HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಐವತ್ತರ ತಾರುಣ್ಯದಲ್ಲಿ ಐಲದ ತರುಣ ಕಲಾವೃಂದ- ಸಂಭ್ರಮದ ತರುಣ ಸುವರ್ಣ ಪರ್ವ ವೈವಿಧ್ಯಮಯ ಸರಣಿ ಕಾರ್ಯಕ್ರಮಗಳಿಂದ ಆಚರಣೆ ಬರಹ: ಹ.ಸು.ಒಡ್ಡಂಬೆಟ್ಟು: ಉಪ್ಪಳ: ಸಾಮಾಜಿಕ ಸಂಘ ಸಂಸ್ಥೆಗಳು ಸಮಾಜಮುಖಿಯಾದ ಜನಪರ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಾಗ ಅದು ಸಮಾಜದ ಸರ್ವತೋಮುಖ ಅಭಿವೃಧ್ಧಿಗೆ ನೆರವಾಗುವುದರ ಜೊತೆಗೆ ಆ ಪ್ರದೇಶದ ಜನರ ಮನದಲ್ಲುಳಿದು ತನ್ಮೂಲಕ ಅದರ ಮತ್ತಷ್ಟು ಬೆಳವಣಿಗೆಗೆ ಅವರೇ ಮುತುವಜರ್ಿ ವಹಿಸುವುದರ ಮೂಲಕ ಮುಂದೊಂದು ದಿನ ಅದೇ ಸಂಸ್ಥೆಯು ಸಮಾಜದ ಆಸ್ತಿಯೆನಿಸಿಕೊಳ್ಳುವುದು. ಇದಕ್ಕೆ ಸ್ಪಷ್ಟ ಉದಾಹರಣೆ ಐಲ ಪರಿಸರದಲ್ಲಿ ಕಳೆದ 49 ವರ್ಷಗಳಿಂದ ಜನಪರ ಯೋಜನೆಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಯಾವುದೇ ವರ್ಗ ಭೇದವಿಲ್ಲದೆ ನಡೆಸಿಕೊಂಡು ಆ ಪ್ರದೇಶದ ಜನರ ಮೆಚ್ಚುಗೆಗಳಿಸಿರುವ ತರುಣ ಕಲಾವೃಂದ ಐಲ. ಸುಮಾರು 50 ವರ್ಷಗಳ ಹಿಂದೆ ಐಲ ಶ್ರೀ ದುಗರ್ಾಪರಮೇಶ್ವರಿಯ ಅನುಗ್ರಹದೊಂದಿಗೆ ಮಾತೆಯನ್ನು ಆರಾಧಿಸುವುದರ ಜೊತೆ ಜೊತೆಗೆ ಕಲಾಮಾತೆಯನ್ನು ಪೂಜಿಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಪೋಶಿಸುವ ಮಹತ್ತರವಾದ ಧ್ಯೆಯೋದ್ದೇಶದಿಂದ ಸುಮಾರು 12 ತರುಣರು ದಿ. ಬಟ್ಯಪ್ಪ ಮಾಸ್ಟರ್ ಅವರ ನಿದರ್ೇಶನದಂತೆ ತರುಣ ಕಲಾವೃಂದ ನಾಮಧೇಯದಿಂದ ಈ ಸಂಘಕ್ಕೆ ಚಾಲನೆಯನ್ನು ಕೊಟ್ಟರು. ಸೌಕರ್ಯಗಳ ಮಿತಿಯಿದ್ದ ಆ ಕಾಲಘಟ್ಟದಲ್ಲಿ ಮಾತೆ ದುಗರ್ಾಪರಮೇಶ್ವರಿ ಅವಭೃತ ಸ್ನಾನಕ್ಕೆ ಕುಬಣೂರು ಶಾಸ್ತಾವು ದೇವಸ್ಥಾನಕ್ಕೆ ತೆರಳಿ ಮರಳುವಾಗ ಮುಂಜಾವಾಗುತ್ತಿತ್ತು. ಈ ಸಮಯವನ್ನು ಸದುಪಯೋಗಿಸುವ ನಿಟ್ಟಿನಲ್ಲಿ ಊರ ಹಾಗೂ ಪರವೂರ ಕಲಾಭಿಮಾನಿಗಳು ಸೇರಿ ಐಲ ಪರಿಸರದಲ್ಲಿ ತುಳು ನಾಟಕವನ್ನು ಅಭಿನಯಿಸುವುದು ರೂಢಿಯಾಗಿ ಬಂದು ಅದು ಈ ಕಲಾವೃಂದಕ್ಕೆ ವಾಷರ್ಿಕೋತ್ಸವದ ಸಂಭ್ರಮವಾಗುತ್ತಿತ್ತು. ಕೇವಲ ಮನೋರಂಜನೆಗಷ್ಟೇ ತನ್ನ ಚಟುವಟಿಕೆಗಳನ್ನು ಸೀಮಿತಗೊಳಿಸದೆ ಧಾಮರ್ಿಕ ಕಾರ್ಯಗಳನ್ನು ನಡೆಸುವುದರ ಮೂಲಕ ಭಕ್ತರ ಮನದಲ್ಲಿ ಅಭಿಮಾನದ ಬೇರೂರುವಂತೆ ಮಾಡಿದೆ. ತನ್ನ ಸದಸ್ಯರ ಅವಿರತ ಶ್ರಮದಿಂದ ಊರ ಹಾಗೂ ಪರವೂರ ಮಹಾದಾನಿಗಳ ನೆರವಿನಿಂದ ತನ್ನ 48ನೇ ವರ್ಷಚಾರಣೆಯ ಸಂದರ್ಭದಲ್ಲಿ ಸುಸಚ್ಚಿತವಾದ ತರುಣ ಸೌಧವನ್ನು ಕಟ್ಟುವುದರ ಜೊತೆಗೆ ಅದರ ಐದು ಕೊಠಡಿಗಳನ್ನು ಸಾರ್ವಜನಿಕ ಉಪಯೋಗಕ್ಕೆ ನೀಡಿ ತಮ್ಮ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ (2017-2018) ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವ ಈ ಸಂಸ್ಥೆ 37 ಸದಸ್ಯರನ್ನು ಹೊಂದಿದ್ದು ಸಹಸ್ರ ಅಭಿಮಾನಿಗಳನ್ನು ಗಳಿಸಿರುವುದು ಇದರ ಸದಸ್ಯರಿಗೆ ಮಾತ್ರವಲ್ಲದೆ ಈ ಊರಿಗೇ ಹೆಗ್ಗಳಿಕೆ. ಕೇವಲ ಆಡಂಬರದ ಆಚರಣೆಗೆ ಸೀಮಿತಗೊಳಿಸದೆ ವಿಶೇಷ ಹಾಗೂ ವಿಶಿಷ್ಟವಾದ ಹಲವು ವೈವಿದ್ಯ ಪೂರ್ಣ ಸರಣಿ ಕಾರ್ಯಕ್ರಮಗಳನ್ನು ಈ ವರ್ಷದುದ್ದಕ್ಕೂ ಆಯೋಜಿಸುವುದರ ಮೂಲಕ "ತರುಣ ಸುವರ್ಣ ಪರ್ವ" ವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ತರುಣ ಸುವರ್ಣ ಪರ್ವವು ಕಳೆದ ಏಪ್ರಿಲ್ 17 ರಂದು ಸಂಸ್ಥೆಯ 49ನೇ ವರ್ಾಕೋತ್ಸವದಿಂದ ಆರಂಭಗೊಂಡು ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಧಾಮರ್ಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಆರೋಗ್ಯ, ಕ್ರೀಡೆ, ಸಾಹಿತ್ಯ ಹೀಗೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಏ. 22 ರಂದು ಸಮಾರೋಪಗೊಳ್ಳಲಿದೆ. ಈಗಾಗಲೇ 'ತರುಣ ಸುವರ್ಣ ಪರ್ವ' ಲಾಂಛನ ಹಾಗೂ ಶೀಷರ್ಿಕೆ ಹಾಡು ಬಿಡುಗಡೆಗೊಳಿಸಿ ತನ್ನ ಸರಣಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ. ಮುಂದಿನ ಕಾರ್ಯಕ್ರಮಗಳ ಯೋಜನೆಗಳ ರೂಪುರೇಷೆಗಳನ್ನು ಮಾಡುವುದಕ್ಕಾಗಿ ಸಂಘದ ಸದಸ್ಯರು ತಮ್ಮ ಹೆಚ್ಚಿನ ಕಾಲವನ್ನು ಈ ಜನಪರ ಯೋಜನೆಗೆ ಮೀಸಲಾಗಿರಿಸಿದ್ದಾರೆ. ಆ ಮೂಲಕ 'ತರುಣ ಸುವರ್ಣ ಪರ್ವ'ವನ್ನು ತಮ್ಮ ಜೀವನದ ಪುಟಗಳಲ್ಲಿ ಸುವರ್ಣ ಅಕ್ಷರದಿಂದ ದಾಖಲಿಸುವ ಹುಮ್ಮಸ್ಸಿನಲ್ಲಿರುವುದು ಕಂಡುಬರುತ್ತಿದೆ. ತರುಣ ಕಲಾವೃಂದ ಐಲ ಇದರ ತರುಣ ಸುವರ್ಣ ಪರ್ವದ ಸರಣಿ ಕಾರ್ಯಕ್ರಮಗಳು. ಈ ವರೆಗೆ ನಡೆದ ಕಾರ್ಯಕ್ರಮಗಳು 1. 'ತರುಣ ಸುವರ್ಣ ಪರ್ವ' ಲಾಂಛನ ಮತ್ತು ಶರ್ೀಕೆ ಹಾಡು ಬಿಡುಗಡೆ. ತಾರೀಕು 17.04.2017 ರಂದು ಅಂಬಾರು ಶ್ರೀ ಸದಾಶಿವ ಕ್ಷೇತ್ರದ ಆಡಳಿತ ಮೊಕ್ತೇಸರ ಕೊರಗಪ್ಪ ಶೆಟ್ಟಿ ಅಧ್ಯಕ್ಷತೆಯಲ್ಲಿ ನ್ಯಾಯವಾದಿ ಶ್ರೀ ಶ್ರೀಕಾಂತ್ ಬಿಡುಗಡೆಗೊಳಿಸಿದ ಈ ಸಭೆಯಲ್ಲಿ ಕೃಷ್ಣಪ್ಪ ಐಲ ಡಿ. ದಾಮೋದರನ್, ಲಕ್ಷ್ಮಣ ಕುಂಬಳೆ, ಬಿ.ಪಿ ಆಚಾರ್ ಮತ್ತು ಹರೀಶ ಸುಲಾಯ ಒಡ್ಡಂಬೆಟ್ಟು ಉಪಸ್ಥಿತರಿದ್ದರು. 2. ತರುಣ ಸುವರ್ಣ ಪರ್ವ ಉದ್ಘಾಟನಾ ಸಮಾರಂಭ ತಾರೀಕು 15/08/2017 ರಂದು ಐಲ ಶ್ರೀ ದುಗರ್ಾ ಪರಮೇಶ್ವರಿ ಕಲಾಭವನದಲ್ಲಿ ಬ್ರಹ್ಮ ಶ್ರೀ ವೇದ ಮೂತರ್ಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೀಲೇಶ್ವರ ಅವರು ಉದ್ಘಾಟನೆಗೊಳಿಸಿದ ಈ ಸಭಾ ಕಾರ್ಯಕ್ರಮದಲ್ಲಿ ಕೋಡಿಬೈಲು ನಾರಾಯಣ ಹೆಗ್ಡೆ ಅಧ್ಯಕ್ಷರಾಗಿದ್ದು ಚಲನ ಚಿತ್ರ ನಟರುಗಳಾದ ಶ್ರೀ ಸುಂದರರಾಜ್, ಶ್ರೀ ಕಾಸರಗೋಡು ಚಿನ್ನ, ಯಕ್ಷ ಧ್ರುವ ಪೌಂಡೇಶನ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷರಾದ ಶ್ರೀ ಸತೀಶ ಶೆಟ್ಟಿ ಪಟ್ಲ, ಶ್ರೀ ಶ್ರೀಧರ ಶೆಟ್ಟಿ ಮುಟ್ಟ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕರುಗಳಾದ ಶ್ರೀ ಬೊಳ್ಳಾರ್ ನಾರಾಯಣ ಶೆಟ್ಟಿ, ಶ್ರೀಮತಿ ಪ್ರೇಮಲತಾ ಅಂಬಾರು, ಶ್ರೀ ಮತಿ ಪ್ರೇಮಲತಾ ಸಿ. ಐಲ, ಶ್ರೀಮತಿ ಶಾರದಾ ಎ. ಮತ್ತು ಶ್ರೀ ಬಾಲಕೃಪ್ಣ ಶೆಟ್ಟಿ "ುನಾರ್ ಇವರಿಗೆ ಗುರುವಂದನೆ ಮಾಡಲಾುತು. ಕು. ಸರಿತಾ. ಬಿ. ಬೀರ್ನಕೋಡಿ ಇವಳಿಗೆ "ದ್ಯಾಥರ್ಿ ವೇತನ ಮತ್ತು 5 ಶಾಲೆಗಳ ಆಯ್ದು 50 "ದ್ಯಾಥರ್ಿಗಳಿಗೆ ಪುಸ್ತಕ "ತರಿಸಲಾುತು. ಸಾಂಸ್ಕ್ರತಿಕ ಕಾರ್ಯಕ್ರಮದಂಗವಾಗಿ ಹೆಸರಾಂತ ಕಲಾ"ದರಿಂದ ಯಕ್ಷಗಾನ ನಾಟ್ಯ ವೈಭವ ಜರಗಿತು. 3. ಹೂ"ನ ರಂಗೋಲಿ ಸ್ಪಧರ್ೆ. ನವರಾತ್ರಿ ಉತ್ಸವ ಸಂದರ್ಭದಲ್ಲಿ ಶ್ರೀ ದುಗರ್ಾಪರಮೇಶ್ವರಿ ಕ್ಷೇತ್ರ ಐಲದಲ್ಲಿ ಮಂಗಲ್ಪಾಡಿ ಪಂಚಾಯತ್ ಮಟ್ಟದ ಹೂ"ನ ರಂಗೋಲಿ ಸ್ಪಧರ್ೆಯನ್ನು ತಾರೀಕು 24/09/2017 ರಂದು ನಡೆಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಮತ್ತು ಸ್ಮರಣಿಕೆ ನೀಡಲಾುತು. 4. ಗೂಡು ದೀಪ ಸ್ಪಧರ್ೆ ತಾರೀಕು 19/10/2017 ರಂದು ಐಲ ದೇವಸ್ಥಾನದ ದೀಪಾವಳಿ ಉತ್ಸವ ಸಂದರ್ಭದಲ್ಲಿ ಗೂಡು ದೀಪ ಸ್ಪಧರ್ೆಯನ್ನು ಏರ್ಪಡಿಸಿ ಬಹುಮಾನ ಮತ್ತು ಸ್ಮಾರಣಿಕೆಗಳನ್ನು ನೀಡಲಾುತು. 5. ಸ್ವಚ್ಛತಾ ಕಾರ್ಯಕ್ರಮ ತಾ. 