ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ಪದ್ಮಾವತಿ ವಿವಾದ: ಬನ್ಸಾಲಿ, ಮಾಹಿತಿ ಮತ್ತು ಪ್ರಸಾರ, ಸಿಬಿಎಫ್ಸಿಗೆ ಸಂಸತ್ ಸಮಿತಿ ಸಮನ್ಸ್
ನವದೆಹಲಿ: ತೀವ್ರ ವಿವಾದಕ್ಕೆ ಗುರಿಯಾಗಿರುವ ಪದ್ಮಾವತಿ ಚಿತ್ರಕ್ಕೆ ಸಂಬಂಧಿಸಿದಂತೆ ಚಿತ್ರದ ನಿದರ್ೇಶಕ ಸಂಜಯ್ ಲೀಲಾ ಬನ್ಸಾಲಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಕೇಂದ್ರ ಸೆನ್ಸಾರ್ ಮಂಡಳಿಯ ಅಧಿಕಾರಿಗಳಿಗೆ ಸಂಸತ್ ಸಮಿತಿ ಸಮನ್ಸ್ ಜಾರಿ ಮಾಡಿದೆ.
ಪದ್ಮಾವತಿ ಚಿತ್ರದ ವಿವಾದ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಲುವಾಗಿ ಸಂಸತ್ ಸಮಿತಿ ಮುಂದೆ ಹಾಜರಾಗುವಂತೆ ಸಂಜಯ್ ಲೀಲಾ ಬನ್ಸಾಲಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಕೇಂದ್ರ ಸೆನ್ಸಾರ್ ಮಂಡಳಿಯ ಅಧಿಕಾರಿಗಳಿಗೆ ಸಮನ್ಸ್ ನೀಡಲಾಗಿದೆ ಎಂದು ಸಮಿತಿಯ ಮುಖ್ಯಸ್ಥ ಅನುರಾಗ್ ಠಾಕೂರ್ ಹೇಳಿದ್ದಾರೆ.
ದಿಪೀಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರದ ಮೇಲೆ ಪ್ರತಿಕ್ರಿಯಿಸದಂತೆ ರಾಜಕಾರಣಿಗಳಿಗೆ ಸುಪ್ರೀಂಕೋಟರ್್ ತರಾಟೆಗೆ ತೆಗೆದುಕೊಂಡಿತ್ತು. ವಿಷಯ ಇನ್ನೂ ಸೆನ್ಸಾರ್ ಮಂಡಳಿಯ ಅಂಗಳದಲ್ಲಿಯೇ ಇರಬೇಕಾದರೆ ಸಾರ್ವಜನಿಕ ಹುದ್ದೆಯಲ್ಲಿರುವವರು ಚಿತ್ರಕ್ಕೆ ಪ್ರಮಾಣ ಪತ್ರ ನೀಡುವುದರ ಬಗ್ಗೆ ಹೇಗೆ ಮಾತನಾಡಲು ಸಾಧ್ಯ ಎಂದು ಪ್ರಶ್ನಿಸಿತ್ತು.
ಮುಖ್ಯಮಂತ್ರಿಗಳು ಸೇರಿದಂತೆ ಹಲವು ರಾಜಕೀಯ ಮುಖಂಡರು ಪದ್ಮಾವತಿ ಚಿತ್ರದ ಕುರಿತಂತೆ ಸಾರ್ವಜನಿಕ ಹೇಳಿಕೆಗಳನ್ನು ನೀಡಿದ್ದರು. ಹೆಚ್ಚಿನವರು ಪದ್ಮಾವತಿ ಚಿತ್ರದ ವಿರುದ್ಧವಾಗಿ ಹೇಳಿಕೆಗಳನ್ನು ನೀಡಿದ್ದರು.
ಪದ್ಮಾವತಿ ಚಿತ್ರದ ಬಿಡುಗಡೆಗೂ ಮುನ್ನವೇ ಅಭಿಪ್ರಾಯ ವ್ಯಕ್ತಪಡಿಸದಂತೆ ರಾಜಕಾರಣಿಗಳಿಗೆ ಸೂಚನೆ ನೀಡಲಾಗಿದ್ದು, ಚಿತ್ರ ಬಿಡುಗಡೆಗೂ ಮುನ್ನವೇ ಅಭಿಪ್ರಾಯ ವ್ಯಕ್ತಪಡಿಸಿ ಹೇಳಿಕೆ ನೀಡುವುದು ಸರಿಯಲ್ಲ ಇನ್ನೂ ಸೆನ್ಸಾರ್ ಬೋಡರ್್ ನಿಂದ ಚಿತ್ರ ಪ್ರಮಾಣೀಕೃತಗೊಳ್ಳಬೇಕಿದೆ ಎಂದು ಸವರ್ೋಚ್ಛ ನ್ಯಾಯಾಲಯ ಹೇಳಿದೆ.