ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 05, 2017
ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಸಂಪನ್ನ
ಬದಿಯಡ್ಕ: ವಿದ್ಯಾಥರ್ಿಗಳ ಪಠ್ಯ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಗಲಿ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಜನಜನಿತವಾಗಿರುವ ಶಾಲಾ ಕಲೋತ್ಸವಗಳು ಈ ಮಣ್ಣಿನ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸಿದೆ. ಸಾಂಸ್ಕೃತಿಕ, ಸಾಮಾಜಿಕ ಸಹಿತ ಸಮಗ್ರ ರಂಗಗಳಲ್ಲಿ ಕರಾವಳಿಯಲ್ಲೇ ಹೆಸರು ಪಡೆದಿರುವ ನೀಚರ್ಾಲಿನಲ್ಲಿ ಪ್ರಸ್ತುತ ವರ್ಷದ ಉಪಜಿಲ್ಲಾ ಕಲೋತ್ಸವಗಳು ವ್ಯವಸ್ಥಿತವಾಗಿ ನಡೆದಿರುವುದು ಹಿರಿಯೆಯ ದ್ಯೋತಕ ಎಮದು ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಅಭಿಪ್ರಾಯ ವ್ಯಕ್ದತಪಡಿಸಿದರು.
ನೀಚರ್ಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಅ.31 ರಿಂದ ನಡೆಯುತ್ತಿರುವ ಕುಂಬಳೆ ಉಪಜಿಲ್ಲಾ 58ನೇ ಶಾಲಾ ಕಲೋತ್ಸವದ ಅಂಗವಾಗಿ ಶನಿವಾರ ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾಗವಹಿಸಿದ ವಿವಿಧ ಶಾಲೆಗಳ ವಿದ್ಯಾಥರ್ಿಗಳಲ್ಲಿ ಹಲವರು ಪ್ರಥಮ ಸ್ಥಾನ ಪಡೆದಿರಬಹುದು. ಆದರೆ ಮಿಕ್ಕುಳಿದವರು ಕನಿಷ್ಠರೆಂದಲ್ಲ ಎಂದು ತಿಳಿಸಿದ ಅವರು, ಸ್ಪಧರ್ೆ ಬದುಕಿನ ವಿವಿಧ ಹಂತಗಳಿಗೆ ಸತ್ ಪ್ರೇರಣೆ ನೀಡಿ ಇನ್ನಷ್ಟು ಗೆಲುವಿನ ಪಯಣಕ್ಕೆ ಮಾರ್ಗದಶರ್ಿಯಾಗಲಿ ಎಂದು ತಿಳಿಸಿದರು.
ಬದಿಯಡ್ಕ ಗ್ರಾ.ಪಂ. ಸದಸ್ಯ ಡಿ.ಶಂಕರ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯ ಮೊಹಮ್ಮದ್ ಬಿ.ಎ, ಬಾಲಕೃಷ್ಣ ಶೆಟ್ಟಿ ಕಡಾರು, ದೇಲಂಪಾಡಿ ಗ್ರಾ.ಪಂ. ಅಧ್ಯಕ್ಷ ಮುಸ್ತಫಾ ಉಪಸ್ಥಿತರಿದ್ದು ಶುಭಹಾರೈಸಿದರು.
ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೆ.ಕೈಲಾಸಮೂತರ್ಿ ಬಹುಮಾನಗಳನ್ನು ವಿತರಿಸಿದರು. ಮಹಾಜನ ಹೈಸ್ಕೂಲು ಮುಖ್ಯೋಪಾಧ್ಯಾಯ, ಕಲೋತ್ಸವ ಸಂಘಟನಾ ಸಮಿತಿ ಅಧ್ಯಕ್ಷ ವೆಂಕಟರಾಜ ಸಿ.ಎಚ್, ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಕಲೋತ್ಸವ ನಿರ್ವಹಣಾ ಸಮಿತಿ ಅಧ್ಯಕ್ಷ ಶಿವಪ್ರಕಾಶ್ ಎಂ.ಕೆ.ಮಾಸ್ತರ್ ಶುಭಹಾರೈಸಿದರು. ಕಲೋತ್ಸವದ ಲಾಂಛನ ನಿಮರ್ಿಸಿದ ವೇಣುಗೋಪಾಲ ಅರೋಳಿಯವರನ್ನು ಸಭೆಯಲ್ಲಿ ಗೌರವಿಸಲಾಯಿತು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಸ್ವಾಗತಿಸಿ, ಶಿವಪ್ರಕಾಶ್ ಎಂ.ಕೆ ವಂದಿಸಿದರು.