02/10/2017 ರಂದು ಇತರ ಸಂಘ ಸಂಸ್ಥೆಗಳ ಒಗ್ಗೂಡು"ಕೆುಂದ ಕ್ಷೇತ್ರದ ಪರಿಸರದಿಂದ ನಯಾಬಜಾರ್ ತನಕ ಸ್ವಚ್ಛತಾ ಕಾರ್ಯ ನಡೆಸಲಾುತು. 6. ಅಕ್ಕಿ "ತರಣೆ ಅಶಕ್ತ 50 ಕುಟುಂಬಗಳಿಗೆ ಜಾತಿ ಭೇದ"ಲ್ಲದೆ ಅಕ್ಕಿ ಮತ್ತು ಇತರ ಸಾಮಾಗ್ರಿಗಳನ್ನು "ತರಿಸಲಾುತು. 7. ಅನಾಥಾಲಯ ಭೇಟಿ ಸಾಂತ್ವನ, ಸಹಭೋಜನ, ಸ"ನುಡಿ ಮತ್ತು ಸಹಾಯಹಸ್ತ ಆಶಯಗಳನ್ನಿಟ್ಟುಕ್ಕೊಂಡು ಸಂಘದ ಸದಸ್ಯರು ತಾರೀಕು 5/11/2017 ರಂದು ದಿ| ಐಲ ಪಡುಮನೆ ರಘು ಬೆಳ್ಚಪ್ಪಾಡರ ಸ್ಮರಣಾರ್ಥವಾಗಿ ಸಾು ನಿಕೇತನ ಸೇವಾಶ್ರಮ ದೈಗೋಳಿ ಅನಾಥಾಲಯವನ್ನು ಭೇಟಿ ಮಾಡಿ ಸಹಾಯ ನೀಡಿದರು. 8. ಉಚಿತ ವೈದ್ಯಕೀಯ ತಪಸಣಾ ಶಿಬಿರ ಕೆ.ಎಮ್. ಸಿ ಆಸ್ಪತ್ರೆ ಅತ್ತಾವರ ಇವರ ಸಹಯೋಗದೊಂದಿಗೆ 26/11/2017 ರಂದು ಜರಗಿದ ಉಚಿತ ವೈದ್ಯಕೀಯ ಶಿಬಿರದಲ್ಲಿ ಸುಮಾರು 150ಕ್ಕೂ ಹೆಚ್ಚು ಜನರ ಪಾಲ್ಗೊಂಡು ಲಾಭ ಪಡೆದರು. 9. ಸುವಣರ್ಾವಧಿ ಸಂಕೀರ್ತನೆ ತಾರೀಕು 01/12/2017 ರಿಂದ 03/13/2017 ರವರೆಗೆ ಶ್ರೀ ಐಲ ದುಗರ್ಾ ಪರಮೇಶ್ವರಿ ಕ್ಷೇತ್ರದಲ್ಲಿ ""ಧ ಭಜನಾ ತಂಡದವರ ಸಹಯೋಗದೊಂದಿಗೆ ಸುವಣರ್ಾವಧಿ ಸಂಕೀರ್ತನೆ 50 ತಾಸುಗಳ ನಿರಂತರ ಭಜನಾ ಕಾರ್ಯಕ್ರಮ ನಡೆಯಲಿರುವುದು. 10. ಸಾಮೂ"ಕ "ವಾಹ ಸಮಾರಂಭ ತಾರೀಕು 03/12/2017 ರಂದು 11.40ರ ಕುಂಭ ಲಗ್ನದಲ್ಲಿ ಸಾಮೂ"ಕ "ವಾಹ ಸಮಾರಂಭವು ಊರ ಹಾಗೂ ಪರವೂರ ಜನರ ಸಮ್ಮುಖದಲ್ಲಿ ಜರಗಲಿರುವುದು. ಈ ಸಂಧರ್ಭದಲ್ಲಿ ಅನುಗ್ರಹ ಆಶೀವರ್ಾದ ಕಾರ್ಯಕ್ರಮ ನಡೆಯಲಿದ್ದು ಅಧ್ಯಕ್ಷತೆಯನ್ನು ಕೋಡಿ ಬೈಲು ಶ್ರೀ ನಾರಾಯಣ ಹೆಗ್ಡೆ ವ"ಸಲಿದ್ದು, ಬೊಳ್ಳಾರು ನಾರಾಯಣ ಶೆಟ್ಟಿ, ಶ್ರೀ. ಸಿ. ಎನ್, ಕೃಷ್ಣಪ್ಪ ಐಲ, ಶ್ರೀಗೋಪಾಲ ಬಂದ್ಯೋಡು, ಶ್ರೀ ಶ್ರೀಧರ ಶೆಟ್ಟಿ ಮುಟ್ಟಂ, ಮತ್ತು ಶ್ರೀ ಚಂದ್ರ ಬೆಳ್ಚಾಪ್ಪಾಡರು ಶುಭ ನುಡಿಯಲಿದ್ದಾರೆ. 