ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 06, 2017
ಸಾಮೂಹಿಕ ಓಟ ಮುಂದೂಡಿಕೆ
ಮುಳ್ಳೇರಿಯ: ಹೊಂಡಗಳಿಂದ ತುಂಬಿಕೊಂಡು ಶೋಚನೀಯಾವಸ್ಥೆಯಲ್ಲಿರುವ ಮುಳ್ಳೇರಿಯ - ಕಿನ್ನಿಂಗಾರು ರಸ್ತೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿ ಬೇಡಿಕೆ ಮುಂದಿರಿಸಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮುಳ್ಳೇರಿಯ ಘಟಕದ ನೇತೃತ್ವದಲ್ಲಿ ನ.8 ರಂದು ನಡೆಸಲು ನಿರ್ಧರಿಸಿದ್ದ ಸಾಮೂಹಿಕ ಓಟವನ್ನು ಮುಂದೂಡಿದೆ.
ಮುಳ್ಳೇರಿಯ ಮಚರ್ೆಂಟ್ ಅಸೋಸಿಯೇಶನ್ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ರಸ್ತೆ ಶೋಚನೀಯಾವಸ್ಥೆ ಬಗ್ಗೆ ವಿವರಿಸಿದ್ದಾರೆ. ಈ ವೇಳೆ ರಸ್ತೆ ಯನ್ನು ಒಂದು ತಿಂಗಳೊಳಗೆ ಮರು ಡಾಮರೀಕರಣ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಭರವಸೆಯ ಹಿನ್ನೆಲೆಯಲ್ಲಿ ಸಾಮೂಹಿಕ ಓಟವನ್ನು ಮುಂದೂಡಿರುವುದಾಗಿ ಮಚರ್ೆಂಟ್ಸ್ ಅಸೋಸಿಯೇಶನ್ ತಿಳಿಸಿದೆ.
ಮುಳ್ಳೇರಿಯಾದಿಂದ ಬೆಳ್ಳೂರು ವರೆಗಿನ ರಸ್ತೆಗೆ ಮರುಡಾಮರೀಕರಣ ನಡೆಸಲು 360 ಲಕ್ಷ ರೂ. ಮಂಜೂರು ಮಾಡಿರುವುದಾಗಿಯೂ, ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಚಚರ್ೆಯಲ್ಲಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮುಳ್ಳೇರಿಯ ಘಟಕ ಅಧ್ಯಕ್ಷ ಕೆ.ಬಾಲಕೃಷ್ಣ ರೈ, ಕಾರ್ಯದಶರ್ಿ ಎನ್.ಗಣೇಶ್ ವತ್ಸ, ಎಂ.ಎಸ್.ಹರಿಪ್ರಸಾದ್, ಸುರೇಶ್ ಕುಮಾರ್, ದಾಮೋದರನ್, ಸುಂದರನ್ ಮೊದಲಾದವರಿದ್ದರು.