ಕಲೋತ್ಸವದಲ್ಲಿ ದಾಖಲೆ ನಿಮರ್ಿಸಿದ ಶಾಲಾ ವಿವರ:
ಹೈಯರ್ ಸೆಕೆಂಡರಿ ವಿಭಾಗದಲ್ಲಿ ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಪ್ರಥಮ, ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಕುಂಬಳೆ ದ್ವಿತೀಯ, ಹೈಸ್ಕೂಲು ವಿಭಾಗದ ಸಂಸ್ಕೃತೋತ್ಸವದಲ್ಲಿ ಮಹಾಜನ ವಿದ್ಯಾಸಂಸ್ಥೆ ಪ್ರಥಮ, ಸತ್ಯನಾರಾಯಣ ಹೈಸ್ಕೂಲು ಪೆರ್ಲ ದ್ವಿತೀಯ, ಹಿರಿಯ ಪ್ರಾಥಮಿಕ ವಿಭಾಗದ ಸಂಸ್ಕೃತತೋತ್ಸವದಲ್ಲಿ ನೀಚರ್ಾಲು ಮಹಾಜನ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ, ಹಿರಿಯ ಪ್ರಾಥಮಿಕ ಶಾಲೆ ಏತಡ್ಕ ದ್ವಿತೀಯ, ಕಿರಿಯ ಪ್ರಾಥಮಿಕ ಸಾಮಾನ್ಯ ವಿಭಾಗದಲ್ಲಿ ಸರಕಾರಿ ಪೊಕೇಶನಲ್ ಕಿರಿಯ ಪ್ರಾಥಮಿಕ ಶಾಲೆ ಕಾರಡ್ದಕ ಪ್ರಥಮ, ವಿದ್ಯಾಗಿರಿ ಕಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಪಡೆದವು. ಹಿರಿಯ ಪ್ರಾಥಮಿಕ ವಿಭಾಗದ ಸಾಮಾನ್ಯ ವಿಭಾಗದಲ್ಲಿ ಸರಕಾರಿ ಪೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ಕಾರಡ್ಕ ಪ್ರಥಮ, ಸಂತ ಬಾರ್ತಲೋಮಿಯ ಶಾಲೆ ಬೇಳ ದ್ವಿತೀಯ ಸ್ಥಾನ ಪಡೆಯಿತು. ಹೈಯರ್ ಸೆಕೆಂಡರಿ ಅರೆಬಿಕ್ ಉತ್ಸವದಲ್ಲಿ ಸರಕಾರಿ ಪೊಕೇಶನಲ್ ಹಯರ್ ಸೆಕೆಂಡರಿ ಶಾಲೆ ಮೊಗ್ರಾಲ್ ಪ್ರಥಮ, ಸರಕಾರಿ ಹೈಯರ್ ಸೆಕೆಂಡರಿ ಅಡೂರು ದ್ವಿತೀಯ ಸ್ಥಾನ ಪಡೆದವು.
ಒಟ್ಟು ಗಳಿಸಿದ ಅಂಕಗಳಲ್ಲಿ ಅತಿಥೇಯ ನೀಚರ್ಾಲು ಮಹಾಜನ ವಿದ್ಯಾಸಂಸ್ಥೆ 406 ಅಂಕಗಳಿಸಿ ಪ್ರಥಮ ಸ್ಥಾನ ಪಡೆದರೆ, ಸರಕಾರಿ ಪೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ಕಾರಡ್ಕ 380 ಅಂಕ ಪಡೆದು ದ್ವಿತೀಯ, 378 ಅಂಕ ಪಡೆದು ಸರಕಾರಿ ಶಾಲೆ ಅಡೂರು ಮೂರನೇ ಸ್ಥಾನ ಪಡೆದವು