11. ರಾಮಾಯಣ ಮಹಾಭಾರತ ರಸ ಪ್ರಶ್ನೆ ಕಾರ್ಯಕ್ರಮ 5ನೇ ತರಗತಿುಂದ 12ನೇ ತರಗತಿಯ ವರೆಗಿನ ವಿದ್ಯಾಥರ್ಿಗಳಿಗೆ 02/12/2017 ರಂದು 2 ಗಂಟೆಗೆ ಐಲ ಶ್ರೀ ದುಗರ್ಾಪರಮೇಶ್ವರಿ ಕಲಾಭವನದಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿರುವುದು. 12. ತಿರುವಾದಿರ ನೃತ್ಯ ಪ್ರದರ್ಶನ ತಾರೀಕು 03/12/2017 ರಂದು ರಾತ್ರಿ ಗಂಟೆ 7 ರಿಂದ ಶ್ರೀ ದುಗರ್ಾ ಪರಮೇಶ್ವರಿ ಮಹಿಳಾ ಸಂಘದ ಮಾತೆಯರಿಂದ ತಿರುವಾದಿರ ನೃತ್ಯ ಪ್ರದರ್ಶನ ಜರಗಲಿರುವುದು. ಮುಂಬರುವ ಕಾರ್ಯಕ್ರಮಗಳು: ಫೆಬ್ರವರಿ ತಿಂಗಳಲ್ಲಿ ತರುಣ ಕ್ರಿಡೋತ್ಸವ ಜರಗಲಿರುವುದು ಮಾಚರ್್ ಹಾಗೂ ಎಪ್ರಿಲ್ ತಿಂಗಳ ಕಾರ್ಯಕ್ರಮಗಳ ಯೋಜನೆಯು ನಡೆಯುತ್ತಿದ್ದು ಎಪ್ರಿಲ್ 22, 2018ರಂದು ತರುಣ ಸುವರ್ಣ ಪರ್ವದ ಸಂಭ್ರಮವು ಅನೇಕ ಗಣ್ಯ ಅತಿಥಿಗಳ ಪಾಲ್ಗೊಳ್ಳು"ಕೆುಂದ ಬಹಳ ಅದ್ದೂರಿಯಾಗಿ ನಡೆಸಲು ಸಂಘದ ಸದಸ್ಯರು ಒಮ್ಮತದಿಂದ ಶ್ರ"ುಸುತ್ತಿದ್ದಾರೆ. ತನ್ನ ಹುಟ್ಟಿನಲ್ಲಿ ಸಾರ್ಥಕ್ಯವನ್ನು ಕಂಡ ತರುಣ ಕಲಾವೃಂದ 'ತರುಣ ತನ್ಮಯತೆಯ ತವರು' ಎನ್ನುವುದರಲ್ಲಿ ಯಾವುದೇ ಸಂದೇಹ"ಲ್ಲ. ಸಮಾಜಮುಖಿ ಸೇವೆಯಲ್ಲಿ ತನ್ನ 50 ಸಂವತ್ಸರಗಳನ್ನು ಪೂರೈಸುತ್ತಿರುವ ಈ "ತರುಣರ ತನ್ಮಯತೆಯ ತವರು" ಬೆಳೆದು ಸೂರ್ಯಚಂದ್ರರಿರುವಷ್ಟು ಕಾಲ ತನ್ನ ಸೇವನೆಯನ್ನು ಸಮಾಜಕ್ಕೆ ಒದಗಿಸುವಂತಾಗಲಿ ಎಂದು ಈ ಸಂದರ್ಭದಲ್ಲಿ ಎಲ್ಲರೂ ಹಾರೈಸೋಣ. ಬರಹ: ಹರೀಶ್ ಸುಲಾಯ ಒಡ್ಡಂಬೆಟ್ಟು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries