HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಥತ್...ವೈದ್ಯಕೀಯ ಕಾಲೇಜು ಯಾವಾಗ?! ಕಾಸರಗೋಡು ವೈದ್ಯಕೀಯ ಕಾಲೇಜಿಗಾಗಿ ಕಾಯುವಿಕೆ ಮುಷ್ಕರ-ದೊಂದಿ ಮೆರವಣಿಗೆ ಬದಿಯಡ್ಕ: ಬಹು ನಿರೀಕ್ಷಿತ ಕಾಸರಗೋಡು ವೈದ್ಯಕೀಯ ಕಾಲೇಜಿನ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇದೀಗ ಸುಮಾರು 26ಲಕ್ಷ ರೂಪಾಯಿಯಲ್ಲಿ ನಿಮರ್ಿಸುವ ಆಕಾಡೆಮಿಕ್ ಬ್ಲಾಕ್ನ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದರೂ ವೈದ್ಯಕೀಯ ಕಾಲೇಜು ನಿಮರ್ಾಣಕ್ಕೆ ಕೇರಳ ಸರಕಾರ ಈ ವರ್ಷದ ಮುಂಗಡಪತ್ರದಲ್ಲಿ ಹಣವನ್ನು ಮೀಸಲಿರಸದೆ ಇರುವುದನ್ನು ಪ್ರತಿಭಟಿಸಿ ಜನಕೀಯ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ಸಂಜೆ ಉಕ್ಕಿನಡ್ಕ ವೈದ್ಯಕೀಯ ಕಾಲೇಜು ನಿಮರ್ಾಣವಾಗುವ ಸ್ಥಳದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಮುಷ್ಕರವನ್ನು ಜನಕೀಯ ಸಮಿತಿ ಅಧ್ಯಕ್ಷ ಮಾಹೀನ್ ಕೇಳೋಟ್ ಉದ್ಘಾಟೀಸಿದರು. ಅವರು ಮಾತನಾಡಿ 2015ರಲ್ಲಿ ಟೆಂಡರ್ ಕ್ರಮ ನಡೆದರೂ ಕೂಡ ವೈದ್ಯಕೀಯ ಕಾಲೇಜು ನಿಮರ್ಾಣಕ್ಕೆ ಸರಕಾರ ಹಿಂದೇಟು ಹಾಕುವುದರ ಹಿಂದೆ ಮಂಗಳೂರು ಲಾಬಿಗಳು ಕೈಜೋಡಿಸಿರುವುದರಿಂದ ಎಂದು ಅವರು ಆರೋಪಿಸಿದರು. ಸರಕಾರ ವೈದ್ಯಕೀಯ ಕಾಲೇಜು ನಿಮರ್ಾಣಕ್ಕೆ ಕ್ರಮ ತೆಗೆದು ಕೊಳ್ಳದಿದ್ದರೆ ಜನವರಿ 30ರಿಂದ ಅನಿಶ್ಚಿತ ಕಾಲ ಪ್ರತಿಭಟನೆಗೆ ಮುಂದಾಗುವುದಾಗಿ ಅವರು ಎಚ್ಚರಿಸಿದರು. ಕಾಸರಗೋಡು ವೈದ್ಯಕೀಯ ಕಾಲೇಜು ಈ ಪ್ರದೇಶದ ಜನರ ಅವಶ್ಯಕತೆಯಾಗಿದೆ. ಆದರೆ ಅದೀಗ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿದೆ. ಅಧಿಕಾರಿಗಳು ಮತ್ತು ಸರಕಾರ ಇಲ್ಲಿ ಕೂಡಲೇ ವೈದ್ಯಕೀಯ ಕಾಲೇಜು ನಿಮರ್ಾಣಕ್ಕೆ ಮುತುವಜರ್ಿ ವಹಿಸಬೇಕು. ಅದನ್ನು ಜೀವನದಲ್ಲಿ ನಮಗೆ ನೋಡುವ ಭಾಗ್ಯ ಉಂಟಾಗಲಿ-ಪ್ರೊ.ಶ್ರೀನಾಥ್ ಕಾಸರಗೋಡು. ಮೆಡಿಕಲ್ ಕಾಲೇಜು ನಿಮರ್ಾಣಕ್ಕೆ ಸರಕಾರ ಕೂಡಲೇ ಕ್ರಮ ತೆಗೆದು ಕೊಳ್ಳಬೇಕು.2013ರಲ್ಲಿ ಶಿಲಾನ್ಯಾಸಗೊಂಡರೂ ಸರಕಾರ ಕ್ಷುಲ್ಲಕ ಕಾರಣ ನೀಡಿ ಕಾಮಗಾರಿಗೆ ವಿಳಂಬ ನೀತಿ ಅನುಸರಿಸುತ್ತಿದೆ ಈ ಪ್ರದೇಶದಲ್ಲಿ ಹಲವಾರು ಮಂದಿ ಎಂಡೋಸಲ್ಫಾನ್ ಮತ್ತು ಇನ್ನಿತರ ರೋಗಗಳಿಂದ ಬಳಲುತ್ತಿದ್ದು ಈಗ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಮತ್ತು ಪೆರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಆದರಿಂದ ಸರಕಾರ ಇಲ್ಲಿ ಕೂಡಲೇ ಮೆಡಿಕಲ್ ಕಾಲೇಜು ನಿಮರ್ಾಣಕ್ಕೆ ಮುಂದಾಗಬೇಕು ಯಾವುದೇ ಕಾರಣಕ್ಕೂ ಬೇರೆ ಕಡೆಗೆ ಸ್ಥಳಾಂತರಿಸಲು ಬಿಡುವುದಿಲ್ಲ- ಸೋಮಶೇಖರ ಜೆ.ಎಸ್ ಏಣ್ಮಕಜೆ ಗ್ರಾ.ಪಂ ಮಾಜಿ ಅಧ್ಯಕ್ಷರು. ಕೇರಳ ವ್ಯಾಪಾರಿ ವ್ಯವಸಾಯಿ ಎಕೋಪನ ಸಮಿತಿಯು ಕಾಯುವಿಕೆ ಮುಷ್ಕರಕ್ಕೆ ಪೂರ್ಣ ಬೆಂಬಲ ಸೂಚಿಸಿದೆ ಮಾತ್ರವಲ್ಲದೆ ಸಂಘಟನೆಯು ಮುಂದಿನ ದಿನಗಳಲ್ಲಿ ಅಂಗಡಿ ಬಂದ್ ಮಾಡಿ ಪ್ರತಿ`ಟನೆ ನಡೆಸಲು ಕೂಡ ಸಿದ್ದ- ಕುಂಜಾರ್ ಮಹಮ್ಮದ್. ವ್ಯಾಪಾರಿ ನೇತಾರರು ಬದಿಯಡ್ಕ. ವಿದ್ಯಾ ಟೀಚರ್ ಮತ್ತು ಇವರ ಮಗಳು ವೈದ್ಯಕೀಯ ಕಾಲೇಜು ಕಾಯುವಿಕೆ ಬಗ್ಗೆ ರಚಿಸಿದ ಪದ್ಯವನ್ನು ಪ್ರತಿಭಟನೆಯ ಸಂದರ್ಭದಲ್ಲಿ ಹಾಡಲಾಯಿತು. ವಿವಿಧ ಪಕ್ಷದ ನೇತಾರುಗಳಾದ ಕರುಣಾಕರ ಬದಿಯಡ್ಕ, ಬಿ.