ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2017
ಭರವಸೆಯ ನಲ್ನುಡಿಯೊಂದಿಗೆ ಗೆಲುವಾದ ಕ್ರಿಯಾ ಸಮಿತಿ
ರೈಲು ನಿಲ್ದಾಣ ಅಭಿವೃದ್ದಿಗೆ ನರೇಶ್ ನಲ್ವಾನಿ ಮಾಡುವರು ಪ್ರಯತ್ನ
ಉಪ್ಪಳ: ಉಪ್ಪಳ ಸಹಿತ ಜಿಲ್ಲೆಯ ಎಲ್ಲಾ ರೈಲು ನಿಲ್ದಾಣಗಳ ಪ್ರಾಥಮಿಕ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಅತಿ ಹಿಂದುಳಿದು ನಿರ್ಲಕ್ಷ್ಯಕ್ಕೊಳಗಾಗಿರುವ ಅತ್ಯಂತ ಹಳೆಯ ರೈಲು ನಿಲ್ದಾಣಗಳಲ್ಲೊಂದಾದ ಉಪ್ಪಳ ರೈಲು ನಿಲ್ದಾಣದ ನೂತನ ಕಟ್ಟಡ ನಿಮರ್ಾಣ ಸಹಿತ ವಿವಿಧ ಅಭಿವೃದ್ದಿ ಕ್ರಮಗಳಿಗೆ ಹಿರಿಯ ಅಧಿಕಾರಿಗಳು ಮತ್ತು ರೈಲ್ವೇ ಬೋಡರ್್ ನೊಂದಿಗೆ ವಿಸ್ಕೃತವಾಗಿ ಚಚರ್ಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಪಾಲಕ್ಕಾಡ್ ರೈಲ್ವೇ ವಿಭಾಗದ ಡಿಆರ್ಎಂ(ಡೆಪ್ಯುಟಿ ರೈಲ್ವೇ ಮ್ಯಾನೇಜರ್) ನರೇಶ್ ಲಾಲ್ವಾನಿ ಭರವಸೆ ನೀಡಿದರು.
ಉಪ್ಪಳ ರೈಲು ನಿಲ್ದಾಣ ಉಳಿಸಿ ಕ್ರಿಯಾ ಸಮಿತಿ ಮಂಗಳವಾರ ಸಂಜೆ ಉಪ್ಪಳ ರೈಲು ನಿಲ್ದಾಣ ಪರಿಸರದಲ್ಲಿ ಆಯೋಜಿಸಿದ್ದ ಅಧಿಕಾರಿಗಳೊಂದಿಗಿನ ವಿಶೇಷ ಮುಖಾಮುಖಿ- ರೈಲ್ವೇ ಪ್ರಯಾಣಿಕರ ಕಾಲ್ನಡಿಗೆ ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಿದ್ದ ಸಭೆಯನ್ನು ಸಂಸದ ಪಿ.ಕರುಣಾಕರನ್ ಉದ್ಘಾಟಿಸಿ ಮಾತನಾಡಿ ಜಿಲ್ಲೆಯ ವಿವಿಧ ರೈಲು ನಿಲ್ದಾಣಗಳ ಸ್ಥಿತಿಗತಿಗಳ ಬಗ್ಗೆ ಅಧಿಕೃತರೊಂದಿಗೆ ಮಂಗಳವಾರ ದಿನಪೂತರ್ಿ ವಿವಿಧ ನಿಲ್ದಾಣಗಳಿಗೆ ಸಂದರ್ಶನ ನಡೆಸಿ ಸಮಸ್ಯೆಗಳನ್ನು ತಿಳಿಸಲಾಗಿದೆ. ದೆಹಲಿಯ ಕೇಂದ್ರ ರೈಲ್ವೇ ಅಧಿಕಾರಿಗಳೊಂದಿಗೆ ಮುಂದಿನ ನಡೆಯ ಬಗ್ಗೆ ಚಚರ್ಿಸಲಾಗುವುದು ಎಂದು ತಿಳಿಸಿದರು. ಉಪ್ಪಳ ರೈಲು ನಿಲ್ದಾಣದ ಅಭಿವೃದ್ದಿಗೆ ಶಾಸಕರು ಮತ್ತು ಸ್ಥಳೀಯಾಡಳಿತಗಳ ಸಹಯೋಗದೊಂದಿಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲೂ ಪ್ರಯತ್ನಿಸಲಾಗುವುದೆಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತು ಅಧ್ಯಕ್ಷ ಎಜಿಸಿ ಬಶೀರ್, ಮಂಗಲ್ಪಾಡಿ ಗ್ರಾ.ಪಂ. ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಹರೀಶ್ ಕುಮಾರ್ ಶೆಟ್ಟಿ, ರಮಣನ್ ಮಾಸ್ತರ್, ಸತ್ಯನ್ ಸಿ. ಉಪ್ಪಳ, ಅಬ್ದುಲ್ ಹಮೀದ್, ಸುಜಾತಾ ಶೆಟ್ಟಿ, ವಲ್ಸರಾಜ್ ಐಲ್ ಮೊದಲಾದವರು ಉಪಸ್ಥಿತರಿದ್ದರು. ಕ್ರಿಯಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕ್ರಿಯಾ ಸಮಿತಿ ಕಾರ್ಯದಶರ್ಿ ಅಝೀಂ ಮಣಿಮುಂಡ ವಂದಿಸಿದರು. ಅಲಿ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ನೂತನವಾಗಿ ನಿಮರ್ಿಸಲಾದ ರೈಲು ಪ್ರಯಾಣಿಕರ ಕಾಲ್ನಡಿಗೆಯ ಸೇತುವೆಯನ್ನು ಸಂಸದ ಪಿ.ಕರುಣಾಕರನ್ ಗಣ್ಯರ ಸಮ್ಮುಖ ಉದ್ಘಾಟಿಸಿದರು. ವಿವಿಧ ಬೇಡಿಕೆಗಳನ್ನು ಮುಂದಿರಿಸಿ ನರೇಶ್ ಲಾಲ್ವಾನಿಯವರಿಗೆ ಮನವಿಯನ್ನು ಈ ಸಂದರ್ಭ ಸಲ್ಲಿಸಲಾಯಿತು.