ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ಆರ್ ಅಶ್ವಿನ್ ಈಗ ವಿಶ್ವದ ಅತ್ಯಂತ ಶ್ರೇಷ್ಠ ಸ್ಪಿನ್ನರ್: ಮುರಳೀಧರನ್
ನವದೆಹಲಿ: ಈಗಿರುವವರ ಪೈಕಿ ಆರ್ ಅಶ್ವಿನ್ ವಿಶ್ವದ ಅತ್ಯಂತ ಶ್ರೇಷ್ಠ ಸ್ಪಿನ್ನರ್ ಎಂದು ಶ್ರೀಲಂಕಾ ತಂಡದ ಸ್ಪಿನ್ ಲೆಜೆಂಡ್ ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ 2 ನೇ ಟೆಸ್ಟ್ ನಲ್ಲಿ ಆರ್ ಅಶ್ವಿನ್ ಅತ್ಯಂತ ವೇಗವಾಗಿ 300 ಟೆಸ್ಟ್ ವಿಕೆಟ್ ಗಳನ್ನು ಪಡೆಯುವ ಮೂಲಕ ಡೆನ್ನಿಸ್ ಲಿಲ್ಲಿ ಅವರ ದಾಖಲೆ ಸರಿಗಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಲೆಜೆಂಡರಿ ಆಫ್ ಸ್ಪಿನ್ ಮುತ್ತಯ್ಯ ಮುರಳೀಧರನ್, ಅಶ್ವಿನ್ ಗೆ ಅಭಿನಂದನೆ ಸಲ್ಲಿಸಿದ್ದು, 300 ವಿಕೆಟ್ ಗಳನ್ನು ಪಡೆಯುವುದು ಸುಲಭದ ಕೆಲಸವಲ್ಲ, ಖಂಡಿತವಾಗಿಯೂ ಅವರು ಈಗಿರುವವರ ಪೈಕಿ ವಿಶ್ವದ ಅತ್ಯಂತ ಶ್ರೇಷ್ಠ ಸ್ಪಿನ್ನರ್ ಎಂದಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಅಶ್ವಿನ್ ಇಲ್ಲದೇ ಇರಬಹುದು, ಆದರೆ ಚುಟುಕು ಸ್ವರೂಪದ ಪಂದ್ಯಗಳಲ್ಲಿ ಅಶ್ವಿನ್ ಮತ್ತೆ ಲಯ ಕಂಡುಕೊಳ್ಳಲಿದ್ದು ಅದ್ಭುತಗಳನ್ನು ಸೃಷ್ಟಿಸಲಿದ್ದಾರೆ ಎಂದು ಮುತ್ತಯ್ಯ ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯಾ ಬೌಲರ್ ಲಿಲ್ಲಿ 56 ಪಂದ್ಯಗಳಲ್ಲಿ 300 ವಿಕೆಟ್ ಪಡೆದು ಅತ್ಯಂತ ವೇಗವಾಗಿ 300 ಟೆಸ್ಟ್ ವಿಕೆಟ್ ಗಳನ್ನು ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈಗ 54 ನೇ ಪಂದ್ಯದಲ್ಲಿ 300 ಟೆಸ್ಟ್ ವಿಕೆಟ್ ಗಳನ್ನು ಪಡೆಯುವ ಮೂಲಕ ಡೆನ್ನಿಸ್ ಲಿಲ್ಲಿ ಅವರ ದಾಖಲೆಯನ್ನು ಆರ್ ಅಶ್ವಿನ್ ಸರಿಗಟ್ಟಿದ್ದಾರೆ.