ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2017
ಅಪೌಷ್ಠಿಕತೆ ಗಂಭೀರ
ಲಂಡನ್ (ಪಿಟಿಐ): ಭಾರತದಲ್ಲಿ ಅಪೌಷ್ಟಿಕತೆಯ ಸಮಸ್ಯೆ ಗಂಭೀರವಾಗಿದೆ ಎಂದು ಸೋಮವಾರ ಬಿಡುಗಡೆಯಾಗಿರುವ ಜಾಗತಿಕ ವರದಿಯು ಹೇಳಿದೆ. ದೇಶದ ಅರ್ಧದಷ್ಟು ಮಹಿಳೆಯರು ಸಂತಾನೋತ್ಪತ್ತಿಯ ವರ್ಷಗಳಲ್ಲಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
`ದಿ ಗ್ಲೋಬಲ್ ನ್ಯೂಟ್ರಿಷನ್ ರಿಪೋಟರ್್ 2017'ರಲ್ಲಿ ಅಧ್ಯಯನಕ್ಕೆ 140 ದೇಶಗಳನ್ನು ಪರಿಗಣಿಸಲಾಗಿದೆ. ಬಾಲ್ಯದಲ್ಲಿ ಬೆಳವಣಿಗೆ ಕುಂಠಿತ, ಸಂತಾನೋತ್ಪತ್ತಿ ವರ್ಷಗಳಲ್ಲಿ ರಕ್ತಹೀನತೆ ಹಾಗೂ ವಯಸ್ಕ ಮಹಿಳೆಯರಲ್ಲಿ ಅತಿಯಾದ ತೂಕ ಎಂಬ ಮೂರು ಪ್ರಮುಖ ಅಂಶಗಳನ್ನು ಆಧರಿಸಿ ಅಧ್ಯಯನ ಮಾಡಲಾಗಿದೆ. ಅಪೌಷ್ಟಿಕತೆ ಒಂದು ಹೊರೆ ಎಂದು ಪರಿಗಣಿಸಲಾಗಿದೆ.
ವರದಿಯಲ್ಲಿನ ಅಂಶಗಳು: ಐದು ವರ್ಷದ ಒಳಗಿನ ಶೇ 38ರಷ್ಟು ಮಕ್ಕಳಲ್ಲಿ ಸರಿಯಾದ ಬೆಳವಣಿಗೆ ಕಾಣಿಸುತ್ತಿಲ್ಲ, ಪೌಷ್ಟಿಕಾಂಶದ ಕೊರತೆಯಿಂದ ವಯಸ್ಸಿಗೆ ತಕ್ಕಷ್ಟು ಎತ್ತರ ಬೆಳೆಯದಿರುವುದು, ಮೆದುಳಿನ ಸಾಮಥ್ರ್ಯದ ಮೇಲೆ ಅಡ್ಡ ಪರಿಣಾಮ ಬೀರುವುದು ಕಂಡುಬಂದಿದೆ. ಶೇ 21ರಷ್ಟು ಮಕ್ಕಳು ಎತ್ತರಕ್ಕೆ ತಕ್ಕಂತೆ ತೂಕ ಹೊಂದಿಲ್ಲ, ಅಂದರೆ ತೀರಾ ತೆಳ್ಳಗಿದ್ದಾರೆ.
ಶೇ 51ರಷ್ಟು ಮಹಿಳೆಯರು ಸಂತಾನೋತ್ಪತ್ತಿಯ ವಯಸ್ಸಿನಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವುದರಿಂದ ತಾಯಿ ಮತ್ತು ಮಗುವಿನ ಮೇಲೆ ಇದು ದೀಘರ್ಾವಧಿ ಪರಿಣಾಮ ಬೀರಲಿದೆ. ಶೇ 22ರಷ್ಟು ವಯಸ್ಕ ಮಹಿಳೆಯರು ಅತಿಯಾದ ತೂಕ ಹೊಂದಿದ್ದಾರೆ.
ಐದು ವರ್ಷದ ಒಳಗಿನ ಮಕ್ಕಳಲ್ಲಿ ಬೆಳವಣಿಗೆ ಕುಂಠಿತ ಆಗುವ ಅಂಶದಲ್ಲಿ ಭಾರತವು ಕೊಂಚ ಪ್ರಗತಿ ತೋರಿಸಿದೆ. ಆದರೆ ಮಹಿಳೆಯರ ರಕ್ತಹೀನತೆ, ಅತಿ ತೂಕ ಹಾಗೂ ಮಧುಮೇಹದ ವಿಚಾರದಲ್ಲಿ ಕಳಪೆ ಸಾಧನೆ ತೋರಿದೆ.
`ಭಾರತದ ರಾಷ್ಟ್ರೀಯ ಪೌಷ್ಟಿಕತೆ ಕಾರ್ಯಸೂಚಿಯಲ್ಲಿ ಬೊಜ್ಜು ಹಾಗೂ ಅಪೌಷ್ಟಿಕತೆ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಬೇಕಿದೆ' ಎಂದು ಅಧ್ಯಯನ ತಂಡದ ತಜ್ಞೆ, ನವದೆಹಲಿಯಲ್ಲಿರುವ ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ದಕ್ಷಿಣ ಏಷ್ಯಾ ಕಚೇರಿಯ ಸಂಶೋಧಕಿ ಪೂಣರ್ಿಮಾ ಮೆನನ್ ಹೇಳಿದ್ದಾರೆ.