ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 28, 2017
ಉಚಿತ ಹೋಮಿಯೋ ವೈದ್ಯಕೀಯ ಶಿಬಿರ
ಬದಿಯಡ್ಕ : ಕೇರಳ ಹಿರಿಯ ನಾಗರಿಕರ ವೇದಿಕೆಯ ಮಾರ್ಪನಡ್ಕ ಘಟಕದ ನೇತೃತ್ವದಲ್ಲಿ ಕುಂಬ್ಡಾಜೆ ಪಂಚಾಯತು ಸಭಾಂಗಣದಲ್ಲಿ ಭಾನುವಾರ ಉಚಿತ ಹೋಮಿಯೋ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿತ್ತು.
ಕುಂಬ್ಡಾಜೆ ಗ್ರಾಮಪಂಚಾಯತು ಉಪಾಧ್ಯಕ್ಷ ಆನಂದ ಕೆ.ಮವ್ವಾರು ಉದ್ಘಾಟಿಸಿ ಮಾತನಾಡುತ್ತಾ, ಮಾರ್ಗದರ್ಶಕರಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಹಿರಿಯರು ನಮಗೆಲ್ಲ ಆದರ್ಶವಾಗಿದ್ದಾರೆ ಎಂದರು. ಮಾರ್ಪನಡ್ಕ ಘಟಕದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬೆಳಿಂಜ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜೊತೆ ಕಾರ್ಯದಶರ್ಿ ರತ್ನಾಕರನ್ ಪಿಲಾತ್ತಡಂ, ಕೇರಳ ಗ್ರಾಮೀಣ ಬ್ಯಾಂಕ್ನ ನಿವೃತ್ತ ಪರಬಂಧಕ ಕೃಷ್ಣಮೂತರ್ಿ, ಉದ್ಯಮಿ ಲಕ್ಷ್ಮೀನಾರಾಯಣ ಭಟ್ ಶುಭಾಶಂಸನೆಗೈದರು. ಕಾರ್ಯದಶರ್ಿ ಬಾಬು ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಜೊತೆಕಾರ್ಯದಶರ್ಿ ಅಚ್ಚುತ ಮಾಸ್ತರ್ ವಂದಿಸಿದರು. ರಾಮಚಂದ್ರ ಭಟ್ ಉಪ್ಪಂಗಳ ನಿರೂಪಣೆಗೈದರು.
ಶಿಬಿರದಲ್ಲಿ 100ಕ್ಕೂ ಮಿಕ್ಕ ಸಾರ್ವಜನಿಕರು ಭಾಗವಹಿಸಿದ್ದರು. ಕಾರಡ್ಕ ಹೋಮಿಯೋ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಜ್ಯೋತಿ ಮಹೇಶ, ಎಣ್ಮಕಜೆ ಹೋಮಿಯೋ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಸ್ಮಿತಾ ತಪಾಸಣೆಯನ್ನು ನಡೆಸಿದರು. ಉಚಿತ ಜೌಷಧವನ್ನು ನೀಡಲಾಯಿತು.