ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 05, 2017
ಚೀನಾ ಬಗ್ಗುಬಡಿದು ಏಷ್ಯಾಕಪ್ ಗೆದ್ದ ಭಾರತದ ವನಿತೆಯರು
ಕಕಮಿಗಹರ(ಜಪಾನ್):: ಭಾರತದ ಮಹಿಳಾ ಹಾಕಿ ತಂಡ ಭಾನುವಾರದಂದು ಹೊಸ ಇತಿಹಾಸ ನಿಮರ್ಾಣ ಮಾಡಿದೆ. 13 ವರ್ಷಗಳ ಬಳಿಕ ಏಷ್ಯಾಕಪ್ ಗೆದ್ದು ಸಂಭ್ರಮಿಸಿದೆ.
ಇಲ್ಲಿನ ಕಕಮಿಗಹರ ಕವಾಸಕಿ ಮೈದಾನದಲ್ಲಿ ನಡೆದ ಏಷ್ಯಾಕಪ್ 2017ರ ಅಂತಿಮ ಹಣಾಹಣಿಯಲ್ಲಿ ಚೀನಾ ತಂಡವನ್ನು ಸೋಲಿಸಿ ಖಂಡಾಂತರ ಚಾಂಪಿಯನ್ ಎನಿಸಿಕೊಂಡ ಭಾರತ ತಂಡ ಮುಂದಿನ ವಿಶ್ವಕಪ್ ಗೆ ಅರ್ಹತೆ ಪಡೆದುಕೊಂಡಿದೆ.
ಗೋಲ್ಡನ್ ರಾಣಿ: ಭಾರತ ಮಹಿಳಾ ತಂಡದ ನಾಯಕಿ ರಾಣಿ ರಾಮ್ ಪಾಲ್ ಅವರು ಗೆಲುವಿನ ಗೋಲು ಬಾರಿಸಿದ್ದು ವಿಶೇಷವಾಗಿತ್ತು. ಪೆನಾಲ್ಟಿ ಶೂಟೌಟ್ ನಲ್ಲಿ ಗೋಲಿ ಸವಿತಾ ಅವರು ಸೇವ್ ಮಾಡಿದ್ದನ್ನು ಮರೆಯುವಂತಿಲ್ಲ. ಅಂತಿಮವಾಗಿ 5-4ರ ಅಂತರದಲ್ಲಿ ಭಾರತದ ವನಿತೆಯರು ಗೆಲುವಿನ ನಗೆ ಬೀರಿದರು.