ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ಜಿಲ್ಲಾ ಕಲೋತ್ಸವದ ಯಕ್ಷಗಾನ ಸ್ಪಧರ್ೆಯಲಲಿ ಬದಿಯಡ್ಕ ನವಜೀವನ ಶಾಲೆ ರಾಜ್ಯಮಟ್ಟಕ್ಕೆ
ಬದಿಯಡ್ಕ: ಚೆಮ್ನಾಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ಯಕ್ಷಗಾನ ಸ್ಪಧರ್ೆಯಲ್ಲಿ ಬದಿಯಡ್ಕದ ನವಜೀವನ ಶಾಲಾ ತಂಡ "ಎ"ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಲಭಿಸಿ ರಾಜ್ಯಮಟ್ಟದ ಸ್ಪಧರ್ೆಗೆ ಆಯ್ಕೆಯಾಗಿದೆ.
ಪ್ರಸಿದ್ದ ಯಕ್ಷಗಾನ ನಾಟ್ಯಗುರು ಸಬ್ಬಣಕೋಡಿ ರಾಮ ಭಟ್ ರವರ ನಿದರ್ೇಶನದಲ್ಲಿ ತಯಾರಾದ ವಿದ್ಯಾಥರ್ಿಗಳು ಈ ದಾಖಲೆ ನಿಮರ್ಿಸಿದ್ದಾರೆ. ವಿದ್ಯಾಥರ್ಿಗಳಾದ ಸಂದೇಶ್, ಚಿನ್ಮಯಕೃಷ್ಣ, ಧ್ಯಾನ್ ರೈ, ದತ್ತೇಶ್, ಪೃಥ್ವಿಗಣಪತಿ ಶರ್ಮ, ಶಶಾಂಕಶಂರ್ ಹಾಗೂ ವಿಕಾಸ್ ಬಬ್ರುವಾಹನ ಕಾಳಗ ಕಥಾಭಾಗದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿ ನಿಣರ್ಾಕರ ಗಮನ ಸೆಳೆದರು.
ಜಿಲ್ಲಾ ಮಟ್ಟದ ಕಲೋತ್ಸವ ಯಕ್ಷಗಾನ ಸ್ಪಧರ್ೆಯಲ್ಲಿ ಒಟ್ಟು ಮೂರು ತಂಡಗಳು ಭಾಗವಹಿಸಿದ್ದವು. ಮಂಜೇಶ್ವರ ಬ್ಲಾಕ್ ನಿಂದ ಧರ್ಮತ್ತಡ್ಕದ ಶ್ರೀದುಗರ್ಾಪರಮೇಶ್ವರಿ ಹೈಸ್ಕೂಲು ಮತ್ತು ಕಾಸರಗೊಡು ಬ್ಲಾಕ್ ನ ಕೂಡ್ಲು ಗೋಪಾಲಕೃಷ್ಣ ಹೈಸ್ಕೂಲು ತಮಡಗಳು ಭಾಗವಹಿಸಿ ಬಿ ಗ್ರೇಡ್ ಪಡೆದವು.
ತೀಪರ್ಿನ ಬಗ್ಗೆ ಅಪಸ್ವರ:
ಕಲೋತ್ಸವದ ಯಕ್ಷಗಾನ ಸ್ಪಧರ್ೆಯಲಲಿ ನವಜೀವನ ಶಾಲಾ ತಮಡಕ್ಕೆ ಪ್ರಥಮ ಬಹುಮಾನ ಪ್ರಕಟವಾಗುತ್ತಿರುವಂತೆ ಪ್ರದರ್ಶನ ನೀಡಿದ ಮತ್ತೆರಡು ಶಾಲಾ ತಮಡಗಳು ತೀಪರ್ಿನ ಬಗ್ಗೆ ಅಪಸ್ವರ ಎತ್ತಿದ್ದು, ಈ ಬಗ್ಗೆ ವಿವಿಧ ಜಾಲ ತಾಣಗಳಲ್ಲಿ ವ್ಯಾಪಕ ಭಾರೀ ಟೀಕೆಗಳು, ಚಚರ್ೆಗಳು ಕಂಡುಬಂದಿದೆ.