ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 05, 2017
ಪ್ರಧಾನ ಮಂತ್ರಿಗೆ ಬರೆದ ಪತ್ರಕ್ಕೆ ಸ್ಪಂಧನೆ=ಮೇಲ್ಸೇತುವೆ ನಿಮರ್ಾಣಕ್ಕೆ ಆದೇಶ.
ಮಂಜೇಶ್ವರ: ಗಡಿ ಪ್ರದೇಶವಾದ ಮಂಜೇಶ್ವರ ಸನಿಹದ ಹೊಸಂಗಡಿಯು ಜನನಿಬಿಡ ಬೆಳೆಯುತ್ತಿರುವ ಪ್ರಮುಖ ಪೇಟೆಯಾಗಿ ಗುರುತಿಸಿಕೊಳ್ಳುತ್ತಿದ್ದು, ಮಂಜೇಶ್ವರ ಒಳ ಪೇಟೆಗೆ ದಿನನಿತ್ಯ ನಿರಂತರ ಸಂಚಾರ ನಡೆಸುವ ರಸ್ತೆ ಗಿಜಿಗುಟ್ಟುತ್ತದೆ. ನಾಲ್ಕು ಪೇಟೆಯ ದೇವಸ್ಥಾನವೆಂಬ ಖ್ಯಾತಿಯ ಮಂಜೇಶ್ವರ ಶ್ರೀಮದ್ ಅನಂತೇಶ್ವರ ಕ್ಷೇತ್ರ, ಅನಂತೇಶ್ವರ ವಿದ್ಯಾಸಂಸ್ಥೆಗಳು, ಕಾಸರಗೋಡಿನ ಏಕೈಕ ಜೈನ ಬಸದಿ, ರಾಷ್ಟ್ರಕವಿ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡು, ಬ್ಲಾ.ಪಂ. ಕಚೇರಿ, ಸರಕಾರಿ ಶಾಲೆ ಬಂಗ್ರಮಂಜೇಶ್ವರ, ಬಂಗ್ರಮಂಜೇಶ್ವರ ಕಾಳಿಕಾಪರಮೇಶ್ವರಿ ದೇವಸ್ಥಾನ, ಶ್ರೀಅಯ್ಯಪ್ಪ ಕ್ಷೇತ್ರ, ಮಸೀದಿ ಸಹಿತ ಹಲವಾರು ಜನಾವಶ್ಯಕ ಕೇಂದ್ರಗಳ ಸಹಿತ ನೂರಾರು ಕುಟುಂಬಗಳು ವಾಸಿಸುವ ಮಂಜೇಶ್ವರದ ಒಳ ಪೇಟೆಗೆ ಕಾಸರಗೋಡು ಕಡೆಯಿಂದ, ವಿಟ್ಲ, ಆನೆಕಲ್ಲು, ವಕರ್ಾಡಿ ಪ್ರದೇಶಗಳಿಂದ ಆಗಮಿಸುವ ಸಾವಿರಾರು ಮಂದಿ ಜನಸಾಮಾನ್ಯರಿಗೆ ಹೊಸಂಗಡಿಯ ಮೂಲಕ ಸಂಚರಿಸಬೇಕಿದ್ದು, ಹೊಸಂಗಡಿಯಲ್ಲಿರುವ ರೈಲ್ವೇ ಲೆವೆಲ್ ಕ್ರಾಸ್ ನಂಬ್ರ 289 ರ ಮೂಲಕ ಅದನ್ನು ದಾಟಿ ಪ್ರಯಾಣಿಸಬೇಕಾಗುತ್ತದೆ. ದಿನದ ಬಹುತೇಕ ಗಂಟೆಗೆ ಮೂರು ಬಾರಿಯಂತೆ ರೈಲು ಗಾಡಿಗಳು ಸಂಚರಿಸುವ ಸಂದರ್ಭ ಇಲ್ಲಿಯ ಲೆವೆಲ್ ಕ್ರಾಸಿಂಗ್ ಗೆ ತಡೆಯೊಡ್ಡುವುದರಿಂದ ನೂರಾರು ವಾಹನಗಳು ಕ್ರಾಸಿಂಗ್ ನ ಇಕ್ಕೆಲಗಳಲ್ಲೂ ಸರತಿಯಲ್ಲಿ ಗಂಟೆಗಟ್ಟಲೆ ಕಾಯುವ ಸಮಸ್ಯೆ ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ. ಇದು ಹಲವೊಮ್ಮೆ ತುತರ್ು ಚಿಕಿತ್ಸಾ ವಾಹನಗಳ ಸಂಚಾರಕ್ಕೆ, ಶಾಲಾ ಕಾಲೇಜು ಮತ್ತು ಸರಕಾರಿ ಕಾಯರ್ಾಲಯಗಳಿಗೆ ತೆರಳುವವರಿಗೆ ಸವಾಲಾಗಿ ಪರಿಣಮಿಸಿ ಬಿಡಿಸಲಾರದ ಒಗಟಾಗಿ ಪರಿಹಾರಗಳಿಲ್ಲದೆ ತೀವ್ರ ಆಕ್ರೋಶ, ಹತಾಶೆಗಳಿಗೆ ಕಾರಣವಾಗುತ್ತಿತ್ತು.