ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2017
ಮನುಷ್ಯನ ಅತಿರೇಕದಿಂದ ಉಷ್ಣಾಂಶ ಹೆಚ್ಚಳ
ವಾಷಿಂಗ್ಟನ್: ಹಸಿರುಮನೆ ಅನಿಲವನ್ನು ವಾತಾವರಣಕ್ಕೆ ಸೇರಿಸುವ ಮನುಕುಲದ ವರ್ತನೆಯಿಂದಾಗಿ ಉಷ್ಣಾಂಶವು ಸಾಮಾನ್ಯದಿಂದ ಅತಿರೇಕಕ್ಕೆ ತಲುಪುತ್ತಿದೆ ಮತ್ತು ಹಿಮನದಿಗಳು ಕರಗಿ ಸಮುದ್ರದ ಮಟ್ಟ ಏರುತ್ತಿದೆ ಎಂದು ಹವಾಮಾನ ವಿಜ್ಞಾನದ ಮೌಲ್ಯಮಾಪನ ಮಾಡಿದ ಅಮೆರಿಕದ ವಿಜ್ಞಾನಿಗಳು ಹೇಳಿದ್ದಾರೆ.
ವಿಜ್ಞಾನಿಗಳು ಸಲ್ಲಿಸಿರುವ 600 ಪುಟಗಳ ವರದಿಯಲ್ಲಿ, `ಕೈಗಾರಿಕಾ ಕ್ರಾಂತಿ ಆರಂಭವಾದ ನಂತರ ಜಾಗತಿಕ ತಾಪಮಾನದಲ್ಲಿ ಸರಾಸರಿ 1 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆ ಕಂಡಿದೆ. ಕಳೆದ 115 ವರ್ಷಗಳು ಆಧುನಿಕ ನಾಗರಿಕತೆಯ ಇತಿಹಾಸದಲ್ಲೇ ಅತಿ ಹೆಚ್ಚು ತಾಪಮಾನ ದಾಖಲಾದ ಅವಧಿ' ಎಂದು ಹೇಳಲಾಗಿದೆ.
`ಈ ಶತಮಾನದ ಅಂತ್ಯದ ವೇಳೆಗೆ ಇನ್ನೂ 4 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ಏರುವ ಸಾಧ್ಯತೆ ಇದೆ. ಮನುಷ್ಯರು ಮತ್ತು ಪರಿಸರ ವ್ಯವಸ್ಥೆಯ ಮೇಲೆ ನಾಟಕೀಯ ಪರಿಣಾಮಗಳು ಉಂಟಾಗಬಹುದು' ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ವ್ಯವಸ್ಥಿತವಾಗಿ ನಿರೂಪಿಸಲಾದ ಹವಾಮಾನ ವಿಜ್ಞಾನದ ತತ್ವಗಳನ್ನೇ ಪ್ರಶ್ನಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದಲ್ಲಿನ ಪಳೆಯುಳಿಕೆ ಇಂಧನಗಳನ್ನು ರಕ್ಷಿಸುವ ಮತ್ತು ಉತ್ತೇಜಿಸುವ ಶಪಥ ಮಾಡಿದ್ದಾರೆ. ಆದರೆ, ಈಗಿನ ಸಂಶೋಧನೆಯು ಟ್ರಂಪ್ ಅವರ ನೀತಿಗಳಿಗೆ ವ್ಯತಿರಿಕ್ತವಾಗಿದೆ.
`ಯಾವುದೇ ರಾಜಕೀಯ ಮೇಲಾಟದಿಂದ ವಿಜ್ಞಾನದ ಪ್ರಾಥಮಿಕ ವಿಶ್ಲೇಷಣೆ ಮತ್ತು ಸತ್ಯಗಳನ್ನು ಬದಲಾಯಿಸಲಾಗುವುದಿಲ್ಲ. ವಿಜ್ಞಾನವು ಸ್ವತಃ ಎಲ್ಲವನ್ನೂ ಹೇಳುತ್ತದೆ' ಎಂದು ಇಲಿನಾಯ್ ವಿಶ್ವವಿದ್ಯಾಲಯದ ಹವಾಮಾನ ವಿಜ್ಞಾನಿ ಡಾನ್ ವ್ಯುಬ್ಲ್ಸ್ ಹೇಳಿದ್ದಾರೆ.
ನಾಲ್ಕನೇ ರಾಷ್ಟ್ರೀಯ ಹವಾಮಾನ ಮೌಲ್ಯಮಾಪನದ ಮೊದಲ ಸಂಪುಟ ಇದೇ 3ರಂದು ಬಿಡುಗಡೆಯಾಗಿದೆ. ಇನ್ನೂ ಎರಡು ಸಂಪುಟಗಳನ್ನು ಸಾರ್ವಜನಿಕ ಅಭಿಪ್ರಾಯಕ್ಕಾಗಿ ಬಿಡುಗಡೆ ಮಾಡಲಾಗಿದೆ.
ಇದರಲ್ಲಿ ಒಂದು ಭಾಗವು ಹವಾಮಾನ ಬದಲಾವಣೆಯು ಅಮೆರಿಕದಲ್ಲಿ ಜನಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬು
ದನ್ನು ವಿವರಿಸಿದೆ. ಇವುಗಳನ್ನು ಅಮೆರಿಕ ರಾಷ್ಟ್ರೀಯ ವಿಜ್ಞಾನಗಳ ಅಕಾಡೆಮಿ ಪರಿಶೀಲಿಸಲಿದೆ.
ಕಡಿತ ಸಾಧ್ಯ
ಬಲರ್ಿನ್ (ಪಿಟಿಐ): ನಗರದ ನಿವಾಸಿಗಳು ನಗರದ ಗಡಿಯಿಂದ ದೂರದಲ್ಲಿ ಸರಕು ಮತ್ತು ಸೇವೆಗಳನ್ನು ಖರೀದಿಸುವುದರಿಂದ ಹಿಂದೆಂದಿಗಿಂತ ಹಸಿರುಮನೆ ಅನಿಲ ಬಿಡುಗಡೆ ಹೆಚ್ಚಾಗಿದೆ. ಇದನ್ನು ಕಡಿತಗೊಳಿಸಲು ಸಾಧ್ಯ ಎಂದು ಜರ್ಮನಿಯ ಪಾಟ್ಸ್ಡ್ಯಾಮ್ ಇನ್ಸ್ಟಿಟ್ಯೂಟ್ ಹೇಳಿದೆ. ದೆಹಲಿಯೂ ಸೇರಿದಂತೆ ವಿಶ್ವದ ನಾಲ್ಕು ನಗರಗಳ ಇಂಗಾಲದ ಡೈಆಕ್ಸೈಡ್ನ ಇತಿಹಾಸವನ್ನು ಇದೇ ಮೊದಲ ಬಾರಿಗೆ ಅಧ್ಯಯನ ಮಾಡಲಾಗಿದೆ.