ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 30, 2017
ಕಲ್ಲಕಟ್ಟ ಮತ್ತು ಎಡನೀರಿನಲ್ಲಿ `ಕನ್ನಡ ಸ್ವರ'
ಬದಿಯಡ್ಕ: ಸಾಮಾಜಿಕ - ಸಾಂಸ್ಕೃತಿಕ ಸಂಸ್ಥೆಯಾಗಿರುವ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಸಹಕಾರದೊಂದಿಗೆ ಗಡಿ ಪ್ರದೇಶವಾದ ಕಾಸರಗೋಡಿನ ಇಪ್ಪತ್ತು ಕನ್ನಡ ಶಾಲೆಗಳ ಎರಡು ಸಾವಿರ ವಿದ್ಯಾಥರ್ಿಗಳಿಗೆ ನಾಡಗೀತೆ ಹಾಗೂ ಭಾವಗೀತೆಗಳನ್ನು ಕಲಿಸುವ ಕಾಯರ್ಾಗಾರ `ಕನ್ನಡ ಸ್ವರ' ಕಾರ್ಯಕ್ರಮ ಕಲ್ಲಕಟ್ಟ ಮತ್ತು ಎಡನೀರಿನಲ್ಲಿ ಡಿ.1 ಶುಕ್ರವಾರ ನಡೆಯಲಿದೆ.
ಡಿ.1 ರಂದು ಬೆಳಗ್ಗೆ 9.45 ರಿಂದ ಕಲ್ಲಕಟ್ಟ ಎಂ.ಎ.ಯು.ಪಿ.ಎಸ್. ಶಾಲೆಯಲ್ಲಿ ನಡೆಯುವ ಕಾಯರ್ಾಗಾರದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ್ ಪ್ರಸಾದ್ ಕೆ. ಅಧ್ಯಕ್ಷತೆ ವಹಿಸುವರು. ಶಾಲಾ ಪ್ರಬಂಧಕ ಕೇಶವ ಪಿ.ಎನ್. ಉದ್ಘಾಟಿಸುವರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜೋಸೆಫ್ ಲೋಬೋ ಅತಿಥಿಯಾಗಿ ಭಾಗವಹಿಸುವರು.
ಮಧ್ಯಾಹ್ನ 1.30 ರಿಂದ ಎಡನೀರಿನ ಸ್ವಾಮೀಜಿ ಹೆಚ್.ಎಸ್.ಎಸ್.ನಲ್ಲಿ ನಡೆಯುವ ಕಾರ್ಯಕ್ರಮವನ್ನು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಪಾದಂಗಳವರು ಉದ್ಘಾಟಿಸುವರು. ಶಾಲಾ ಮುಖ್ಯೋಪಾಧ್ಯಾಯಿನಿ ಶಾರದಾ ಅಡೆಕೋಡ್ಲು ಅಧ್ಯಕ್ಷತೆ ವಹಿಸುವರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಉಪಸ್ಥಿತರಿರುವರು. ಖ್ಯಾತ ಗಾಯಕ ಕಿಶೋರ್ ಪೆರ್ಲ ತರಬೇತು ನೀಡಲಿದ್ದಾರೆಂದು ರಂಗಚಿನ್ನಾರಿ ನಿದರ್ೇಶಕರಾದ ಕಾಸರಗೋಡು ಚಿನ್ನಾ, ಸತ್ಯನಾರಾಯಣ ಕೆ. ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.