ಸಂಬಂಧಪಟ್ಟ ಇಲಾಖೆಗೆ, ಸಂಸದರಿಗೆ ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ಉಪಕ್ರಮಗಳಿಲ್ಲದೆ ಪರಿಸ್ಥಿತಿ ಮುಂದುವರಿದಿತ್ತು.
ಮೇಲ್ಸೇತುವೆ ನಿಮರ್ಿಸಬೇಕೆಂದು ಆಗ್ರಹಿಸಿ ಈ ಬಗ್ಗೆ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ಥಳೀಯ ನಾಗರಿಕರಾದ ಶೇಖ್ ಮೊಯ್ದೀನ್ ಸಾಹಿಬ್ ಪತ್ರಬರೆದಿದ್ದರು. ಪತ್ರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಕಾಯರ್ಾಲಯದಿಂದ ಕೇರಳ ಸರಕಾರದ ಲೋಕೋಪಯೋಗಿ ಇಲಾಖೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿದರ್ೇಶನ ನೀಡಿದ್ದು, ಅದರ ಭಾಗವಾಗಿ ಕೇರಳ ರೋಡ್ಸ್ ಬಿಡ್ಜ್ ಡೆವೆಲಪ್ಮೆಂಟ್ ಕಾಪರ್ೋರೇಶನ್ ನಿಂದ ಮೊಯ್ದೀನ್ ಸಾಹೇಬರಿಗೆ ಸ್ಪಂಧನಾ ಪತ್ರ ಗುರುವಾರ ಲಭ್ಯವಾಗಿದೆ.
ಪತ್ರದಲ್ಲಿ ಸೂಚಿಸಿರುವಂತೆ ಹೊಸಂಗಡಿಯ ರೈಲ್ವೇ ಮೇಲ್ಸೇತುವೆ ನಿಮರ್ಾಣವನ್ನು ರಸ್ತೆ ಮತ್ತು ಸೇತುವೆ ನಿಮರ್ಾಣ ಕಾಪರ್ೋರೇಶನ್(ಆರ್ಬಿಡಿಸಿಕೆ) ಗೆ ನೀಡುವ ಬಗ್ಗೆ ಆದೇಶ ನೀಡಲಾಗಿದೆ ಎಂದು ಸೂಚಿಸಲಾಗಿದೆ.ಮೇಲ್ಸೇತುವೆ ನಿಮರ್ಾಣ ಕಾಮಗಾರಿಗೆ ಕರಡು ಯೋಜನೆ ತಯಾರಿಸಲಾಗಿದ್ದು, ನಿಮರ್ಾಣಕ್ಕೆ ಅಗತ್ಯ ನಿಧಿಯನ್ನು ಬಿಡುಗಡೆಗೊಳಿಸಲು ಸರಕಾರಕ್ಕೆ ಮನವಿ ನೀಡಲಾಗಿದ್ದು, ನಿಧಿ ಬಿಡುಗಡೆಯಾದ ಕೂಡಲೇ ಕಾಮಗಾರಿ ಆರಂಭಿಸಲು ಚಾಲನೆ ನೀಡಲಾಗುವುದೆಂದು ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯದಶರ್ಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.