ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 28, 2017
ಕ್ಯಾಂಪ್ಕೋದಿಂದ ಸಹಾಯ ಧನ ಹಸ್ತಾಂತರ
ಬದಿಯಡ್ಕ: ಕೃಷಿಕರ ಸಮಗ್ರ ಕ್ಷೇಮ ಚಟುವಟಿಕೆಗಳನ್ನು ದೃಷ್ಟಿಯಲ್ಲಿರಿಸಿ ಕಾಯರ್ಾಚರಿಸುತ್ತಿರುವ ಕ್ಯಾಂಪ್ಕೋ ಅಂತರಾಷ್ಟ್ರೀಯ ಗುಣಮಟ್ಟದ ಕೃಷಿ ಉತ್ಪನ್ನಗಳ ಮಾರುಕಟ್ಟೆ ಮತ್ತು ದರನಿಗದಿಪಡಿಸುವಂತೆ ಕೃಷಿಕರ ಜೀವನ ಮಟ್ಟದ ಸುಧಾರಣೆಗೂ ಪರಿಶ್ರಮ ವಹಿಸುತ್ತಿದೆ ಎಂದು ಕ್ಯಾಂಪ್ಕೋದ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಕೆ. ಅಭಿಪ್ರಾಯ ವ್ಯಕ್ತೊಡಿಸಿದರು.
ಕ್ಯಾಂಪ್ಕೋದ ನೀಚರ್ಾಲು ಶಾಖೆಯ ವತಿಯಿಂದ ಶಾಖೆಯ ಸದಸ್ಯ ಎಂ.ಗಣಪತಿ ಭಟ್ ರವರ ಚಿಕಿತ್ಸೆಗೆ(ಕೋರ್ನರಿ ಆರ್ಟರಿ ಬೈಪಾಸ್ ಸರ್ಜರಿ)50 ಸಾವಿರ ರೂ.ಗಳ ಚಿಕಿತ್ಸಾ ಧನ ಸಹಾಯವನ್ನು ಸೋಮವಾರ ನೀಚರ್ಾಲಿನಲ್ಲಿ ಹಸ್ತಾಂತರಿಸಿ ಮಾತನಾಡಿದರು.
ಸಮಾಜದ ಇತರ ಕ್ಷೇತ್ರಗಳಿಗಿಂತ ಅತಿ ಶ್ರೇಷ್ಠವಾದ ಕೃಷಿ ವಿಭಾಗದ, ಕೃಷಿಕರ ಸವಾಲುಗಳಿಗೆ ಧ್ವನಿಯಾಗಿ ಕ್ಯಾಂಪ್ಕೋ ತನ್ನದೇ ಪಾತ್ರ ನಿರ್ವಹಿಸುತ್ತಿದೆ. ಯುವ ಸಮೂಹವನ್ನು ಕೃಷಿಯತ್ತ ಕರೆತರಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದ ಅವರು, ಕೃಷಿಕರಿಂದಲೇ ನಿಮರ್ಾಣಗೊಂಡ ಕ್ಯಾಂಪ್ಕೋ ಅವನದ್ದೇ ಸ್ವಂತ ಆಸ್ತಿ ಎಂದು ತಿಳಿಸಿದರು.
ಕ್ಯಾಂಪ್ಕೋದ ನಿದರ್ೇಶಕರಾದ ಕೋಂಕೋಡಿ ಪದ್ಮನಾಭ ಹಾಗು ಬಿ.ಶಿವಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿ ಈ ಸಂದರ್ಭ ಉಪಸ್ಥಿತರಿದ್ದರು. ಹಿರಿಯ ಪ್ರಬಂಧಕ ಎಂ.ಬಾಬು, ವಿಭಾಗೀಯ ಪ್ರಬಂಧಕ ಪಿ.ವಿ.ಮುರಳೀಧರನ್ ಉಪಸ್ಥಿತರಿದ್ದರು.