ಮದ್ ಬಡ್ಡೂರು(ಬ್ಯಾರಿ), ಪಿ.ಎಸ್.ಹಮೀದ್(ಮಲಯಾಳ) ಕವನ ವಾಚಿಸಿದರು. ಇದೇ ಸಂದರ್ಭದಲ್ಲಿ ಸುಬ್ರಾಯ ಚೊಕ್ಕಾಡಿ ಮತ್ತು ಎಂ.ಎನ್.ವ್ಯಾಸರಾವ್ ಅವರನ್ನು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹೂಹಾರ, ಹಣ್ಣುಹಂಪಲು ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ರಂಗನಟ ವೇಣು ಮಿತ್ರ ದಂಪತಿಗಳನ್ನು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹೂಹಾರ, ಹಣ್ಣುಹಂಪಲು ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ಬಿ.ಇ.ಎಂ. ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾಥರ್ಿಗಳು ನಾಡಗೀತೆ ಹಾಡಿದರು. ಖ್ಯಾತ ಗಾಯಕ ಕಿಶೋರ್ ಕುಮಾರ್ ಪೆರ್ಲ ಅವರು ಎಂ.ಎನ್.ವ್ಯಾಸರಾವ್ ಮತ್ತು ಚೊಕ್ಕಾಡಿ ಅವರ ಹಾಡುಗಳನ್ನು ಹಾಡಿ ಜನಮೆಚ್ಚುಗೆಪಡೆದರು. ಸಂಸ್ಥೆಯ ನಿದರ್ೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶಶಿರಾಜ ಕಾವೂರು ಕಾರ್ಯಕ್ರಮ ನಿರೂಪಿಸಿದರು. ಉದಯ ಕುಮಾರ್ ಮನ್ನಿಪ್ಪಾಡಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries