ಎಸ್ಬಿಐ ಗೃಹ ಮತ್ತು ವಾಹನ ಸಾಲ ಅಗ್ಗ
ದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ಎಸ್ಬಿಐ ಗೃಹ ಮತ್ತು ವಾಹನ ಸಾಲ ಬಡ್ಡಿ ದರವನ್ನು ಕಡಿಮೆ ಮಾಡಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲೇ ಅತಿ ಕಡಿಮೆ ಬಡ್ಡಿದರಗಳನ್ನು ಒದಗಿಸಲು ಮುಂದಾಗಿದೆ. ಇವು ಬಡ್ಡಿದರ ಕಡಿತ ಮಾಡಿರುವ ಪ್ರಮುಖ ಬ್ಯಾಂಕುಗಳು ಗೃಹಸಾಲ ಬಡ್ಡಿದರ ಗೃಹಸಾಲ ಬಡ್ಡಿದರ ಎಸ್ಬಿಐ ಗೃಹ ಸಾಲವನ್ನು ಶೇ. 0.05ರಷ್ಟು ಕಡಿಮೆ ಮಾಡಿದೆ. ಶೇ. 8.30ರಷ್ಟು ಬಡ್ಡಿ ದರವು ಗೃಹ ಸಾಲಗಳಲ್ಲಿಯೇ ಅತಿ ಕಡಿಮೆ ಮಟ್ಟದ್ದಾಗಿದೆ. 30 ಲಕ್ಷ ರೂ.ವರೆಗಿನ ಗೃಹ ಸಾಲಕ್ಕೆ ಶೇ. 8.30ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ. ಇದು ಉದ್ಯಮದಲ್ಲಿನ ಕಡಿಮೆ ಬಡ್ಡಿ ದರವಾಗಿದೆ. (ಗೃಹ ಸಾಲ) ವಾಹನ ಸಾಲ ಬಡ್ಡಿದರ ವಾಹನ ಸಾಲ ಬಡ್ಡಿದರ ಕಾರುಗಳ ಮೇಲಿನ ಬಡ್ಡಿದರವನ್ನು ಕೂಡ ಇದೇ ಮಟ್ಟದಲ್ಲಿ ತಗ್ಗಿಸಿದ್ದು, ಶೇ. 8.70ರಷ್ಟು ನಿಗದಿ ಪಡಿಸಿದೆ. ಎರಡು ದಿನಗಳ ಹಿಂದೆ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರಗಳನ್ನು (ಎಂಸಿಎಲ್ಆರ್) ತಗ್ಗಿಸಿದ ಬೆನ್ನಲ್ಲೇ ಈ ನಿಧರ್ಾರ ತೆಗೆದುಕೊಂಡಿದೆ. ಪ್ರಧಾನಮಂತ್ರಿ ಅವಾಸ ಯೋಜನೆಗೆ ಅಜರ್ಿ ಸಲ್ಲಿಸುವುದು ಹೇಗೆ? ಜಾರಿ ಯಾವಾಗ? ಜಾರಿ ಯಾವಾಗ? ನವೆಂಬರ್ 1ರಿಂದ ಹೊಸ ಬಡ್ಡಿದರಗಳು ಜಾರಿ ಬರಲಿವೆ. ಸಾಲದ ಪ್ರಮಾಣ ಮತ್ತು ಗ್ರಾಹಕರ ಕ್ರೆಡಿಟ್ ಸ್ಕೋರ್ (ಸಾಲ ಮರುಪಾವತಿ ಸಾಮಥ್ರ್ಯ) ಆಧರಿಸಿ ಶೇ. 8.75 ರಿಂದ ಶೇ. 9.25 ರ ವರೆಗೆ ಬಡ್ಡಿ ದರ ನಿಗದಿ ಪಡಿಸಲಾಗುತ್ತದೆ. ಬಡ್ಡಿ ಮತ್ತು ಸಬ್ಸಿಡಿ ಬಡ್ಡಿ ಮತ್ತು ಸಬ್ಸಿಡಿ ಸಂಬಳದಾರ ಖಾತೆದಾರರು ಪಡೆಯುವ ರೂ. 30 ಲಕ್ಷದವರೆಗಿನ ಗೃಹಸಾಲಕ್ಕೆ ಶೇ. 8.30ರಷ್ಟು ಬಡ್ಡಿದರ ವಿಧಿಸಲಾಗುತ್ತದೆ. ಅಲ್ಲದೆ ಅರ್ಹ ಗ್ರಾಹಕರಿಗೆ ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿ ರೂ. 2.67 ಲಕ್ಷದವರೆಗೆ ಬಡ್ಡಿ ಸಬ್ಸಿಡಿ ಸಿಗಲಿದೆ ಎಂದು ಎಸ್ಬಿಐ ತಿಳಿಸಿದೆ. ಇತರ ಬ್ಯಾಂಕುಗಳ ಮೇಲೂ ಪರಿಣಾಮ ಇತರ ಬ್ಯಾಂಕುಗಳ ಮೇಲೂ ಪರಿಣಾಮ ಪ್ರಸ್ತುತ ಬ್ಯಾಂಕಿಂಗ್ ವಲಯದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ರಿಟೇಲ್ ಸಾಲಸೌಲಭ್ಯಗಳಿಗೆ ಸಂಬಂಧಿಸಿದಂತೆ ಅತಿ ಕಡಿಮೆ ಮಟ್ಟದ ಬಡ್ಡಿದರ ನೀಡುತ್ತಿದೆ. ಇದು ಚಿಲ್ಲರೆ ಸಾಲ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಎಸ್ಬಿಐ ರಿಟೇಲ್ ಬ್ಯಾಂಕಿಂಗ್ನ ಎಂಡಿ ಪಿ. ಕೆ. ಗುಪ್ತ ತಿಳಿಸಿದ್ದಾರೆ. ಎಸ್ಬಿಐ ತನ್ನ ರಿಟೇಲ್ ಸಾಲಗಳ ಬಡ್ಡಿ ದರಗಳನ್ನು ತಗ್ಗಿಸಿರುವುದು ಇತರ ಬ್ಯಾಂಕುಗಳ ಮೇಲೂ ಪರಿಣಾಮ ಬೀರಲಿದ್ದು, ಬಡ್ಡಿದರ ಕಡಿಮೆ ಮಾಡಲಿವೆ ಎಂದು ನಿರೀಕ್ಷಿಸಲಾಗಿದೆ