ಎಸ್ ಗಾಂಭೀರ್, ತಿರುಪತಿ ಕುಮಾರ್ ಭಟ್, ರವೀಂದ್ರನಾಥ್ ನಾಯಕ್, ಶ್ಯಾಮ್ ಪ್ರಸಾದ್ ಕಾಸರಗೋಡು,ಜೀವನ್ ಥೋಮಸ್,ಹಮೀದ್ ಪಳ್ಳತ್ತಡ್ಕ, ಶಂಕರ ಪೆರ್ಲ, ಸಿದ್ಧೀಕ್ ಖಂಡಿಗೆ,ಶೇರಿಫ್ ಪೆರ್ಲ,ಹರಿಪ್ರಸಾದ್ ರೈ, ಆಮು ಅಡ್ಕಸ್ಥಳ,ಅಶ್ರಫ್ ಮೂನಿಯೂರು, ಮೊದಲಾದವರು ಉಪಸ್ಥಿತರಿದ್ದರು.ಪ್ರೆಟೆನಿಟಿ ಯುವಜನ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯ ಸ್ಥಳಕ್ಕೆ ಮೆರವಣಿಗೆಯಲ್ಲಿ ಆಗಮಿಇಸ ಮುಷ್ಕರಕ್ಕೆ ಬೆಂಬಲ ಸೂಚಿಸಿದರು. ಪ್ರತಿಭಟನೆ ನೂರಾರು ಮಂದಿ ಭಾಗವಹಿಸಿದರು. ಶ್ಯಾಮಪ್ರಸಾದ್ ಕಾಸರಗೋಡು ಸ್ವಾಗತಿಸಿ, ಕುಂಜಾರು ಮಹಮ್ಮದ್ ವಂದಿಸಿದರು. ದೊಂದಿ ಪ್ರತಿಭಟನೆ: ಪ್ರತಿಭಟನೆಯ ಉದ್ಘಾಟನೆಯ ಬಳಿಕ ಸಾಮೂಹಿಕ ದೊಂದಿ ಬೆಳಗಿಸಿ ಪ್ರತಿಭಟನೆಯ ಕೂಗು ವ್ಯಕ್ತಪಡಿಸಲಾಯಿತು. ಈ ಸಂದರ್ಭ ಮಾತನಾಡಿದ ಮಾಹಿನ್ ಕೇಳೊಟ್ ದೊಂದಿ ಮೂಲತಃ ಅಂತಃಕರಣದ ಅಸ್ತವ್ಯಸ್ತತೆಯ ಕೂಗಿನ ಸಂಕೇತವಾಗಿದ್ದು, ವ್ಯಗ್ರಗೊಂಡರೆ ಅಪಾಯವಿದೆ. ಆದ್ದರಿಂದ ಸಂಬಂಧಪಟ್ಟವರು ಶೀಘ್ರ ಕ್ರಮ ಕೈಗೊಳ್ಳುವುದೊಳಿತು ಎಂದು ಎಚ್ಚರಿಸಿದರು. ಕೊನೆಗೆ ಆಗಮಿಸಿದ ಶಾಸಕರು: ಹೋರಾಟದ ಕೊನೆಯ ಕ್ಷಣದಲ್ಲಿ ಆಗಮಿಸಿದ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಮಾತನಾಡಿ ಕಾಸರಗೋಡು ಪ್ಯಾಕೇಜ್ನ ಮೂಲಕ 25 ಕೋಟಿಯಲ್ಲಿ ಪ್ರಾಥಮಿಕ ಹಂತದ ಕಟ್ಟಡ ನಿಮರ್ಾಣಹಂತದಲ್ಲಿದೆ. ನಬಾಡರ್್ನಿಂದ ಮಂಜೂರಾದ 68 ಕೋಟಿ ರೂಪಾಯಿಯನ್ನು ವಿವಿಧ ಕಾರಣಗಳನ್ನು ನೀಡಿ ನಾಲ್ಕು ವರ್ಷಗಳಷ್ಟು ಕಾಲ ಮುಂದೂಡಿರುದು ದುರದೃಷ್ಟಕರ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries